ಬೆಂಗಳೂರು: ರಾಮನಗರದ ಖಾಸಗಿ ಚಾನೆಲ್ ವೊಂದರ ವರದಿಗಾರ ಹನುಮಂತು ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ.
ಪಾದರಾಯನಪುರ ಗಲಾಟೆಯ ಆರೋಪಿಗಳನ್ನು ಜೈಲಿಗೆ ಕರೆತರುತ್ತಿದ್ದ ಸುದ್ದಿ ಮಾಡಿ, ವಾಪಾಸ್ ಬರುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಬಂದ್ ಎಟಿಎಂ ವಾಹನ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮೂರು ವರ್ಷಗಳ ಹಿಂದೆಷ್ಟೇ ವಿವಾಹವಾಗಿದ್ದರು. ಒಂದು ಮಗು ಕೂಡಾ ಇದೆ. ಹನುಮಂತ ಅವರ ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತರ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.