Breaking News
Home / Laxminews 24x7 (page 2886)

Laxminews 24x7

ಸಾರಿಗೆ ನೌಕರರ ಪ್ರತಿಭಟನೆ ಗೊಂದಲ, ಇಂದೂ ಕೂಡ ಪ್ರಯಾಣಿಕರ ಪರದಾಟ

ಬೆಂಗಳೂರು, ಡಿ.14- ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆದರೂ ನಿನ್ನೆ ರಾತ್ರಿ ಉಂಟಾದ ಗೊಂದಲ ಹಾಗೂ ಬೆಳಗ್ಗೆ ನೌಕರರ ಸಂಘಟನೆಗಳು ವಿಳಂಬವಾಗಿ ತೆಗೆದುಕೊಂಡ ನಿರ್ಧಾರದಿಂದ ಇಂದೂ ಮಧ್ಯಾಹ್ನದವರೆಗೂ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾರಿಗೆ ನೌಕರರು ಸರ್ಕಾರದೊಂದಿಗೆ ನಡೆಸಿದ ಮಾತುಕತೆ ಫಲ ನೀಡಿದೆ ಎಂದು ಮುಷ್ಕರ ವಾಪಸ್ ಪಡೆಯುತ್ತಿರುವುದಾಗಿ ಸಂಜೆ ಘೋಷಿಸಿದ್ದರು. ಆದರೆ, ರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ …

Read More »

ಯಾವುದೇ ಕಾರಣಕ್ಕೂ ಸಾರಿಗೆ ನೌಕರರನ್ನುಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವೇ ಇಲ್ಲ

ಬೆಂಗಳೂರು,ಡಿ.14- ಯಾವುದೇ ಕಾರಣಕ್ಕೂ ಸಾರಿಗೆ ನೌಕರರನ್ನು ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವೇ ಇಲ್ಲ. ಉಳಿದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಸಿದ್ದವಿದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನೌಕರರು 10 …

Read More »

ಗೋಕಾಕ ಮತಕ್ಷೇತ್ರದ ಕಾನೂನು ಮತ್ತು ಮಾನವ ಹಕ್ಕುಗಳ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು

ಸನ್ಮಾನ್ಯ ಶ್ರೀ.ಸತೀಶ ಎಲ್ ಜಾರಕಿಹೊಳಿ, ಶಾಸಕರು ಯಮಕನಮರಡಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೇಸ ಪಕ್ಷದ ಕಾರ್ಯಾಧ್ಯಕ್ಷರ ನಿರ್ದೇಶನ ಮತ್ತು ಆದೇಶದ ಮೇರೆಗೆ ಶ್ರೀ.ಬಿ. ಕೆ. ಕಂಟಕಾರ ವಕೀಲರು, ಇವರನ್ನು ಗೋಕಾಕ ಮತಕ್ಷೇತ್ರದ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲು ಹರ್ಷಿತನಾಗಿದ್ದೇನೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಶಿಸ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುವುದು, ತಾವು ಈ ಕೂಡಲೇ ತಮ್ಮ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷ …

Read More »

ದುರದುಂಡಿ ಗ್ರಾಮದಲ್ಲಿ ಹರಾಜಿನ ಮೂಲಕ ಗ್ರಾಪಂ,ಗೆ ಆಯ್ಕೆ ಸಂಭವ !!

ದುರದುಂಡಿ ಗ್ರಾಮದಲ್ಲಿ ಹರಾಜಿನ ಮೂಲಕ ಗ್ರಾಪಂ,ಗೆ ಆಯ್ಕೆ ಸಂಭವ !! ಗೋಕಾಕ್ ತಾಲೂಕಿನ      ದುರದುಂಡಿ ಗ್ರಾಮದಲ್ಲಿ    ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ ಎಂದು ಗೊತ್ತಿದ್ದರೂ ಸಹ ಯಾವುದಕ್ಕೂ ಲೆಕ್ಕಿಸದೆ ಹೇಗಾದರೂ ಮಾಡಿ ದುರದುಂಡಿ ಗ್ರಾ‌ಪಂ‌.ಗೆ ತಮ್ಮ ಹಣದ ಬಲದಿಂದ ಆಯ್ಕೆಯಾಗಲಿಕ್ಕೆ ಸಜ್ಜಾಗುತ್ತಿರುವುದು ತಿಳಿದು ಬಂದಿದೆ, ನಿನ್ನೆ ದಿನವು ವಾರ್ಡಿಗೆ ಸಂಬಂದಿಸಿದಂತೆ ಸುಮಾರು 5ರಿಂದ 7 ಲಕ್ಷದವರೆಗೆ ಗ್ರಾಪಂ ಸ್ಥಾನದ ಹರಾಜಿಗೆ ಕೆಲವು ಮುಖಂಡರು ಕೂಡಿದ್ದರು.ಆದರೆ ಇವರಿಂದ ಗ್ರಾಮದಲ್ಲಿ …

Read More »

ಪಂಚ ದಿನಗಳ ಸಾರಿಗೆ ಸಮರ ಸುಗಮ ಅಂತ್ಯ

ಕೊಡಿಹಳ್ಳಿ ಚಂದ್ರಶೇಖರ್ ಮುಷ್ಕರ ಹಿಂಪಡೆದ ಹಿಂಪಡೆಯಲು ನಿರ್ಧಾರ ಮಾಡಿದ್ದಾರೆ ಈ ಸಂಬಂಧ ಅವರು ಹೇಳಿಕೆಯನ್ನು ನೀಡಿದ್ದಾರೆ. ಕಳೆದ 5 ದಿನಗಳಿಂದ ಸಾರಿಗೆ ನೌಕರರ ಮುಷ್ಕರ ಜನರ ಆಕ್ರೋಶಕ್ಕೆ ಮಣಿದು ಕೋಡಿಹಳ್ಳಿ ಚಂದ್ರಶೇಖರ್ ಇಂದು ಮುಷ್ಕರವನ್ನು ವಾಪಸ್ ಪಡೆದು ಅಂತ್ಯಗೊಳಿಸಿದ್ದಾರೆ. ಮುಖಂಡರ ಜೊತೆ ಚರ್ಚಿಸಿ ಹಿಂಪಡೆದಿದ್ದೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು . ನಿನ್ನೆಯಿಂದ ಅವರ ವಿರುದ್ಧ ಅನೇಕ ಟೀಕೆಗಳು ಕೇಳಿಬಂದಿದ್ದವು. ರಾಜಕಾರಣಿಗಳು ಜನಸಾಮಾನ್ಯರೂ ಕೂಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ …

Read More »

ಬೆಳಗಾವಿಯಲ್ಲಿ ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭ

ಬೆಳಗಾವಿಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಬೆಳಗಾವಿಯಿಂದ ರಾಮದುರ್ಗಕ್ಕೆ ಮೊದಲ ಬಸ್ ತೆರಳಿದೆ. ಸಂಚರಿಸುತ್ತಿರುವ ಬಸ್‌ನಲ್ಲಿ ಇಬ್ಬರು ಪೇದೆಗಳ ನಿಯೋಜನೆ ಮಾಡಲಾಗಿದೆ. ಆಯಾ ಠಾಣಾ ವ್ಯಾಪ್ತಿ ಪೊಲೀಸರಿಂದ ಸರ್ಕಾರಿ ಬಸ್‌ಗೆ ಎಸ್ಕಾರ್ಟ್ ಭದ್ರತೆ ಒದಗಿಸಲಾಗಿದೆ. ಬಳಿಕ ಆಯಾ ಠಾಣಾ ವ್ಯಾಪ್ತಿಯ ಪೊಲೀಸರಿಂದ ಬಸ್‌ಗಳಿಗೆ ಭದ್ರತೆ ನೀಡಲಾಗುತ್ತದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆಗಮಿಸಿ, ಕರ್ತವ್ಯಕ್ಕೆ ಹಾಜರಾಗಿ ಬಸ್ ಆರಂಭಿಸುವಂತೆ ಸಾರಿಗೆ ಸಿಬ್ಬಂದಿಗೆ ಮನವಿ ಮಾಡಿದರು. ಪ್ರಯಾಣಿಕರು ತೆರಳುವ ಬಸ್‌ಗಳಿಗೆ …

Read More »

ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಅವರನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಭೇಟಿಯಾದ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಬೆಂಗಳೂರು, ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಅವರನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಭೇಟಿಯಾದ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಹೌದು… ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿ ಜೆಡಿಎಸ್‌ಗೆ ಆಹ್ವಾನ ಕೊಟ್ಟುಬಂದಿದ್ದಾರೆ. ಇದರ ಎಚ್ಚೆತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ …

Read More »

ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬದಿಗೊತ್ತಿ ಸರಕಾರದ “ಸಂಧಾನ’ಕ್ಕೆ ಸಹಮತ ವ್ಯಕ್ತಪಡಿಸಿದ್ದ ಸಾರಿಗೆ ನೌಕರರ ಸಂಘದ ಮುಖಂಡರು, ಕೊನೆಯ ಕ್ಷಣದಲ್ಲಿ “ಯೂ-ಟರ್ನ್’ ಹೊಡೆದಿದ್ದಾರೆ.

ಬೆಂಗಳೂರು: ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬದಿಗೊತ್ತಿ ಸರಕಾರದ “ಸಂಧಾನ’ಕ್ಕೆ ಸಹಮತ ವ್ಯಕ್ತಪಡಿಸಿದ್ದ ಸಾರಿಗೆ ನೌಕರರ ಸಂಘದ ಮುಖಂಡರು, ಕೊನೆಯ ಕ್ಷಣದಲ್ಲಿ “ಯೂ-ಟರ್ನ್’ ಹೊಡೆದಿದ್ದಾರೆ. ಇದರೊಂದಿಗೆ ಸರಕಾರ-ಸಾರಿಗೆ ನೌಕರರ ನಡುವಿನ ಸಂಘರ್ಷ ಸೋಮವಾರ ಕೂಡ ಮುಂದುವರಿಯುವ ಲಕ್ಷಣಗಳಿವೆೆ. ಸರಕಾರವು ಮುಷ್ಕರನಿರತ ನೌಕರರ ಮುಖಂಡರನ್ನು ರವಿವಾರ ಮಾತುಕತೆಗೆ ಆಹ್ವಾನಿಸಿತ್ತು. ಮಾತುಕತೆ ಬಹುತೇಕ “ಫ‌ಲಪ್ರದ’ವಾಗಿದೆ ಎಂದು ಸರಕಾರ ಮತ್ತು ರಾಜ್ಯ ಸಾರಿಗೆ ನೌಕರರ ಕೂಟ ಇಬ್ಬರೂ ಪ್ರಕಟಿಸಿದ್ದರು. ಸಭೆಯ ಅನಂತರ ಸ್ವಾತಂತ್ರ್ಯ ಉದ್ಯಾನಕ್ಕೆ …

Read More »

ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಸಚಿವ ಎಸ್ ಟಿ ಎಸ್ ಚಾಲನೆ

ಶುಭ ವೃಶ್ಚಿಕ ಲಗ್ನದಲ್ಲಿ ಪ್ರಾರಂಭವಾದ ಪೂಜಾ ಕೈಂಕರ್ಯ, ಸೋಮವಾರದ ಕುಹುಯೋಗ ಜ್ಯೇಷ್ಠ ನಕ್ಷತ್ರದಲ್ಲಿ ಮುಂಜಾನೆ 4.30ರ ವೇಳೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪಂಚಲಿಂಗ ದರ್ಶನ ಮಹೋತ್ಸವದ ಮಹಾಪೂಜೆ, ಮಾಹಾಭಿಷೇಕವು ನೆರವೇರಿತು. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಈ ಮೂಲಕ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ‌ ಈ ಹಿಂದೆ 2013ರಲ್ಲಿ ಪಂಚಲಿಂಗ್ ದರ್ಶನ ಮಹೋತ್ಸವ ನಡೆದಿತ್ತು. ಈಗ ಏಳು ವರ್ಷಕ್ಕೆ ಬಂದಿರುವುದು ನನ್ನ ಸೌಭಾಗ್ಯ …

Read More »

ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಬಳಸಿದರೆ ಕಾನೂನು ಕ್ರಮ : ಜಿಲ್ಲಾಧಿಕಾರಿ ಹಿರೇಮಠ ಎಚ್ಚರಿಕೆ

ಬೆಳಗಾವಿ : ಜಿಲ್ಲೆಯಲ್ಲಿ ಜರಗುತ್ತಿರುವ ಗ್ರಾಮ ಪಂಚಾಯತಿಗಳ ಚುನಾವಣೆಯನ್ನು ಪಕ್ಷದ ಆಧಾರ ರಹಿತವಾಗಿ ನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ. ಕಾರಣ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ಕಾನೂನು ಉಲ್ಲಂಘನೆಯಾಗದಂತೆ ತಡೆಯಲು ಈ ಕೆಳಕಂಡ ಅಂಶಗಳನ್ನು ಗಮನಕ್ಕೆ ತರಲಾಗಿದೆ. 1) ರಾಜಕೀಯ ಪಕ್ಷಗಳು ಸಭೆ, ಸಮಾರಂಭ ಎರ್ಪಡಿಸಿ, ವೇದಿಕೆಯ ಮೇಲೆ ಪಕ್ಷದ ಭಾವುಟ, ಬ್ಯಾನರ್‌ಗಳನ್ನು ಬಳಸುವಂತಿಲ್ಲ. 2) ಸ್ಪರ್ಧಿಸುವ ಅಭ್ಯರ್ಥಿಗಳನ್ನು ತಮ್ಮ ಪಕ್ಷದ/ಬೆಂಬಲಿತ ಅಭ್ಯರ್ಥಿ …

Read More »