Home / ಅಂತರಾಷ್ಟ್ರೀಯ (page 159)

ಅಂತರಾಷ್ಟ್ರೀಯ

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (27-09-2020-ಭಾನುವಾರ)

ನಿತ್ಯ ನೀತಿ: ಹಿಂ ಸೆ ಮತ್ತು ದ್ವೇಷದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಅಹಿಂಸೆ ಮತ್ತು ಪ್ರೀತಿಯಿಂದಲೋಕವನ್ನೇ ಜಯಿಸಬಹುದು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ :ಭಾನುವಾರ, 27.09.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.12 ಚಂದ್ರ ಉದಯ ಬೆ.03.37 / ಚಂದ್ರ ಅಸ್ತ ರಾ.03.11 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ(ರಾ.07.47) ನಕ್ಷತ್ರ: …

Read More »

ಇನ್ನೂ 20 ವರ್ಷ ಕಾಂಗ್ರೆಸ್‍ನ್ನು ವಿಪಕ್ಷ ಸ್ಥಾನದಲ್ಲೇ ಕೂರಿಸುತ್ತೇನೆ : ಬಿಎಸ್ವೈ ಚಾಲೆಂಜ್

ಬೆಂಗಳೂರು,  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 145ರಿಂದ 150 ಸ್ಥಾನ ಗೆದ್ದು ಇನ್ನೂ 20 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರುವಂತೆ ಮಾಡುವುದು ನನ್ನ ಗುರಿ. ಅದನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದರು. ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಬಿಡಿಎ ವಸತಿ ಯೋಜನೆಯಲ್ಲಿ ನೀವು ಮಾಡಿರುವ ಆರೋಪ ಕುರಿತು ನೀವು ಸಿಬಿಐಗಾದರೂ ಹೋಗಿ, ಹೈಕೋರ್ಟ್‍ಗಾದರೂ ಹೋಗಿ, ಲೋಕಾಯುಕ್ತಕ್ಕಾದರೂ ಹೋಗಿ, …

Read More »

ಸಂಖ್ಯಾಬಲದ ಕೊರತೆಯಿಂದ ಬಿದ್ದುಹೋಯ್ತು ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ

ಬೆಂಗಳೂರು,   ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ಮೇಲೆ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸಂಖ್ಯಾಬಲದ ಕೊರತೆಯಿಂದ ಬಿದ್ದು ಹೋಗಿದೆ. ಅವಿಶ್ವಾಸ ನಿರ್ಣಯದ ಬಗ್ಗೆ ಎರಡನೇ ಪ್ರತಿಪಕ್ಷ ಜೆಡಿಎಸ್‍ ತಟಸ್ಥ ನಿಲುವು ಅನುಸರಿಸಿತ್ತು. ಅವಿಶ್ವಾಸವನ್ನು ವಿಭಜನೆಯ ಮತಕ್ಕೆ ಹಾಕುವುದಾದರೆ ಕೊರೊನಾ ಸೋಂಕಿಗೆ ಸಿಲುಕಿ ಚಿಕಿತ್ಸೆ ಪಡೆಯುತ್ತಿರುವ ಶಾಸಕರನ್ನು ಪಿಪಿಇ ಕಿಟ್‍ ಹಾಕಿಸಿ ವಿಧಾನಸಭೆಗೆ ಕರೆ ತರುವುದಾಗಿ ಬಿಜೆಪಿ ಹೇಳಿತ್ತು. ಈ ಕುರಿತಂತೆ ಬೆಳಗ್ಗೆ ನಡೆದ ಚರ್ಚೆಯಲ್ಲಿ …

Read More »

ಸಾಲಬಾಧೆ: ಅಂಜುಟಗಿಯಲ್ಲಿ ಯುವಕ ಆತ್ಮಹತ್ಯೆ

ವಿಜಯಪುರ: ಸಾಲಬಾಧೆ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ನಡೆದಿದೆ. ಪುಂಡಲೀಕ ಹಂಜಗಿ(23) ನೇಣುಬಿಗಿದುಕೊಂಡ ಯುವಕ. ಅನಾರೋಗ್ಯ ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲು ಪುಂಡಲೀಕ ಸಾಲಮಾಡಿದ್ದ. ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ ಮನನೊಂದು ನೇಣಿಗೆ ಶರಣಾಗಿದ್ದಾನೆ. ಈತ ಯುವ ರೈತನೂ ಆಗಿದ್ದ. ಆದರೆ ತಪ್ಪು ನಿರ್ಧಾರದಿಂದ ತಮ್ಮವರನ್ನು ಬಿಟ್ಟು ಹೊರಟಿದ್ದಾನೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಕುಡಿದ ಮತ್ತಿನಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಕುಡುಕ.. ಮುಂದೇನಾಯ್ತು?

ಬೆಳಗಾವಿ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಕುಡುಕ ಹುಚ್ಚಾಟ ಮೆರೆದಿರುವ ಘಟನೆ ಮೂಡಲಗಿ ತಾಲೂಕಿನ ಢವಳೇಶ್ವರ ಬಳಿಯ ಘಟಪ್ರಭಾ ನದಿ ಬಳಿ ನಡೆದಿದೆ. ಢವಳೇಶ್ವರ ಗ್ರಾಮದ ನಿವಾಸಿ ಹಾಲಪ್ಪ ಕುಡಿದ ಮತ್ತಿನಲ್ಲಿ ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಹುಚ್ಚಾಟ ಪ್ರದರ್ಶಿಸಿದ್ದಾನೆ. ನದಿಗೆ ಹಾರಿದ ಬಳಿಕ ಈಜಲು ಆಗದೆ ಸೇತುವೆ ಕೆಳಭಾಗದಲ್ಲಿ ತೆಲಿ ಹೋಗಿದ್ದಾನೆ. ಸೇತುವೆ ದಾಟಿ ಮತ್ತೆ ನದಿ ನೀರಿನಲ್ಲಿ ಮೇಲೆದಿದ್ದಾನೆ. ನೂರು ಮೀಟರ್ ನಷ್ಟು ಮುಂದೆ ಸಾಗಿ ಈಜಿ …

Read More »

ರಾಜ್ಯ ಸರ್ಕಾರದಿಂದ `ಶುಶ್ರೂಷಕಿಯರಿಗೆ’ ಶುಭಸುದ್ದಿ : ಮಾಸಿಕ 5 ಸಾವಿರ ರೂ. ಪ್ರೋತ್ಸಾಹ ಧನ

ಬೆಂಗಳೂರು : ರಾಜ್ಯ ಸರ್ಕಾರವು ಶುಶ್ರೂಷಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಆರೋಗ್ಯ ಮಾದರಿಯ ಕೇಂದ್ರಗಳಲ್ಲಿ ವೈಯಕ್ತಿಕ ಸುರಕ್ಷಾ ಸಾಧನೆ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರಿಗೆ ಮಾಸಿಕ 5 ಸಾವಿರ ರೂ. ಕೋವಿಡ್ ರಿಸ್ಕ್ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಶುಶ್ರೂಷಕರಿಗೆ ಮುಂದಿನ ಆರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಪ್ರೋತ್ಸಾಹಧನ ನೀಡಬೇಕಿದೆ. ಪ್ರೋತ್ಸಹ ಧನವು …

Read More »

ಕರ್ನಾಟಕ ಬಂದ್: ಕೇಂದ್ರದ ಮಸೂದೆ ವಿರುದ್ಧ ನಾಳೆ ರೈತ ಸಂಘಟನೆಗಳ ಕಹಳೆ!

ಬೆಂಗಳೂರು: ರಾಜ್ಯದಲ್ಲಿ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ತುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದ್ದು, ಸೋಮವಾರ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಬೃಹತ್ ಪ್ರತಿಭಟನೆಗೆ ರೈತ ಮುಖಂಡರು ಮುಂದಾಗಿದ್ದಾರೆ. ರೈತ ಸಂಘಟನೆಗಳಲ್ಲಿನ ಗೊಂದಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹೆಸರಿನಲ್ಲಿ ನಡೆದ ಸುದ್ದಿಗೋಷ್ಠಿ ಎಲ್ಲಾ ಗೊಂದಲಕ್ಕೆ ಫುಲ್ ಸ್ಟಾಪ್ ಇಟ್ಟಿದೆ. ರೈತ ಸಂಘಟನೆಗಳು ಸೋಮವಾರ ಕರ್ನಾಟಕ …

Read More »

ಜಿಲ್ಲಾಧಿಕಾರಿ ಕಾಳಜಿಗೆ ಮನಸೋತು ಮಗುವಿಗೆ ಡಿಸಿ ಹೆಸರಿಟ್ಟ ದಂಪತಿ

ಬಳ್ಳಾರಿ: ಜನ್ಮವಿತ್ತ ಮಗುವಿಗೆ ತಮ್ಮ ಜಿಲ್ಲೆಯ ಡಿಸಿ ಹೆಸರನ್ನೇ ನಾಮಕರಣ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ದಾವಣಗೆರೆಯಲ್ಲಿ ನೆಲೆಸಿರುವ ದಂಪತಿ ತಮ್ಮ ಮಗುವಿಗೆ ಡಿಸಿ ಎಸ್.ಎಸ್.ನಕುಲ್ ಅವರ ಹೆಸರನ್ನಿಟ್ಟಿದ್ದಾರೆ. ಮಹಿಳೆಯ ತವರು ಮನೆ ಬಳ್ಳಾರಿಯಾಗಿದ್ದರಿಂದ ಕಳೆದ ಎರಡು ತಿಂಗಳ ಹಿಂದೆ ಹೆರಿಗೆಗೆಂದು ಬಳ್ಳಾರಿಗೆ ಬಂದಿದ್ದರು. ಈ ವೇಳೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಈ ವೇಳೆ ಹೆರಿಗೆಯನ್ನು ಯಶಸ್ವಿಯಾಗಿಯೇ ಬಳ್ಳಾರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಮಾಡಿಸಲಾಗಿತ್ತು. ಅದೃಷ್ಟವಶಾತ್ ತಾಯಿಗೆ …

Read More »

ರಾಮನಗರ: ಹೇಗೇ ಸತ್ತರೂ ಕೊರೋನಾ ಸಾವೆಂದು ದಾಖಲಿಸಿ ಹಣ ಲೂಟಿ; ಜಿಲ್ಲಾಧಿಕಾರಿ ವಿರುದ್ಧ ಸಿಡಿದ ಜನ

ರಾಮನಗರ : ಕೊರೋನಾ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ ಸಹ ಕೊರೋನಾ ಪಾಸಿಟಿವ್ ಇದೇ ಎಂದು ಚಿಕಿತ್ಸೆ ನೀಡಿ ಹಣ ವಸೂಲಿ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು. ರಾಮನಗರ ತಾಲೂಕಿನ ಅಂಜನಾಪುರ ಗ್ರಾಮದ 65 ವರ್ಷದ ಹೊನ್ನಮ್ಮ ಎಂಬುವರು ಕೆಮ್ಮು ಹಾಗೂ ಇತರೆ ಆರೋಗ್ಯ ಸಮಸ್ಯೆಯಿಂದಾಗಿ ರಾಮನಗರ ಜಿಲ್ಲಾಸ್ಪತ್ರೆಗೆ 17-09-2020 ರಂದು ದಾಖಲಾಗಿದ್ದರು. ನಂತರ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ ಅವರನ್ನ ಕೋವಿಡ್ …

Read More »

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (26-09-2020-ಶನಿವಾರ)

ನಿತ್ಯ ನೀತಿ: ಸರ್ವರನ್ನು ಸಮಬುದ್ಧಿಯಿಂದ ಪ್ರೀತಿಸು. ಸರ್ವ ಕಾರ್ಯ ಗಳನ್ನು ಸಮರ್ಪಣ ಬುದ್ಧಿಯಿಂದ ಮಾಡು. ಚಿತ್ತದಲ್ಲಿ ಸತ್ಕಾಮನೆಗಳನ್ನು ಬಿತ್ತಿದರೆ ಸತಲವೇ ದೊರೆ ಯುತ್ತದೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ : ಶನಿವಾರ, 26.09.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.13 ಚಂದ್ರ ಉದಯ ಬೆ.02.38 / ಚಂದ್ರ ಅಸ್ತ ರಾ.02.18 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / …

Read More »