Breaking News

ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರಶ್ಯಾಮಸುಂದರ ಢವಳಿ ಅವರು ಇಂದು  ಮಧ್ಯಾನ್ಹ ನಿಧನ 

Spread the love

ಬೆಳಗಾವಿ – ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರ,ಬೆಳಗಾವಿ ಜಿಲ್ಲಾ
ಔದ್ಯೋಗಿಕ ಸಹಕಾರ ಬ್ಯಾಂಕಿನ ಮಾಜಿ ನಿರ್ದೇಶಕ ಶ್ಯಾಮಸುಂದರ ಢವಳಿ ಅವರು ಇಂದು  ಮಧ್ಯಾನ್ಹ ನಿಧನ ಹೊಂದಿದರು.
ಅವರಿಗೆ 51 ವರ್ಷ ವಯಸ್ಸಾಗಿತ್ತು. ಪತ್ನಿಮತ್ತು ಇಬ್ಬರು ಪುತ್ರರನ್ನು ಬಿಟ್ಟು ಅಗಲಿದ್ದಾರೆ.
 ಇಂದು ಸಂಜೆ ಖಾಸಬಾಗ ರುದ್ರಭೂಮಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ವಡಗಾವಿ, ಖಾಸಬಾಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು.
       1982 ರ ಗೋಕಾಕ ಚಳವಳಿಯಿಂದ ಇತ್ತೀಚಿನವರೆಗಿನ ಎಲ್ಲ ಕನ್ನಡ ಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಅವರು ಬೆಳಗಾವಿ ಜಿಲ್ಲಾ ಔದ್ಯೋಗಿಕ ಸಹಕಾರ ಬ್ಯಾಂಕಿಗೆ ಎರಡು ಅವಧಿಗಾಗಿ ನಿರ್ದೇಶಕರಾಗಿದ್ದರು.
  ಢವಳಿ ಅವರ ನಿಧನಕ್ಕೆ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಶೋಕ ವ್ಯಕ್ತಪಡಿಸಿದ್ದಾರೆ. ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ರಾಘವೇಂದ್ರ ಜೋಶಿ, ಮಾಜಿ ನಗರ ಸೇವಕ ರಮೇಶ ಸೊಂಟಕ್ಕಿ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಢವಳಿ ಅವರ ನಿಧನದಿಂದಾಗಿ ಬೆಳಗಾವಿಯ ಕನ್ನಡ ನಾಡು,ನುಡಿ ಮತ್ತು ಗಡಿ ಪರವಾದ ಚಳವಳಿಗೆ ತೀವ್ರ ಹಾನಿಯಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ

Spread the love

About Laxminews 24x7

Check Also

ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

Spread the love ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ