Breaking News
Home / ರಾಜ್ಯ / ಪಶ್ಚಿಮ ಬಂಗಾಳ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್: ಬಿಜೆಪಿ ದಿಗ್ವಿಜಯ

ಪಶ್ಚಿಮ ಬಂಗಾಳ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್: ಬಿಜೆಪಿ ದಿಗ್ವಿಜಯ

Spread the love

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳದ ಎಂಟು ಹಂತಗಳ ಸುದೀರ್ಘ ಅಸೆಂಬ್ಲಿ ಚುನಾವಣೆ ಇಂದು ಮುಕ್ತಾಯಗೊಂಡಿದೆ. ಚುನಾವಣಾ ಆಯೋಗದ ಆದೇಶದಂತೆ, ಮತದಾನ ಮುಗಿದ ನಂತರವಷ್ಟೇ ಮತಗಟ್ಟೆ ಸಮೀಕ್ಷೆಯನ್ನು ಪ್ರಕಟಿಸಬಹುದಾಗಿದೆ.

ವಿವಿಧ ವಾಹಿನಿಗಳು ಜಂಟಿಯಾಗಿ ಪಶ್ಚಿಮ ಬಂಗಾಳದಲ್ಲಿ ವಿಜಯ ಸಾಧ್ಯತೆ ಯಾರಿಗೆ ಎನ್ನುವುದರ ಬಗ್ಗೆ ಫಲಿತಾಂಶವನ್ನು ನೀಡುತ್ತಿದೆ. ಕೆಲವು ವಾಹಿನಿಗಳು ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೇರುತ್ತಾರೆ ಎಂದಿವೆ.

ಇನ್ನು ಕೆಲವು ವಾಹಿನಿಗಳು ಅತಂತ್ರ ಫಲಿತಾಂಶ ಬರಲಿದೆ ಎನ್ನುವ ವರದಿಯನ್ನು ಪ್ರಕಟಿಸುತ್ತಿದೆ. ಒಟ್ಟು 294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ, ಅಧಿಕಾರಕ್ಕೇರಲು ಬೇಕಾಗಿರುವ ಮಿನಿಮಮ್ ಸೀಟು 148.

ಪೀಪಲ್ಸ್ ಪಲ್ಸ್ ವರದಿ ಮಾಡಿರುವ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಬಿಜೆಪಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ದಿಗ್ವಿಜಯ ಸಾಧಿಸಿ, ಟಿಎಂಸಿಗೆ ಶಾಕ್ ನೀಡಲಿದೆ. ಎಡಪಕ್ಷಗಳ ಸೋಲಿನ ಸರಪಳಿ ಮುಂದುವರಿಯಲಿದೆ.

ಪೀಪಲ್ಸ್ ಪಲ್ಸ್ ವರದಿ ಮಾಡಿರುವ ಮತಗಟ್ಟೆ ಸಮೀಕ್ಷೆಯ ಪ್ರಕಾರ ಪಕ್ಷಗಳಿ ಎಷ್ಟು ಸ್ಥಾನ ಸಿಗಬಹುದು:

ತೃಣಮೂಲ ಕಾಂಗ್ರೆಸ್: 95

ಬಿಜೆಪಿ : 183

ಎಡಪಕ್ಷಗಳು : 16

ಇತರರು: 0


Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ