Breaking News
Home / ರಾಜ್ಯ / ಪೊಲೀಸ್ ಇಲಾಖೆ ಹಾಗೂ ಒಟ್ಟಾರೆ ಜಿಲ್ಲಾಡಳಿತ ಅಕ್ರಮದಲ್ಲಿ ಭಾಗಿಯಾಗಿದ್ದಾರಾ?:D.C.M.

ಪೊಲೀಸ್ ಇಲಾಖೆ ಹಾಗೂ ಒಟ್ಟಾರೆ ಜಿಲ್ಲಾಡಳಿತ ಅಕ್ರಮದಲ್ಲಿ ಭಾಗಿಯಾಗಿದ್ದಾರಾ?:D.C.M.

Spread the love

ರಾಯಚೂರು: ಡಿಸಿ, ಸಿಇಓ ,ಎಸ್‍ಪಿ ಸೇರಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಿರಾ? ಅಕ್ರಮ ಮರಳುಗಾರಿಕೆ, ಮಟಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ನೀವುಗಳು ಇದರಲ್ಲಿ ಶಾಮೀಲಾಗಿದ್ದಾರಾ? ಅಕ್ರಮ ನಡೆಯುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಮುಂದೆ ನಾನು ಎಂತಹ ಉಸ್ತುವಾರಿ ಸಚಿವ ಎನ್ನುವುದನ್ನು ತೋರಿಸುತ್ತೇನೆ ಲಕ್ಷ್ಮಣ್ ಸವದಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡಿದ್ದಾರೆ.ನಗರದ ಜಿ.ಪಂ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ಶಾಸಕರು ಜಿಲ್ಲಾಡಳಿತ ವಿರುದ್ಧ ಆರೋಪಗಳ ಸುರಿಮಳೆಗೈದರು. ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಜಿಲ್ಲೆಯಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ಸಭೆಯಲ್ಲಿ ಶಾಸಕ ದದ್ದಲ ಬಸನಗೌಡ ಹಾಗೂ ಶಿವನಗೌಡ ಆರೋಪಿಸಿದರು. ಶಾಸಕರು ಲಂಚಕೊಟ್ಟು ಅಧಿಕಾರಿಗಳ ಹತ್ತಿರ ಕೆಲಸ ಮಾಡಿಸಿಕೊಳ್ಳಬೇಕಿದೆ ಅಂತ ಶಿವನಗೌಡ ನಾಯಕ್ ಬೇಸರ ವ್ಯಕ್ತಪಡಿಸಿದರು.ಮರಳುಗಾರಿಕೆಗೆ ಬ್ರೇಕ್ ಬೀಳುತ್ತಿಲ್ಲ ಎಂದು ಶಾಸಕ ಬಸನಗೌಡ ಆಕ್ರೋಶಗೊಂಡರು. ದೊಡ್ಡ ಗಾಡಿಗಳಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗೆ ಬರುವ ಅನುದಾನವೇ ಕಡಿಮೆಯಿದೆ. ಹತ್ತಿ ಹೊತ್ತು ಬರುವ ರೈತರ ಗಾಡಿಗಳಿಗೆ ದಂಡ ಹಾಕ್ತಾರೆ ಮರಳು ಲಾರಿಗಳನ್ನ ಹಾಗೆಯೇ ಬಿಡುತ್ತಾರೆ ಎಂದು ಶಾಸಕ ಬಸನಗೌಡ ಹೇಳಿದರು.

ಶಾಸಕರ ಆರೋಪ ಕುರಿತು ಅಧಿಕಾರಿಗಳನ್ನ ಪ್ರಶ್ನಿಸಿದ ಡಿಸಿಎಂ ಒಬ್ಬೊಬ್ಬರನ್ನೆ ತರಾಟೆಗೆ ತೆಗೆದುಕೊಂಡರು. ಆರ್ ಟಿ ಓ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಒಟ್ಟಾರೆ ಜಿಲ್ಲಾಡಳಿತ ಅಕ್ರಮದಲ್ಲಿ ಭಾಗಿಯಾಗಿದ್ದಾರಾ ಯಾಕೆ ಅಕ್ರಮ ತಡೆಯುತ್ತಿಲ್ಲ. ಅಕ್ರಮಕ್ಕೆ ಬ್ರೇಕ್ ಬೀಳದಿದ್ದರೆ ತಪ್ಪಿತಸ್ಥರನ್ನ ಅಮಾನತ್ತು ಮಾಡುವುದಾಗಿ ಎಚ್ಚರಿಕೆ ನೀಡಿದರು. ಮುಂದೆ ಅಕ್ರಮ ನಡೆದರೆ ಎಸ್ ಪಿ ಹಾಗೂ ಜಿಲ್ಲಾಧಿಕಾರಿಯೇ ಹೊಣೆಗಾರರಾಗುತ್ತಾರೆ ಎಂದರು.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ