ಬೆಳಗಾವಿ: ಸಂಕೇಶ್ವರ ಪಕ್ಕದ ಹರಗಾಪೂರ ಬಳಿ ಇಂದು ಬೆಳಿಗ್ಗೆ ಮೂರು ಕಾಡುಕೋಣ ಗಳು ಕಾಣಿಸಿಕೊಂಡಿದ್ದು, ಜನರು ಭಯದಿಂದ ಓಡಾಡಿದ್ದಾರೆ.
ಸಂಕೇಶ್ವರ ಪಟ್ಟಣದ ಸಮೀಪದ ಹೊಲಗಳಲ್ಲಿ 3 ಕಾಡುಕೋಣ ಕಾಡಿಸಿಕೊಂಡಿವೆ. ಜಮೀನಿನಲ್ಲಿ ಕೆಲಸ ಮಾಡುವ ರೈತರ ಅವುಗಳನ್ನು ಕಂಡು ಭಯ ಬೀತರಾಗಿ ಬೆದರಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ. ಜತೆ ನೀರಾವರಿ ಜಮೀನಿನಲ್ಲಿ ರೈತರ ಬೆಲೆ ಬಾಳುವ ಪೈಪ್ ಗಳನ್ನು ತುಳಿದು ಓಡಿವೆ. ಇದರಿಂದ ನೀರಾವರಿ ಜಮೀನಿನಲ್ಲಿ ನಾಶವಾಗಿರುವುದನ್ನು ಕಂಡು ಮರುಗಿದ್ದಾರೆ.
ಹೊಲದಲ್ಲಿ ಇದ್ದಂತ ಯುವಕರು ಕೂಗಾಡಿ ಬೆದರಿಸಿದ್ದಾರೆ. ಇದರಿಂದ ಮೂರು ಕಾಡಕೋಣಗಳು ಜಮೀನಿನಲ್ಲಿ ಓಡತೊಡಿದ್ದಾವೆ. ಆದರ ಸಹ ಜನರಲ್ಲಿ ಸ್ವಲ್ಪ ಮಟ್ಟಿಗೆ ಭಯಗೊಂಡಿದ್ದಾರೆ. ಮೂರು ಕಾಡುಕೋಣಗಳಲ್ಲಿ ಒಂದನ್ನು ಗ್ರಾಮಸ್ಥರು ಕಟ್ಟಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇಲ್ಲಿಯವರೆಗೂ ಆಗಮಿಸಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೊರಿಸುತ್ತದೆ.