Breaking News
Home / ಜಿಲ್ಲೆ / ಬಂದ್ ನಡುವೆ ‘ಎಣ್ಣೆ ಡ್ಯಾನ್ಸ್’- ನಾನೇ ಮಂತ್ರಿ ಎಂದ ಕುಡುಕ …………

ಬಂದ್ ನಡುವೆ ‘ಎಣ್ಣೆ ಡ್ಯಾನ್ಸ್’- ನಾನೇ ಮಂತ್ರಿ ಎಂದ ಕುಡುಕ …………

Spread the love

ಬೆಂಗಳೂರು : ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಟೌನ್ ಹಾಲ್ ಬಳಿ ಹಾಕಿದ್ದ ಬ್ಯಾರಿಕೇಡ್ ಸರಿಸಿ ಒಳಗೆ ನುಗ್ಗಿದ ಕುಡುಕನೋರ್ವ ಭರ್ಜರಿ ಸ್ಟೆಪ್ಸ್ ಹಾಕಿದ್ದಾನೆ.

ನಗರದ ಮೆಜೆಸ್ಟಿಕ್, ರೈಲ್ವೇ ನಿಲ್ದಾಣ ಸೇರಿದಂತೆ ಬಹುತೇಕ ಕಡೆ ಬಿಗಿ ಭದ್ರತೆಗಾಗಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅದರಂತೆ ನಗರದ ಟೌನ್ ಹಾಲ್ ನಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಎರಡೂ ಕೆಎಸ್‍ಆರ್ ಪಿ ತುಕಡಿ ಹಾಗೂ 100 ಜನರ ಪೊಲೀಸ್ ಬ್ಯಾರಿಕೇಡ್ ಸರ್ಪಗಾವಲನ್ನು ಹಾಕಲಾಗಿತ್ತು. ಇದರ ನಡುವೆ ಬ್ಯಾರಿಕೇಡ್ ಒಳಗೆ ನುಗ್ಗಿದ ಫುಲ್ ಟೈಟಾಗಿದ್ದ ಕುಡುಕನೊಬ್ಬ ಭರ್ಜರಿ ಸ್ಪೆಪ್ಸ್ ಹಾಕಿದ್ದಾನೆ. ಅದು ಮಟ ಮಟ ಮಧ್ಯಾಹ್ನ, ಸುಡು ಬಿಸಿಲಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾನೆ.

ತನ್ನ ಸುತ್ತ ಪೊಲೀಸರು ಇದ್ರೂ, ಕುಡುಕ ಮಹಾಶಯ ಸ್ವಲ್ಪವೂ ವಿಚಲಿತನಾಗದೇ ರಸ್ತೆಯಲ್ಲೇ ಭರ್ಜರಿ ಕುಣಿದಿದ್ದಾನೆ. ಜೊತೆಗೆ ಟೌನ್ ಹಾಲ್ ನನ್ನದೇ ಅಂತಾ ಸಾರ್ವಜನಿಕರಿಗೆ ಡೋಂಟ್ ಕೇರ್ ಎಂದಿದ್ದಾನೆ. ನಾನೇ ಮಂತ್ರಿ ಅಂತಾ ಬಂಧಿಸಲು ಬಂದ ಪೊಲೀಸರಿಗೆ ಫುಲ್ ಆವಾಜ್ ಹಾಕಿದ್ದಾನೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಕಾಲ್ ಮಾಡ್ತೇನೆ ಅಂತಾ ಪೋಲಿಸ್ರಿಗೆ ವಾರ್ನ್ ಮಾಡಿದ್ದಾನೆ. ನಂತರ ಪೊಲೀಸರು ಕುಡುಕನನ್ನು ಸ್ಥಳದಿಂದ ಬೇರೆಯೆಡೆಗೆ ಕಳುಹಿಸಿದ್ದಾರೆ.


Spread the love

About Laxminews 24x7

Check Also

ಗೌರವಯುತ ಜೀವನ ನಡೆಸಲು ನೆರವಿಗೆ ಬಾರದ ಪದಕ; ತಿನ್ನಲು ಕೂಳಿಲ್ಲದಿದ್ದರೂ ಕುಂದದ ಕುಸ್ತಿ ಪ್ರೇಮ; ಪೈಲ್ವಾನ್ ಗೆ ಬೇಕಿದೆ ಸಹಾಯ ಹಸ್ತ!

Spread the love ಗೌರವಯುತ ಜೀವನ ಮಾಡಬೇಕೆಂದು ಬಯಸಿದ ಕುಸ್ತಿ ಪಟುವೊಬ್ಬರಿಗೆ ಯಾವುದೇ ನೆರವು ಸಿಗದ ಕಾರಣ, ಹೊಟ್ಟೆಪಾಡಿಗೆ ಹಮಾಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ