Breaking News
Home / ಜಿಲ್ಲೆ / ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ಮೇಯರ್ ಗೆ ಅಪಮಾನ..!

ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ಮೇಯರ್ ಗೆ ಅಪಮಾನ..!

Spread the love

ಬೆಂಗಳೂರು : ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಳೆದು ತೂಗಿ ಮಂಡಿಸಲಾದ ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ಮೇಯರ್ ಅವರ ಭಾವಚಿತ್ರವೇ ನಾಪತ್ತೆ..!

ಬಜೆಟ್ ಪುಸ್ತಕದಲ್ಲಿ ಮೇಯರ್ ಭಾವಚಿತ್ರ ಪ್ರಕಟಿಸುವುದು ಶಿಷ್ಟಾಚಾರ. ಆದರೆ, ಈ ಬಾರಿಯ ಪುಸ್ತಕದಲ್ಲಿ ಮೇಯರ್ ಗೌತಮ್‍ಕುಮಾರ್ ಅವರ ಭಾವಚಿತ್ರ ಇಲ್ಲದೆ ಇರುವುದರಿಂದ ಅವರಿಗೆ ಉದ್ದೇಶಪೂರ್ವಕವಾಗಿಯೇ ಅಪಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಬಜೆಟ್ ಪುಸ್ತಕದಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರ ಭಾವಚಿತ್ರವೇ ರಾರಾಜಿಸುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಜೆಟ್ ಪುಸ್ತಕದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಭಾವಚಿತ್ರಗಳೆ ಹೆಚ್ಚಾಗಿರುವುದರಿಂದ ಮತ್ತೆ ಬಿಬಿಎಂಪಿ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಆರ್.ಅಶೋಕ್ ಅವರೇ ಈ ಕಾರ್ಯಕ್ಕೆ ಮುಂದಾಗಿರಬಹುದು ಎಂದು ಕೆಲವರು ಗುಮಾನಿ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಲ್ಲದಿದ್ದರೂ ಬಿಬಿಎಂಪಿ ಬಜೆಟ್‍ನಲ್ಲಿ ಆರ್.ಅಶೋಕ್ ಅವರ ಭಾವಚಿತ್ರಗಳು ಪ್ರಕಟಗೊಂಡಿರುವುದಕ್ಕೆ ಕೆಲ ಬಿಜೆಪಿ ಶಾಸಕರು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಂದಾಯ ಸಚಿವ ಸ್ಥಾನದ ಜತೆಗೂ ಬೆಂಗಳೂರು ಉಸ್ತುವಾರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್.ಅಶೋಕ್ ಅವರೇ ಪರೋಕ್ಷವಾಗಿ ಬಿಬಿಎಂಪಿ ಮೇಲೆ ಹಿಡಿತ ಸಾಧಿಸಲು ಇಂತಹ ಕಸರತ್ತಿಗೆ ಕೈ ಹಾಕಿದ್ದಾರೆ. ಅವರ ಧೋರಣೆ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರು ನೀಡಲಾಗುವುದು ಎಂದು ಕೆಲ ಬಿಜೆಪಿ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ತಿಳಿಸಿದ್ದಾರೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ