Home / ಅಂತರಾಷ್ಟ್ರೀಯ (page 162)

ಅಂತರಾಷ್ಟ್ರೀಯ

ಬಿಜೆಪಿ ಪೌರೋಹಿತ್ಯದಲ್ಲಿ ಶಶಿಕಲಾ-ಅಣ್ಣಾಡಿಎಂಕೆ ವಿಲೀನ?

ಚೆನ್ನೈ : ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಬೆಂಗಳೂರು ಜೈಲಿನಿಂದ 2021ರ ಜನವರಿಯಲ್ಲಿ ಬಿಡುಗಡೆ ಆಗುವುದು ಖಚಿತವಾಗುತ್ತಿದ್ದಂತೆಯೇ, ರಾಜ್ಯ ರಾಜಕೀಯದಲ್ಲಿ ಹೊಸ ಚಟುವಟಿಕೆಗಳು ಗರಿಗೆದರಿವೆ. ಅಣ್ಣಾ ಡಿಎಂಕೆ ಪಕ್ಷ ಹಾಗೂ ಅಣ್ಣಾ ಡಿಎಂಕೆ ತೊರೆದಿದ್ದ ಶಶಿಕಲಾ ಅವರ ನಡುವೆ ಸಂಧಾನಕ್ಕೆ ಬಿಜೆಪಿ ಯತ್ನಿಸುತ್ತಿದ್ದು, ಉಭಯ ಬಣಗಳ ವಿಲೀನಕ್ಕೆ ಪ್ರಕ್ರಿಯೆಗೆ ಕೈಹಾಕಿದೆ. ಅಣ್ಣಾ ಡಿಎಂಕೆಯಿಂದ ಹೊರಬಂದು ಎಂಎಂಎಂಕೆ ಪಕ್ಷ ಸ್ಥಾಪಿಸಿರುವ ಶಶಿಕಲಾ ಬಂಧು ಟಿಟಿವಿ …

Read More »

ಇಂದು ಸಂಜೆ 4 ಗಂಟೆಗೆ ಸುರೇಶ್‌ ಅಂಗಡಿ ಅಂತ್ಯಕ್ರಿಯೆ

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ದೆಹಲಿಯಲ್ಲಿ ಸಂಜೆ 4ಕ್ಕೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ. ‘ಅವರ ಬೀಗರೂ ಆಗಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಬುಧವಾರ ತಡರಾತ್ರಿ ನವದೆಹಲಿ ತಲುಪಿದ ನಂತರ ಗುರುವಾರ ನಸುಕಿನ 3ರವರೆಗೂ ಚರ್ಚೆಯಾಯಿತು. ಅಂತಿಮವಾಗಿ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಪ್ರಕ್ರಿಯೆ ನೆರವೇರಲಿದೆ. ಮರಣೋತ್ತರ ಪರೀಕ್ಷೆಯ ನಂತರವೂ ಕೋವಿಡ್ ಪಾಸಿಟಿವ್ ಬಂದಿದೆ. …

Read More »

ಕೇಂದ್ರ ಸಚಿವ ಸುರೇಶ ಅಂಗಡಿ ಅಗಲಿಕೆಯಿಂದ ಅತೀವ ದುಃಖವಾಗಿದೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

  ಗೋಕಾಕ : ಕೇಂದ್ರ ರೈಲ್ವೇ ಖಾತೆಯ ಸಹಾಯಕ ಸಚಿವ ಸುರೇಶ ಅಂಗಡಿ ಅವರ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಬುಧವಾರ ರಾತ್ರಿ ಕೊರೋನಾ ಸೋಂಕಿನಿoದ ಮೃತಪಟ್ಟಿರುವ ವಿಷಯ ಕೇಳಿ ದಿಗ್ಭçಮೆಗೊಂಡೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ನಿಜಕ್ಕೂ ದುಃಖದ ಸಂಗತಿ.   ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 2004 ರಿಂದ ಸತತ 4 ಬಾರಿ ಸಂಸದರಾಗಿ …

Read More »

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ಇಂದು ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರಾಗಿಣಿ, ಸಂಜನಾಳ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಇಂದು ನಟಿ ರಾಗಿಣಿ, ಸಂಜನಾಳ ಜಾಮೀನು ಅರ್ಜಿ ವಿಚಾರಣೆ ಸಿಟಿ ಸಿವಿಲ್ ಆವರಣದ ಎನ್ ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದ್ದು, ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವಿಚಾರಣೆ ವೇಳೆ ರಾಗಿಣಿ ಅರ್ಜಿಗೆ ರಾಗಿಣಿ ಪರ ವಕೀಲರು ವಾದ ಮಂಡಿಸಿದ್ದರು. ಸಿಸಿಬಿ ಕೂಡ …

Read More »

ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸುರೇಶ ಅಂಗಡಿ ಕೊಡುಗೆ

ಬೆಳಗಾವಿ: ಬೆಳಗಾವಿ- ಕಿತ್ತೂರು-ಧಾರವಾಡ ನಡುವೆ ರೈಲು ಮಾರ್ಗ ನಿರ್ಮಿಸಲು ₹927.40 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಈಚೆಗೆ ತಿಳಿಸಿ, ಈ ಭಾಗಕ್ಕೆ ದೊಡ್ಡ ಕೊಡುಗೆ ತಂದಿರುವುದಾಗಿ ಹರ್ಷ ವ್ಯಕ್ತಪಪಡಿಸಿದ್ದರು. ’73 ಕಿ.ಮೀ. ಉದ್ದದ ಈ ಯೋಜನೆ ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ನಮ್ಮ ಸರ್ಕಾರ ಸ್ಪಂದಿಸಿದೆ. ಬೆಳಗಾವಿ, ದೇಸೂರು, ಕಣವಿಕರವಿನಕೊಪ್ಪ, ಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ, ಹುಲಿಕಟ್ಟಿ, …

Read More »

ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ : ರಾಜ್ಯ ಸರ್ಕಾರದಿಂದ ಕನ್ನಡಿಗರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸಲು ಆಂಧ್ರಪ್ರದೇಶ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಲು ಚಿಂತಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ಮಾಧುಸ್ವಾಮಿ, ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಸರ್ಕಾರದಿಂದ ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದರು. ಈ ಹಿಂದಿನ ಬಜೆಟ್ ನಲ್ಲಿ ಸರ್ಕಾರದಿಂದ ಸೌಲಭ್ಯ ಪಡೆಯುವ ಖಾಸಗಿ ಸಂಸ್ಥೆಗಳಲ್ಲಿನ ಸಿ ಮತ್ತು …

Read More »

871 ಔಷಧಗಳ ಬೆಲೆ ನಿಗದಿ: ಡಿವಿಎಸ್‌

ಹೊಸದಿಲ್ಲಿ: ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು (ಎನ್‌ಪಿಪಿಎ), 2015ರಲ್ಲಿ ಸಿದ್ಧಪಡಿಸಲಾಗಿದ್ದ “ಅತ್ಯಗತ್ಯ ಔಷಧಿಗಳ ರಾಷ್ಟ್ರೀಯ ದರ ನಿಗದಿ ಪಟ್ಟಿ’ಯಲ್ಲಿರುವ (ಎನ್‌ಎಲ್‌ಇಎಂ) 871 ಔಷಧಿಗಳ ಗರಿಷ್ಟ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ರಾಜ್ಯಸಭೆಗೆ ನೀಡಿರುವ ಲಿಖೀತ ಉತ್ತರದಲ್ಲಿ ಅವರು ಈ ವಿಷಯ ಉಲ್ಲೇಖೀಸಿದ್ದಾರೆ. ಇದೇ ವೇಳೆ, ಪ್ಲಾಸ್ಟಿಕ್‌ ಪ್ರಾಸೆಸಿಂಗ್‌ ಉದ್ಯಮಕ್ಕೆ ಉತ್ತೇಜನ ನೀಡಲು ಮಧ್ಯಪ್ರದೇಶದ ಟೋಮಟ್‌, ಬಿಲೌವಾ, …

Read More »

ಅಸಂಸದೀಯ ಪದ ಬಳಕೆ: ರಮೇಶ್‌ ಕುಮಾರ್‌- ಸುಧಾಕರ್ ಜಟಾಪಟಿ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಕಾಂಗ್ರೆಸ್‌ನ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಧ್ಯದ ಜಟಾಪಟಿಗೆ ವಿಧಾನಸಭೆ ಬುಧವಾರ ಸಾಕ್ಷಿಯಾಯಿತು. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಉತ್ತರ ನೀಡಿದ ಸುಧಾಕರ್‌, ‘ಸಚಿವರನ್ನು ಒಳಗೊಂಡ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿ ಪಿಪಿಇ ಕಿಟ್‌ಗಳ ಖರೀದಿ ಮಾಡಲಾಗುತ್ತಿದೆ’ ಎಂದರು. ಆಗ ಎದ್ದು ನಿಂತ ರಮೇಶ್‌ ಕುಮಾರ್‌, ‘ಪಿಪಿಇ ಕಿಟ್‌ಗಳ ಖರೀದಿ ದರದ ಏರಿಳಿತವನ್ನು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮೊದಲು ಕಿಟ್‌ಗಳನ್ನು ₹300ಕ್ಕೆ …

Read More »

ಕೆಪಿಸಿಸಿ_ಕಾರ್ಯಾಧ್ಯಕ್ಷ_ಸತೀಶ_ಜಾರಕಿಹೊಳಿ_ನೇತೃತ್ವದಲ್ಲಿ_ಸಹಕಾರ_ಸಚಿವ_ಟಿ_ಸೋಮಶೇಖರಗೆ_ಮನವಿ…

ಬೆಂಗಳೂರು- ಬೆಂಗಳೂರಲ್ಲಿ ಹಂಗೇನಿಲ್ಲ,ಎಲ್ಲಾರೂ ಸೇರ್ಕೊಂಡು ಮನವಿ ಕೊಡ್ತಾರೆ ಅನ್ನೋದು,ಪೋಟೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ. ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಆಡಳಿತ ಮಂಡಳಿಯ ನಿಯೋಗ ಇಂದು,ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಸಹಕಾರ,ಮತ್ತು ಎಪಿಎಂಸಿ ಸಚಿವ ಟಿ‌.ಸೋಮಸೇಖರ್ ಅವರು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತು. ಬೆಳಗಾವಿ ಎಪಿಎಂಸಿಯ ಬಾಕಿ ಉಳಿದಿರುವ ಆರ್ ಡಿ ಪಿ ಯೋಜನೆಯ 15 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು,ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿಗಾಗಿ,ಹೆಚ್ಚುವರಿಯಾಗಿ 15 ಕೋಟಿ …

Read More »

ಅಥಣಿ …..ಎರಡನೇ ದಿನ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ.

ಅಥಣಿ …..ಎರಡನೇ ದಿನ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ. ಅಥಣಿ: ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ತಳವಾರ ಸಮುದಾಯದ ಕೆಲವು ಬಾಂಧವರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪಟ್ಟನದ ಮಿನಿ ವಿಧಾನಸೌಧದಲ್ಲಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿವಾರ-ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದವರು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಗಲಿ ಎಂದು ಒತ್ತಾಯಿಸಿ ತಳವಾರ ಸಮಾಜದ ಮುಖಂಡ ರಾಜು ಜಮಖಂಡಿಕರ ಮುಂದಾಳತ್ವದಲ್ಲಿ ಪ್ರತಿಭಟನೆ ಕೈಗೊಂಡು, ವಿಧಾನಸಭಾ ಕಲಾಪ ಮುಗಿಯುವವರೆಗೆ …

Read More »