ದೇಶ ವಿರೋಧಿ ಹೇಳಿಕೆ ನೀಡಿದ ಅಮೂಲ್ಯಾ ಲಿಯೋನ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಎಬಿವಿಪಿ ಸಂಘಟನೆಗಳಿಂದ ಪ್ರತಿಭಟನೆಸ್ವತಂತ್ರ ಉದ್ಯಾನವನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನ್ ಎಂಬ ಯುವತಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಹಾಕಿರುವುದನ್ನು ಖಂಡಿಸಿ ಬೆಳಗಾವಿಯಲ್ಲಿ ಎಬಿವಿಪಿ ಸಂಘಟನಾಕಾರರು ಪ್ರತಿಭಟಿಸಿದರು
ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ದೇಶ ವಿರೋಧಿ ಚಟುವಟಿಕೆ ನಡೆದ ಘಟನೆ ಮಾಸುವ ಮುನ್ನವೇ ಮತ್ತೊಂದು ದೇಶದ್ರೋಹ ಚಟುವಟಿಕೆ ನಡೆಸಿರುವುದು ಖಂಡನೀಯ ದೇಶದ ಅನ್ನ ನೀರು ಮತ್ತು ಗಾಳಿಯನ್ನು ಸೇವಿಸಿ ವೈರಿ ದೇಶ ಪಾಕಿಸ್ತಾನಕ್ಕೆ ಜೈಕಾರ ಹಾಕುವ ಇಂತಹ ನೀಚ ಬುದ್ಧಿಯ ಯುವತಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ಕಾರ್ಯಕ್ರಮದ ಆಯೋಜಕರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.