Breaking News
Home / ಅಂತರಾಷ್ಟ್ರೀಯ / ಕೊರೊನಾ ವಿರುದ್ಧ 26 ಗಂಟೆ ಹೋರಾಡಿ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ…

ಕೊರೊನಾ ವಿರುದ್ಧ 26 ಗಂಟೆ ಹೋರಾಡಿ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ…

Spread the love

ಚಂಡೀಗಢ: ಮಹಾಮಾರಿ ಕೊರೊನಾ ವಿರುದ್ಧ 26 ಗಂಟೆಗಳ ಹೋರಾಡಿ 6 ತಿಂಗಳ ಕಂದಮ್ಮವೊಂದು ಮೃತಪಟ್ಟ ಮನಕಲಕುವ ಘಟನೆ ಇಂದು ಚಂಡೀಗಢದಲ್ಲಿ ನಡೆದಿದೆ.

ಹೃದಯ ರಂಧ್ರದ ಚಿಕಿತ್ಸೆಗಾಗಿ 6 ತಿಂಗಳ ಹೆಣ್ಣು ಮಗುವನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಗುವಿಗೆ ಸೋಂಕ ತಗುಲಿರುವುದು ದೃಢಪಡುತ್ತಿದ್ದಂತೆ ಅಂದ್ರೆ ಬುಧವಾರ ಬೆಳಗ್ಗೆ 11 ಗಂಟೆಗೆ ಕೋವಿಡ್-19 ವಾರ್ಡಿಗೆ ದಾಖಲಿಸಲಾಗಿತ್ತು. ರಾತ್ರಿಯಿಂದಲೇ ಮಗುವನ್ನು ವೆಂಟಿಲೇಟರ್ ಮತ್ತು ಗ್ಲೂಕೋಸ್‍ನಲ್ಲಿ ಇಡಲಾಗಿತ್ತು. ಆದರೆ ಸೋಂಕು ತೀವ್ರವಾಗಿ ಏರಿಕೆ ಕಂಡು ಕಂದಮ್ಮ ಪ್ರಾಣಬಿಟ್ಟದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮಗು ಜನಿಸಿದಾಗ ಎರಡೂವರೆ ಕೆಜಿ ಇತ್ತು. ನಂತರ 6 ತಿಂಗಳ ಕಳೆದರೂ ತೂಕವು 3 ಕೆಜಿಗಿಂತ ಹೆಚ್ಚಾಗಲಿಲ್ಲ. ಹೀಗಾಗಿ ಪೋಷಕರು ಮಗುವನ್ನು ಜಲಂಧರ್‍ನ ಅಪೊಲೊ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ 36 ದಿನಗಳವರೆಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದನ್ನು ಅರಿತ ಅಪೊಲೊ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪಿಜಿಐಗೆ ದಾಖಲಿಸುವಂತೆ ಸಲಹೆ ನೀಡಿದರು. ಹೀಗಾಗಿ ಪೋಷಕರು ಏಪ್ರಿಲ್ 9ರಂದು ಅಂಬುಲೆನ್ಸ್ ಮೂಲಕ ಪಿಜಿಐಗೆ ಕರೆದಂತಿದ್ದರು.

ಚಿಕಿತ್ಸೆ ಆರಂಭಿಸಿದ ವೈದ್ಯರು ಮಗುವಿನ ಹೃದಯದಲ್ಲಿ ರಂಧ್ರವಿದೆ, ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದರು. ಆದರೆ ಶಸ್ತ್ರಚಿಕಿತ್ಸೆಗೂ ಮುನ್ನವೇ ಮಗುವಿಗೆ ಸೋಂಕು ತಗುಲಿತ್ತು. ಮಗುವಿಗೆ ಜ್ವರದ ಲಕ್ಷಣಗಳು ಇರಲಿಲ್ಲ. ಆದರೆ ಕೈ-ಕಾಲು ಸೇರಿದಂತೆ ದೇಹದ ಭಾಗಗಳು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದವು.

ತಾಯಿ-ತಂದೆ ಕೊರೊನಾ ಬಂದಿಲ್ಲ:
ವೆಂಟಿಲೇಟರ್ ಮೇಲೆ ಇರಿಸಿದ್ದ ಮಗಳನ್ನು ನೋಡಲು ತಾಯಿ ಹೋಗಿದ್ದರು. ಮಗುವಿನ ತಂದೆ ರಾಮು ಮತ್ತು ತಾಯಿ ಇಬ್ಬರೂ ಕೊರೊನಾ ಟೆಸ್ಟ್‍ಗೆ ಒಳಗಾಗಿದ್ದರು. ಆದರೆ ಅವರ ರಿಪೋರ್ಟ್ ನಲ್ಲಿ ಸೋಂಕು ದೃಢಪಟ್ಟಿಲ್ಲ. ಅಜ್ಜಿ ಮತ್ತು ಅಜ್ಜಗೂ ಕೊರೊನಾ ಟೆಸ್ಟ್ ಮಾಡಲಾಗಿದೆ. ಅವರಲ್ಲಿಯೂ ಸೋಂಕು ಕಂಡುಬಂದಿಲ್ಲ. ಹೀಗಾಗಿ ಮಗುವಿಗೆ ಕೊರೊನಾ ಹೇಗೆ ಹರಡಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಹೆಣ್ಣು ಮಗುವಿನೊಂದಿಗೆ ಸಂಪರ್ಕ ಹೊಂದಿದ್ದ 18 ವೈದ್ಯರು, ಎಚ್‍ಎ ಮತ್ತು ಎಕ್ಸರೆ ತಂತ್ರಜ್ಞರು ಸೇರಿದಂತೆ 54 ಮಂದಿ ಆಸ್ಪತ್ರೆಯ ಉದ್ಯೋಗಿಗಳ ರಿಪೋರ್ಟ್ ನೆಗೆಟಿವ್ ಬಂದಿದೆ. ಪಿಜಿಐ ಬುಧವಾರ 18 ವೈದ್ಯರನ್ನು ಪ್ರತ್ಯೇಕಿಸಿ ಪ್ರತ್ಯೇಕ ವಾರ್ಡಿಗೆ ದಾಖಲಿಸಿದೆ. ಉಳಿದ ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದ್ದರಿಂದ ಅವರನ್ನು ಮನೆಗೆ ಕಳುಹಿಸಿದೆ


Spread the love

About Laxminews 24x7

Check Also

ಗುಜರಾತ್​ ಕ್ಯಾಪ್ಟನ್ಸಿ ಬಿಟ್ಟು ಮತ್ತೆ ಮುಂಬೈ ಪಾಲಾಗ್ತಾರಾ ಹಾರ್ದಿಕ್ ಪಾಂಡ್ಯ​?

Spread the love ಮುಂಬೈ, ಮಹಾರಾಷ್ಟ್ರ: ಟೀಂ ಇಂಡಿಯಾ ಟಿ 20 ನಾಯಕ ಹಾರ್ದಿಕ್ ಪಾಂಡ್ಯ ಮತ್ತೆ ಮುಂಬೈ ತಂಡಕ್ಕೆ ಮರಳುತ್ತಾರಾ?, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ