Home / ಜಿಲ್ಲೆ / ಮನೆ ಮನೆಗೆ ಅಗತ್ಯವಸ್ತುಗಳ ಪೂರೈಕೆ ತಲುಪಿಸುವ ಯೋಜನೆ ಆರಂಭಿಸಲಾಗುವುದು: ಅಭಯ ಪಾಟೀಲ್

ಮನೆ ಮನೆಗೆ ಅಗತ್ಯವಸ್ತುಗಳ ಪೂರೈಕೆ ತಲುಪಿಸುವ ಯೋಜನೆ ಆರಂಭಿಸಲಾಗುವುದು: ಅಭಯ ಪಾಟೀಲ್

Spread the love

ಬೆಳಗಾವಿ:  ಕೊರೊನಾ ಸೋಂಕು ತಡೆಗಟ್ಟಲು ಸಲುವಾಗಿ ರಾಷ್ಟ್ರವ್ಯಾಪಿ  ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ  ನಗರ ಜನತೆಗೆ ಅಗತ್ಯ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆ ಆರಂಭಿಸಲಾಗುವುದು  ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಹೇಳಿದ್ದಾರೆ.

ಈ ವಿಚಾರವಾಗಿ  ಮಾತನಾಡಿದ ಅವರು, ಜನರು ಅನಗತ್ಯವಾಗಿ ಹೊರಗೆ ಬರುವುದನ್ನು ತಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಸಂಬಂಧಪಟ್ಟ ವ್ಯಾಪಾರಿಗಳು ಮತ್ತು ಜಿಲ್ಲಾಧಿಕಾರಿ, ಆಹಾರ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಚರ್ಚೆ  ಮಾಡಲಾಗಿದೆ. ಮನೆ ಮನೆಗೆ ತರಕಾರಿ ಸೇರಿ ಅಗತ್ಯ  ದಿನಸಿ ಸರಬರಾಜು ಮಾಡುವ ವ್ಯಾಪಾರಸ್ತರ ವಾಟ್ಸಪ್ ನಂಬರ್ ಜನರಿಗೆ ನೀಡಲಾಗುವುದು. ಜತೆಗೆ ಸಾರಿಗೆ ವ್ಯವಸ್ಥೆ ಮೂಲಕ ಮನೆ ಮನೆ ಬಾಗಿಲಿಗೆ ಸಾಮಗ್ರಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು.

ನೈಜ ಬೆಲೆಗೆ ಅಗತ್ಯ ಸಾಮಗ್ರಿಗಳು ದೊರಕಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಜನರು ಇದಕ್ಕೆ ಸ್ಪಂದಿಸಿ ಅನಗತ್ಯ ಹೊರಗಡೆ ತಿರುಗಾಡೆ ಲಾಕ್ ಡೌನ್ ಸ್ಪಂಧಿಸುವಂತೆ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ