Breaking News

ರಮೇಶ ಜಾರಕಿಹೊಳಿ ಅವರಿಗೆ ಜಲ ಸಂಪನ್ಮೂಲ ಖಾತೆ ಹಂಚಿಕೆ ಮಾಡಿದಕ್ಕೆ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.

Spread the love

ಅಥಣಿ: ರಮೇಶ ಜಾರಕಿಹೊಳಿ ಅವರಿಗೆ ಜಲ ಸಂಪನ್ಮೂಲ ಖಾತೆ ಹಂಚಿಕೆ ಮಾಡಿದಕ್ಕೆ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.

ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ರಮೇಶ ಜಾರಕಿಹೊಳಿ ಅವರು ಜಾರಿಗೊಳಿಸುತ್ತಾರೆ. ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಮೇಶ ಜಾರಕಿಹೊಳಿ ಅವರು ಜಲ ಸಂಪನ್ಮೂಲ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದರು. ಅದರಂತೆ ಇಂದು ಖಾತೆ ಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ , ನೀರಾವರಿ ಖಾತೆ ಜವಾಬ್ದಾರಿಯನ್ನು ರಮೇಶ ಜಾರಕಿಹೊಳಿ ಅವರಿಗೆ ವಹಿಸಿದ್ದಾರೆ. ಜತೆಗೆ ಶ್ರೀಮಂತ ಪಾಟೀಲ್ ಅವರಿಗೆ ಜವಳಿ ಖಾತೆ ಜವಾಬ್ದಾರಿ ನೀಡಿದ್ದಾರೆ


Spread the love

About Laxminews 24x7

Check Also

ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ

Spread the love ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ ಮೊಮ್ಮಕ್ಕಳ ಮೇಲಿನ ಹ* ಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ