Breaking News

ಗದಗ ASI ಲೋಕಾಯುಕ್ತ ಬಲೆಗೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸಪ್ಪ

Spread the love

ಗದಗ: ಲೋಕಾಯುಕ್ತ  ಅಧಿಕಾರಿಗಳ ದಾಳಿ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ  ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಸದ್ಯ ಮೂವರನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಲಾಗಿದೆ. ಇದರ ಬೆನ್ನಲ್ಲೇ ಇದೀಗ ಗದಗ  ಶಹರ ಠಾಣೆ ASI ಚನ್ನಬಸಪ್ಪ ಇಂಗಳಳ್ಳಿ ಸಹ ಲೋಕಾಯುಕ್ತ ಬಲೆಬಿದ್ದಿದ್ದಾರೆ. ಪಿಟಿಷನ್ ಅರ್ಜಿ ವಿಚಾರಣೆಗೆ ಲಂಚ 10 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್​​ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಗದಗ ಶಹರ ಪೊಲೀಸ್ ಠಾಣೆಯ ಎಎಸ್ಐ ಚೆನ್ನಬಸಪ್ಪ ಇಂಗಳಳ್ಳಿ ಅವರು ಪಿಟಿಷನ್ ಅರ್ಜಿ ವಿಚಾರಣೆಗೆ ಸುಮಾರು ಹತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವೀರೇಶ ಪೂಜಾರ್ ಎಂಬುವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆ, ಇಂದು (ಫೆಬ್ರವರಿ 25) ಪೊಲೀಸ್ ಠಾಣೆಯಲ್ಲಿ ಹತ್ತು ಸಾವಿರ ಲಂಚ ಪಡೆಯುವಾಗ ರೆಡ್​​ಹ್ಯಾಂಡ್ ಆಗಿ ಲಾಕ್​ ಆಗಿದ್ದಾರೆ. ಲೋಕಾಯುಕ್ತ ಡಿವೈಎಸ್​ಪಿ ವಿಜಯ ಬಿರಾದಾರ ನೇತೃತ್ವದ ತಂಡ ದಾಳಿ ಮಾಡಿದೆ.

 


Spread the love

About Laxminews 24x7

Check Also

ಕೆಲಸ ಮುಗಿಸಿ ಬರುವಾಗ ಸಿಡಿಲು ಬಡಿದು ರೈತ ಸಾವು

Spread the love ಗದಗ: ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಗದಗ  ಜಿಲ್ಲೆಯ ರೋಣ  ತಾಲೂಕಿನ ಮೆಣಸಗಿ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ