ಬೆಳಗಾವಿ: ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ನ ಮಾಹಿತಿ ಪ್ರಕಾರ ಇಂದು ಒಂದೇ ದಿನಕ್ಕೆ 18 ಕೊರೊನಾ ಸೋಂಕು ತಗುಲಿದವರು ಪತ್ತೆಯಾಗಿದ್ದಾರೆ. ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಮಾತ್ರ ಒಂದು ಸೋಂಕಿತರಿರುವುದು ಧೃಡಪಟ್ಟಿಲ್ಲ. ಇದರಿಂದ ಜಿಲ್ಲೆಯ ಜನರು ನಿಟ್ಟಿಸಿರು ಬಿಡುವಂತಾಗಿದೆ.
ಹೆಚ್ಚು ಸೋಂಕಿತರು ಪತ್ತೆಯಾದ ಪಟ್ಟಿಯಲ್ಲಿ ಬೆಳಗಾವಿ ಮೂರನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟು 43 ಪ್ರಕರಣಗಳು ಪತ್ತೆಯಾಗಿದೆ. ಸೋಂಕಿತರಲ್ಲಿ ಮೂವರು ಡಿಶ್ಚಾರ್ಜ್ ಆಗಿದ್ದಾರೆ. ಒಬ್ಬರ ಮೃತ ಪಟ್ಟಿದ್ದಾರೆ. ಉಳಿದ 39 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.
ಇಂದು ದಾಖಲಾಗಿರುವ 18 ಜನ ಕೊರೊನಾ ಸೋಂಕಿತರಲ್ಲಿರಾಜ್ಯ ರಾಜಧಾನಿಯಲ್ಲಿ 10ಹೊಸ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಹುಬ್ಬಳ್ಳಿ ಧಾರವಾಡ 2 , ವಿಜಯಪುರ 2 ಮಂಡ್ಯ 2, ದಕ್ಷಿಣ ಕನ್ನಡದ ಬಟ್ವಾಳದಲ್ಲಿ 1, ಕಲಬುರಗಿ 1 ಪಾಸಿಟಿಬ್ ಕೇಸ್ ಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಇಲ್ಲಿಯವರೆಗೂ ಕೊರೊನಾ ಸೋಂಕಿತರ ಸಂಖ್ಯೆ 445ಕ್ಕೇರಿಕೆಯಾಗಿದೆ.