ಬೆಂಗಳೂರು: ಜನರೊಂದಿಗೆ ಪೊಲೀಸರು ಸೌಜನ್ಯದಿಂದ ವರ್ತಿಸಬೇಕು. ಲಾಠಿ ಚಾರ್ಜ್ ಮಾಡಬಾರದು ಅಂತಾ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಜನರ ಮೇಲೆ ಲಾಠಿ ಚಾರ್ಜ್ ವಿಚಾರವಾಗಿ ಮಾತನಾಡಿದ ಅವರು, ಜನರಿಗೆ ಆಹಾರ ಧಾನ್ಯ, ದಿನಸಿ ಸುಲಭವಾಗಿ ಸಿಗುವಂತೆ ವ್ಯವಸ್ಥೆಯನ್ನು ಮಾಡಬೇಕು. ಬೀದಿ ಬದಿ ವ್ಯಾಪರ ಮಾಡುವವರಿಗೆ, ಅಟೋ ರಿಕ್ಷಾ ಎಲ್ಲ ಕಾರ್ಮಿಕ ವರ್ಗಕ್ಕೆ ಸರ್ಕಾರ ಹಣ ಸಂದಾಯ ಮಾಡಬೇಕು. ಗಾರ್ಮೆಂಟ್ಸ್ ಕೆಲಸಗಾರರಿಗೆ ಕನಿಷ್ಟ ಎರಡು ತಿಂಗಳು ಹಣ ಸಂದಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.