Breaking News
Home / ಜಿಲ್ಲೆ / ಅಂಧ ಸಹೋದರಿಯರಿಗೆ ಲೈಫ್ ಲಾಂಗ್ ಆಹಾರ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದ ಅರ್ಜುನ್ ಜನ್ಯಾ.ಈ ಸಕತ್ ಸ್ಟೋರಿ ನೋಡಿ.

ಅಂಧ ಸಹೋದರಿಯರಿಗೆ ಲೈಫ್ ಲಾಂಗ್ ಆಹಾರ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದ ಅರ್ಜುನ್ ಜನ್ಯಾ.ಈ ಸಕತ್ ಸ್ಟೋರಿ ನೋಡಿ.

Spread the love

ಮಧುಗಿರಿಯ ರತ್ನಮ್ಮ ಮತ್ತು ಮಂಜಮ್ಮ. ಅಂಧ ಸಹೋದರಿಯರು ಅದರ ಜೊತೆಗೆ ಬಡತನ. ಜೀವನ ನಿರ್ವಹಣೆಗಾಗಿ ಮಧುಗಿರಿಯ ಮಾರಮ್ಮನ ಗುಡಿಯ ಮುಂದೆ ಹಾಡು ಹಾಡುವರು. ಅವರ ಹಾಡು ಕೇಳಿದವರು ನೀಡುವ ಚಿಲ್ಲರೆಯೇ ಅವರ ಜೀವನಾಧಾರ. ಇವರು ಮೂರು ಜನ ಸಹೋದರಿಯರು. ಮೂವರು ಕೂಡಾ ಅಂಧರಾಗಿದ್ದು, ಅಜ್ಜಿಯು ಅವರ ಆರೈಕೆ ಮಾಡುತ್ತಾರೆ. ಇವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಡಿದ ಅರಳುವ ಹೂವುಗಳೇ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಇದನ್ನು ನೋಡಿರುವ ಜೀ ಕನ್ನಡ ವಾಹಿನಿ ಆ ಸಹೋದರಿಯರನ್ನು ತನ್ನ ಸರಿಗಮಪ ಹಾಡಿನ ರಿಯಾಲಿಟಿ ಶೋ ಗೆ ಕರೆದು ತಂದಿದೆ.
ಅಕ್ಕ ತಂಗಿಯರು ಸರಿಗಮಪ ಗೆ ಆಯ್ಕೆ ಆಗಿದ್ದಾರೆ. ಇನ್ನು ಇವರು ಕಷ್ಟಗಳು ಕಳೆಯುವ ಕಾಲ ಬರುವಂತಾಗಲಿ. ಬಡತನದ ಬೇಗೆಯಲ್ಲಿ ನೊಂದ ಇವರ ಜೀವನ ಇನ್ನಾದರೂ ಹಸನಾಗಲಿ ಎಂದು ಹಾರೈಸೋಣ‌. ಇನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಈ ಸಹೋದರಿಯರ ಜೀವನದ ಕಷ್ಟವನ್ನು ಕೇಳಿರುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ. ಆ ಸಹೋದರಿಯರಿಗೆ ತಾನು ಇರುವ ತನಕ ಅವರ ಮನೆಯಲ್ಲಿ ಉಪವಾಸ ಇಲ್ಲದಿರುವಂತೆ ನೋಡಿಕೊಳ್ಳುವುದಾಗಿ ಮಾತನ್ನು ನೀಡಿದ್ದಾರೆ.

ಚಾನೆಲ್ ಅವರು ಅವರನ್ನು ತಮ್ಮ ವೇದಿಕೆಗೆ ಕರೆತಂದಿರುವುದು ಒಂದು ಉತ್ತಮ ಬೆಳವಣಿಗೆ ಎನ್ನಬಹುದು. ಅವರ ಜೀವನದ ಹೊಸ ಆರಂಭ ಸರಿಗಮಪ ಮೂಲಕ ಆದರೆ ಅದಕ್ಕಿಂತ ಸಂತೋಷದ ವಿಚಾರ ಇನ್ನೊಂದಿಲ್ಲ ಎಂದು ನಾವು ಹೇಳಬಹುದು. ಇನ್ನು ಈ ಸಹೋದರಿಯರ ವಿಡಿಯೋ ಮಾಡಿ, ಅವರನ್ನು, ಅವರ ಪ್ರತಿಭೆಯನ್ನು ಜನರ ಮುಂದೆ ಇಟ್ಟವರ ಶ್ರಮಕ್ಕೂ ಕೂಡಾ ಒಂದು ಸಾರ್ಥಕತೆ ಸಿಕ್ಕಂತೆ ಆಗಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ