Breaking News
white shape of body and blood stains on asphalt texture

ಬೆಳಗಾವಿಯಲ್ಲಿ ಜೋಡಿ ಕೊಲೆ

Spread the love

ಬೆಳಗಾವಿ: ಆಸ್ತಿ ವಿಚಾರವಾಗಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದವರನ್ನು ರಮೇಶ್ ಹಣಮಂತ ನಾಯ್ಕರ (29) ಹಾಗೂ ಬಸವ್ವ ಭೀಮಪ್ಪ ನಾಯ್ಕರ (60) ಎಂದು ಗುರುತಿಸಲಾಗಿದೆ.

ಆಸ್ತಿ ಸಂಬಂಧಿತ ವಿಚಾರವಾಗಿ ಕುಟುಂಬದವರ ನಡುವೆ ನಡೆಯುತ್ತಿದ್ದ ಕಲಹವೇ ಈ ಜೋಡಿ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ವಿವಾದ ತೀವ್ರಗೊಂಡ ಪರಿಣಾಮ ಇಬ್ಬರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಮಡಿವಾಳರ ಅವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಂದೇ ಗ್ರಾಮದಲ್ಲಿ ಇಬ್ಬರು ಹತ್ಯೆಯಾಗಿರುವ ಘಟನೆ ಜೀವಾಪುರ ಗ್ರಾಮಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಕೊಲೆಯ ಹಿಂದಿನ ನಿಖರ ಕಾರಣ ಹಾಗೂ ಆರೋಪಿಗಳ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


Spread the love

About Laxminews 24x7

Check Also

ಮಾತುಕತೆಗಾಗಿ ಮಸ್ತಾನ್‌ ದರ್ಗಾ ಬಳಿಯ ಲಾಡ್ಜ್‌ಗೆ ಬಂದಿದ್ದ ಜೋಡಿ – ಇಂದು ಚೆಕ್‌ಔಟ್‌ ಆಗುವಾಗ ಗಲಾಟೆ; ಇರಿದು ಕೊಂದ ಪ್ರಿಯಕರ

Spread the loveಬೆಂಗಳೂರು: ಇಲ್ಲಿನ ಕಾಟನ್‌ಪೇಟೆಯ  ಮಸ್ತಾನ್‌ ದರ್ಗಾ ಬಳಿಯಿರುವ ರಿಜೆನ್ಸಿ ಇನ್‌ ಲಾಡ್ಜ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ