Home / ರಾಜ್ಯ / ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ? – ಬಿಜೆಪಿ

ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ? – ಬಿಜೆಪಿ

Spread the love

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಒತ್ತೆಯಾಗಿಟ್ಟುಕೊಂಡು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ರಾಜಕೀಯ ಆಟವಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡು ರಾಜಕೀಯ ಆಟ ಆಡುತ್ತಿರುವ ಮಾನ್ಯ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮದೆಂತಹ ಕುತ್ಸಿತ ಮನೋಸ್ಥಿತಿ ಇರಬಹುದು? ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ? ಎಂದು ಪ್ರಶ್ನಿಸಿದೆ.

ಸಂತ್ರಸ್ಥೆಯ ಕುರಿತು ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್‌ ನಾಯಕರು ಈಗೆಲ್ಲಿದ್ದಾರೆ? ಎಂದು ಬಿಜೆಪಿ ಕಿಡಿ ಕಾರಿದೆ.

ಊರಿಗೆಲ್ಲ ನೈತಿಕತೆಯ ಪಾಠ ಮಾಡುತ್ತಿದ್ದ ಖರ್ಗೆ, ಸಿದ್ದರಾಮಯ್ಯ, ರಮೇಶ್ ಕುಮಾರ್, ಎಚ್.ಕೆ. ಪಾಟೀಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಈಗ ಎಲ್ಲಿ ಭೂಗತರಾಗಿದ್ದಾರೆ? ಅನೈತಿಕ ರಾಜಕಾರಣದ ಪಿತಾಮಹ ಡಿ.ಕೆ. ಶಿವಕುಮಾರ್ ಅವರ ರಾಜೀನಾಮೆಗೆ ಕಾಂಗ್ರೆಸ್‌ ನಾಯಕರು ಏಕೆ ಒತ್ತಾಯಿಸುತ್ತಿಲ್ಲ? ಎಂದು ಪ್ರಶ್ನಿಸಿದೆ.

ಡಿಕೆಶಿ ರಾಜೀನಾಮೆಗೆ ಒತ್ತಾಯ…
ಎಲ್ಲವನ್ನೂ ತಾನೇ ಮುಂದೆ ನಿಂತು ಮಾಡಿಸುತ್ತಾರೆ, ಸದನದಲ್ಲಿ ಬೊಬ್ಬಿರಿಯುತ್ತಾರೆ, ಸುಭಗನಂತೆ ನಟಿಸುತ್ತಾರೆ. ಮಹಾನಾಯಕ ಡಿ.ಕೆ. ಶಿವಕುಮಾರ್ ಅವರೇ, ನಿಮಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟುಬಿಡಿ. ಒತ್ತೆಯಲ್ಲಿಟ್ಟುಕೊಂಡಿರುವ ಸಂತ್ರಸ್ತೆಯನ್ನು ಬಿಟ್ಟುಬಿಡಿ, ತನಿಖೆಗೆ ಸಹಕರಿಸಿ ಎಂದು ಬಿಜೆಪಿ ಆಗ್ರಹಿಸಿದೆ.

ರಾಜೀನಾಮೆ ನೀಡಲು ಇನ್ನೆಷ್ಟು ಕಾಲ ಬೇಕು ಮಾನ್ಯ ಡಿಕೆಶಿ ಅವರೇ!? ನೇರವಾಗಿ ಆರೋಪ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಂತ್ರಸ್ಥೆಯನ್ನು ಬಳಸಿಕೊಂಡ ಆರೋಪ ನಿಮ್ಮ ಮೇಲೆ ಇದೆ. ಇಷ್ಟೆಲ್ಲಾ ಮಾಡಿಯೂ ಸದನದಲ್ಲಿ ಹೇಗೆ ಮುಖ ಇಟ್ಟುಕೊಂಡು ಸಿಡಿ ವಿಚಾರವಾಗಿ ಮಾತನಾಡಿದ್ದೀರಿ? ತಕ್ಷಣವೇ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದೆ.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ