ಬೆಳಗಾವಿ: ಸತೀಶ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಬೇರೊಂದು ಪಕ್ಷದಲ್ಲಿ ಇದ್ದುಕೊಂಡು ಅವರು ಸಿಎಂ ಆಗುತ್ತಾರೆ, ಇವರು ಸಿಎಂ ಆಗ್ತಾರೆ ಅಂತಾ ಹೇಳುವುದು ಸರಿಯಲ್ಲ. ಬಿಜೆಪಿ ಹೈಕಮಾಂಡ್ ರಮೇಶ ಅವರಿಗೆ ಕಡಿವಾಣ ಹಾಕಲಿ ಎಂದಿದ್ದಾರೆ.
ರಮೇಶ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನೀರಾವರಿ ಖಾತೆ ಎಲ್ಲದರಲ್ಲಿಯೇ ಅತೀ ಸೂಕ್ಷ್ಮ ಖಾತೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಗೋವಾ ಅಂತರ್ ರಾಜ್ಯ ವ್ಯಾಜ್ಯಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ರಮೇಶ ಅವರು ಯಾವರೀತಿ ಖಾತೆ ನಿಭಾಯುತ್ತಾರೆ ಕಾದು ನೋಡಬೇಕು ಎಂದರು.
Laxmi News 24×7