Breaking News

ಸಮಾನತೆ ಇರಬಾರದು ಅನ್ನೋ ಕಾರಣಕ್ಕೆ ಸಂವಿಧಾನ ಮುಗಿಸುವುದು RSS, ಬಿಜೆಪಿಯ ಮುಖ್ಯ ಉದ್ದೇಶ: ರಾಗಾ ಕಿಡಿ

Spread the love

ನವದೆಹಲಿ: ಭಾರತದಲ್ಲಿ ಸಮಾನತೆ ಇರಬಾರದು ಎಂಬ ಕಾರಣಕ್ಕೆ ಸಂವಿಧಾನವನ್ನು ಮುಗಿಸುವುದೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಏಪ್ರಿಲ್ 14ರಂದು ನಡೆಯಲಿರುವ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ದೆಹಲಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂಬೇಡ್ಕರ್ ಹಾದಿಯಲ್ಲಿ ನಡಿಗೆ, ಸಂವಿಧಾನಕ್ಕಾಗಿ ನಡಿಗೆ ಮ್ಯಾರಾಥಾನ್ ಚಾಲನೆ ನೀಡಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.

ಸಂವಿಧಾನ ಭಾರತದ ಅಡಿಪಾಯವಾಗಿದೆ. ಸಂವಿಧಾನವಿಲ್ಲದಿದ್ದರೆ ಇಂದು ನಾವು ಭಾರತ ಎಂದು ಕರೆಯಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಮನಸ್ಥಿತಿ ಹೊಂದಿರುವ ಜನರು ಇಂದು ಸಂವಿಧಾನವನ್ನ ಅಳಿಸಿಹಾಕಲು ಬಯಸುತ್ತಿದ್ದಾರೆ. ಭಾರತದ ಪ್ರತಿಯೊಬ್ಬ ಪ್ರಜೆ ಸಮನಾಗಿ ಕಾಣಿಸಿಕೊಳ್ಳುವುದು ಬಿಜೆಪಿಗೆ ಇಷ್ಟವಿಲ್ಲ. ಆದ್ದರಿಂದಲೇ ಸಂವಿಧಾನದ ನಾಶ ಮಾಡಲು ಯತ್ನಿಸುತ್ತಿದ್ದಾರೆ, ಸಂವಿಧಾನವನ್ನು ರಕ್ಷಿಸುವುದು ನಮ್ಮ ಗುರಿ ಎಂದಿದ್ದಾರೆ.


Spread the love

About Laxminews 24x7

Check Also

ನಮ್ಗೆ 1 ವೋಟು, ಅಂಬಾನಿಗೆ 1 ಲಕ್ಷ ವೋಟ್‌ ಇರುತ್ತಾ? – ವಿಪಕ್ಷಗಳಿಗೆ ತೇಜಸ್ವಿ ಸೂರ್ಯ ತರಾಟೆ

Spread the loveನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಕ್ಷೇತ್ರ ಪುನರ್‌ವಿಂಗಡಣೆಗಾಗಿ ಸಂವಿಧಾನ (131ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ