Breaking News
Home / ಜಿಲ್ಲೆ / ಬೆಂಗಳೂರು: ಸಾವಿರದಿಂದ ಸಾವಿರದ ಐದುನೂರು ಬೆಡ್ ಉಳ್ಳ ಆಸ್ಪತ್ರೆಯನ್ನು ಕೇವಲ ಕೋವಿಡ್ -19 ಗೆ ಮೀಸಲಿಡುತ್ತೇವೆ: ಸಚಿವ ಡಾ.ಸುಧಾಕರ್

ಬೆಂಗಳೂರು: ಸಾವಿರದಿಂದ ಸಾವಿರದ ಐದುನೂರು ಬೆಡ್ ಉಳ್ಳ ಆಸ್ಪತ್ರೆಯನ್ನು ಕೇವಲ ಕೋವಿಡ್ -19 ಗೆ ಮೀಸಲಿಡುತ್ತೇವೆ: ಸಚಿವ ಡಾ.ಸುಧಾಕರ್

Spread the love

ಬೆಂಗಳೂರು: ಸಾವಿರದಿಂದ ಸಾವಿರದ ಐದುನೂರು ಬೆಡ್ ಉಳ್ಳ ಆಸ್ಪತ್ರೆಯನ್ನು ಕೇವಲ ಕೋವಿಡ್ -19 ಗೆ ಮೀಸಲಿಡುತ್ತೇವೆ ಎಂದು ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ವಿಕ್ಟೋರಿಯದಲ್ಲಿ 2100 ಬೆಡ್ ಇದ್ದರೂ ಎಲ್ಲವನ್ನೂ ಬಳಕೆ ಮಾಡಲು ಆಗಲ್ಲ .ಬೇರೆ ಬೇರೆ ರೋಗಿಗಳು ಇದ್ದಾರೆ. ವಿಕ್ಟೋರಿಯ ಆಸ್ಪತ್ರೆಯಲ್ಲಿದ್ದ ಉಳಿದ ರೋಗಿಗಳನ್ನು ಹೇಗೆ ಬೇರೆ ಕಡೆ ಶಿಫ್ಟ್ ಮಾಡಬೇಕು ಎನ್ನುವ ಬಗ್ಗೆಯೂ ತೀರ್ಮಾನ ಮಾಡ್ತೇವೆ ಎಂದು ಸುಧಾಕರ್ ತಿಳಿಸಿದರು.

ಸದ್ಯ ಈಗ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದೆ. ಕೋವಿಡ್ 19 ಗೆ ಪ್ರತ್ಯೇಕ ಆಸ್ಪತ್ರೆ ನಿರ್ಮಾಣದ ಬಗ್ಗೆ ಚರ್ಚಿಸಲಾಗುವುದು. ವಿಕ್ಟೊರಿಯ ಆಸತ್ರೆ ಬಳಸಲು ಯೋಚಿಸಲಾಗಿದೆ.ಈ ಬಗ್ಗೆ ವಿವಿಧ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಚರ್ಚೆಸಲಾಗುವುದು ಮತ್ತು ರೋಗಿಗಳ ಸ್ಥಳಾಂತರ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ಇನ್ನೂ ಎಲ್ಲಾ ಆಸ್ಪತ್ರೆಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ, ಅದರಲ್ಲಿ ಅಗತ್ಯವಿರುವ ಆಸ್ಪತ್ರೆಗಳನ್ನು ಮಾತ್ರ ತೆಗೆದುಕೊಳ್ಳಲಾಗುವುದು. ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುತ್ತೆ.ಅತೀ ಹೆಚ್ಚು ವೆಂಟಿಲೇಟರ್ ಅಳವಡಿಕೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಎಟಿಂಎಂಗಳಲ್ಲಿ ಮುಂಜಾಗೃತ ಕ್ರಮಗಳಲ್ಲಿ, ವೈರಸ್ ಹರಡೋ ಭೀತಿ ಹಿನ್ನೆಲೆ.ಇದು ನನ್ನ ಗಮನಕ್ಕೆ ಬಂದಿರಲಿಲ್ಲ,ಒಳ್ಳೆಯ ಸಲಹೆ ನೀಡಿದ್ದೀರಿ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸುಧಾಕರ್ ಮಾಧ್ಯಮಗಳ ಮುಂದೆ ತಿಳಿಸಿದರು.


Spread the love

About Laxminews 24x7

Check Also

ಸಾರ್ವಜನಿಕ ಆಸ್ತಿ ಮಾರಿದ್ದೇ ಮೋದಿ ಸಾಧನೆ: ಖರ್ಗೆ ಟೀಕೆ

Spread the love ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ