Breaking News

ಕುರುಕಲು ತಿಂಡಿ ಪೊಟ್ಟಣದಲ್ಲಿದ್ದ ಆಟಿಕೆ ನುಂಗಿ ಮಗು ಸಾವು

Spread the love

ದಾವಣಗೆರೆ: ಕುರುಕಲು ತಿಂಡಿ ಪೊಟ್ಟಣದಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಮಗು  ಸಾವನ್ನಪ್ಪಿದ ಘಟನೆ ಚನ್ನಗಿರಿ  ಪಟ್ಟಣದ ಕೌಸರ್ ಮಸೀದಿ ಏರಿಯಾದಲ್ಲಿ ನಡೆದಿದೆ.

ಅಲಿಯಾ ಶೇಕ್ (4 ವರ್ಷ, 4 ತಿಂಗಳು) ಸಾವನ್ನಪ್ಪಿದ ಮಗು. ಮನೆಯ ಪಕ್ಕದಲ್ಲೇ ಇದ್ದ ಅಂಗಡಿಯಿಂದ ಮಗು ಕುರುಕಲು ತಿಂಡಿ ತಂದು ತಿನ್ನುತ್ತಿತ್ತು. ಈ ವೇಳೆ ಅದರಲ್ಲಿದ್ದ ಆಟಿಕೆಯನ್ನು ನುಂಗಿ, ಮಗು ಅಸ್ವಸ್ಥಗೊಂಡಿತ್ತು.

ಕೂಡಲೇ ಮಗುವನ್ನು ಪೋಷಕರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಪಡೆದು ಮನೆಗೆ ಕರೆತಂದ ತಕ್ಷಣ ಅಸ್ವಸ್ಥಗೊಂಡು ಮಗು ಸಾವನ್ನಪ್ಪಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

About Laxminews 24x7

Check Also

ಆಶಾ ಕಾರ್ಯಕರ್ತೆಯರ ಸೇವೆ ಕಡೆಗಣಿಸುವ ಉದ್ದೇಶವಿಲ್ಲ: ಯು.ಟಿ ಖಾದರ್ ಸ್ಪಷ್ಟನೆ

Spread the loveಶಿವಮೊಗ್ಗ: ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಆರೋಗ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ