ಶಿವಮೊಗ್ಗ: ಆಯನೂರು ಬಳಿ ಹಿಟ್ & ರನ್ಗೆ ಮೆಸ್ಕಾಂ ಲೈನ್ಮ್ಯಾನ್ ಬಲಿಯಾಗಿದ್ದಾರೆ.
ಹಾರನಹಳ್ಳಿ ಮೆಸ್ಕಾಂ ಶಾಖೆಯ ತಿರುಮಲೇಶ್ ರೆಡ್ಡಿ (30) ಮೃತ ದುರ್ದೈವಿ. ಇವರು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಮೂಲದವರಾಗಿದ್ದಾರೆ. ಕರ್ತವ್ಯ ಮುಗಿಸಿ ಬೈಕ್ನಲ್ಲಿ ವಾಪಸ್ ಆಗುವಾಗ ಈ ಅಪಘಾತ ನಡೆದಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ.
ಮೈಸವಳ್ಳಿ- ವೀರಣ್ಣನಬೆನವಳ್ಳಿಯಲ್ಲಿ ವಿದ್ಯುತ್ ದುರಸ್ತಿಗೆ ಅವರು ತೆರಳಿದ್ದರು. ಅಲ್ಲಿಂದ ವಾಪಸ್ ಆಗುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ವಾಹನ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7