Breaking News
Home / new delhi / 92 ಹೊಸ ಕೊರೊನಾ ಪ್ರಕರಣ, ಭಾರತದಲ್ಲಿ 1071ಕ್ಕೆ ಏರಿಕೆ

92 ಹೊಸ ಕೊರೊನಾ ಪ್ರಕರಣ, ಭಾರತದಲ್ಲಿ 1071ಕ್ಕೆ ಏರಿಕೆ

Spread the love

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 92 ಪ್ರಕರಣಗಳು ಬಂದಿದ್ದು, ಒಟ್ಟು ಕೊರೊನಾ ಪೀಡಿತರ ಸಂಖ್ಯೆ 1071ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಅಗರ್‍ವಾಲ್ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಒಟ್ಟು 29 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಇಲ್ಲಿಯವರೆಗೆ ಕೊರೊನಾ ಸ್ಥಳೀಯವಾಗಿ ಹರಡುತ್ತಿದೆಯೇ ಹೊರತು ಸಮುದಾಯಕ್ಕೆ ಬಂದಿಲ್ಲ ಎಂದು ತಿಳಿಸಿದರು. ಕರ್ನಾಟಕದಲ್ಲಿ ಇಂದು 5 ಪ್ರಕರಣ ಬಂದಿದ್ದು, ಒಟ್ಟು ಕೊರೊನಾ ಪೀಡಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.

ಈ ಪೈಕಿ ತುಮಕೂರಿನ ರೋಗಿ 60ರ 13 ವರ್ಷದ ಮಗನಿಗೆ ಕೊರೊನಾ ಬಂದಿದೆ.  ನಂಜನಗೂಡಿನ ಫಾರ್ಮ ಕಂಪನಿಯ ಉದ್ಯೋಗಿಯಿಂದಾಗಿ  4 ಮಂದಿ ಸಹೋದ್ಯೋಗಿಗಳಿಗೆ ಕೊರೊನಾ ಬಂದಿದೆ.

ಭಾರತ ಸರ್ಕಾರ ದಿನಕ್ಕೆ ಒಂದು ಬಾರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರೆ ಕೋವಿದ್19ಇಂಡಿಯಾ ಆಯಾ ರಾಜ್ಯಗಳ ಅಧಿಕೃತ ಪ್ರಕಟಣೆಯನ್ನು ಕ್ಷಣ ಕ್ಷಣ ಅಪ್‍ಡೇಟ್ ಮಾಡುತ್ತಿದ್ದು, ಸಂಜೆ 7 ಗಂಟೆಯ ವೇಳೆಗೆ ಒಟ್ಟು ದೇಶದಲ್ಲಿ 1263 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ 102 ಮಂದಿ ಗುಣಮುಖರಾಗಿದ್ದು, 32 ಮಂದಿ ಮೃತಪಟ್ಟಿದ್ದಾರೆ. 1129 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದಲ್ಲಿ ಇವತ್ತು 32 ಮಂದಿಗೆ ಪಾಸಿಟಿವ್ ಬಂದಿದೆ. ಈ ಪೈಕಿ 17 ಮಂದಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಅತಿ ಹೆಚ್ಚು ಕೊರೊನಾ ಪೀಡಿತ ರಾಜ್ಯಗಳ ಪೈಕಿ ಕೇರಳ(234), ಮಹಾರಾಷ್ಟ್ರ (215), ಕರ್ನಾಟಕ (88), ಉತ್ತರ ಪ್ರದೇಶ(88), ದೆಹಲಿ(72), ತೆಲಂಗಾಣ(70), ಗುಜರಾತ್(69), ರಾಜಸ್ಥಾನ(69), ತಮಿಳುನಾಡು(67) ಅನುಕ್ರಮವಾಗಿ ಮೊದಲ 10 ಸ್ಥಾನ ಪಡೆದುಕೊಂಡಿದೆ.


Spread the love

About Laxminews 24x7

Check Also

ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿವೆ: ಸತೀಶ ಜಾರಕಿಹೊಳಿ

Spread the love ಬೆಳಗಾವಿ: ‘ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ