ವಾಷಿಂಗ್ಟನ್: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಜೊತೆಗಿನ ಸಂಬಂಧಕ್ಕಾಗಿ ಕ್ಷಮೆಯಾಚಿಸಿದ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ರಷ್ಯಾದ ಮಹಿಳೆಯರೊಂದಿಗೆ ತನಗೆ ಎರಡು ಸಂಬಂಧಗಳಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಗೇಟ್ಸ್ ಫೌಂಡೇಶನ್ ಸಿಬ್ಬಂದಿಗಳ ಜೊತೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಅವರು ತಾನು ಎಪ್‌ಸ್ಟೀನ್ ಅಪರಾಧಗಳಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ಗೆಟ್ಸ್ ಫೌಂಡೇಶನ್ ವಕ್ತಾರರು ಮಾಧ್ಯಮಗಳ ಜೊತೆ ಹಂಚಿಕೊಂಡ ಹೇಳಿಕೆಯ ಪ್ರಕಾರ ಇತ್ತೀಚಿಗೆ ಟೌನ್ ಹಾಲ್ ಸಭೆಯಲ್ಲಿ ಬಿಲ್ ಗೇಟ್ಸ್( (Bill Gates) ತನ್ನ ಕೆಲಸದ ಜವಾಬ್ದಾರಿಯನ್ನು ವಹಿಸಿಕೊಂಡು ಎಪ್‌ಸ್ಟೀನ್ ಜೊತೆಗಿನ ಸಂಬಂಧಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಬಿಲ್ ಗೇಟ್ಸ್ ಹೇಳಿದ್ದೇನು?
ಎಪ್‌ಸ್ಟೀನ್ ಜೊತೆಗಿದ್ದ ಮಹಿಳೆಯರೊಂದಿಗೆ ನಾನು ಸಮಯ ಕಳೆಯಲಿಲ್ಲ. ನಾನು ರಷ್ಯಾದ ಮಹಿಳೆಯರೊಂದಿಗೆ ಎರಡು ಸಂಬಂಧಗಳನ್ನು ಹೊಂದಿದ್ದೇನೆ. ಆದರೆ ಆ ಮಹಿಳೆಯರು ಎಪ್‌ಸ್ಟೀನ್‌ನ ರೆಸಾರ್ಟ್‌ನಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಲ್ಲ.
ನಾನು ಅಕ್ರಮವಾಗಿ ಏನನ್ನೂ ಮಾಡಿಲ್ಲ. ನಾನು ಅಕ್ರಮವಾಗಿ ಏನನ್ನೂ ನೋಡಲಿಲ್ಲ. ಎಪ್‌ಸ್ಟೀನ್ ಜೊತೆಗಿದ್ದ ಮಹಿಳೆಯರೊಂದಿಗೆ ಯಾವುದೇ ಸಮಯವನ್ನು ಕಳೆದಿಲ್ಲ. ಎಪ್‌ಸ್ಟೀನ್ ಜೊತೆಗಿನ ಸಭೆಗೆ ನಾನು ಗೇಟ್ಸ್ ಫೌಂಡೇಶನ್‌ನ ಅಧಿಕಾರಿಗಳನ್ನು ಕರೆತಂದಿದ್ದು ತಪ್ಪು. ನಾನು ಮಾಡಿದ ತಪ್ಪಿನಿಂದಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
2011 ರಲ್ಲಿ ಎಪ್‌ಸ್ಟೀನ್ ನಾನು ಭೇಟಿಯಾಗಿದ್ದೆ. ಮೂರು ವರ್ಷಗಳಲ್ಲಿ ನಾವು ಹಲವಾರು ಬಾರಿ ಆತನ ಜೊತೆ ಭೋಜನ ಮಾಡಿದ್ದೇನೆ. ಆದರೆ ಆತನ ಕುಖ್ಯಾತ ದ್ವೀಪಕ್ಕೆ ಎಂದಿಗೂ ಭೇಟಿ ನೀಡಿಲ್ಲ. ವಿಶ್ವದ ಶ್ರೀಮಂತ ವ್ಯಕ್ತಿಗಳ ಜೊತೆ ಆತನಿಗೆ ಪರಿಚಯವಿತ್ತು. ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಹಣವನ್ನು ನೀಡಬೇಕು ಎಂದು ಆತ ಹೇಳಿದ್ದ ಎಂದು ಈ ಹಿಂದೆ ತಿಳಿಸಿದ್ದರು.
ಅಮೆರಿಕದ ನ್ಯಾಯಾಂಗ ಇಲಾಖೆ ಎಪ್‌ಸ್ಟೀನ್‌ಗೆ ಸಂಬಂಧಿಸಿದ 30 ಲಕ್ಷಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಈ ದಾಖಲೆಯಲ್ಲಿ ಬಿಲ್ ಗೇಟ್ಸ್ ರಷ್ಯಾದ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ ನಂತರ ಲೈಂಗಿಕವಾಗಿ ಹರಡುವ ರೋಗಕ್ಕೆ (STD) ತುತ್ತಾಗಿದ್ದರು. ಇದಕ್ಕೆ ಹೆದರಿ ಎಪ್‌ಸ್ಟೀನ್ ಬಳಿ ಪತ್ನಿ ಮೆಲಿಂಡಾಗೆ ರಹಸ್ಯವಾಗಿ ನೀಡಬಹುದಾದ ಆ್ಯಂಟಿಬಯೋಟಿಕ್ ಕೇಳಿದ್ದರು ಎಂದು ಆರೋಪಿಸಲಾಗಿದೆ.
ಜೆಫ್ರಿ ಎಪ್‌ಸ್ಟೀನ್ 2019ರಲ್ಲಿ 30 ದಿನಗಳ ಸೆರೆವಾಸ ಅನುಭವಿಸಿದ್ದಾಗಲೇ ಸಾವನ್ನಪ್ಪಿದ್ದ. ತನಿಖೆ ನಡೆಸಿರುವ ಎಫ್‌ಐಬಿ ಎಪ್‌ಸ್ಟೀನ್ ಎಸ್ಟೇಟ್‌ನಿಂದ 20 ಸಾವಿರ ಪುಟಗಳ ದಾಖಲೆಯನ್ನು ವಶಕ್ಕೆ ಪಡೆದಿತ್ತು. ಈ ದಾಖಲೆಯಲ್ಲಿ ಟ್ರಂಪ್‌ಗೆ ಸಂಬಂಧಿಸಿದ 2018 ಮೆಸೇಜ್‌ಗಳು ಇವೆ.
ಯಾರು ಜೆಫ್ರಿ ಎಪ್‌ಸ್ಟೀನ್?
ಅಮೆರಿಕದ ಶ್ರೀಮಂತ ಫೈನಾನ್ಶಿಯರ್. ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ಶಿಕ್ಷಣ ತಜ್ಞರು, ಸೆಲೆಬ್ರಿಟಿಗಳಿಗೆ ಹುಡುಗಿಯರನ್ನು ಕಳ್ಳಸಾಗಣೆ ಮಾಡುತ್ತಿದ್ದ. ಇಂಥ ಎಪ್‌ಸ್ಟೀನ್ ಜೊತೆ ಟ್ರಂಪ್‌ಗೆ ದೀರ್ಘಕಾಲದ ಒಡನಾಟ ಇತ್ತು.
ಅಕ್ರಮ ದಂಧೆ ಪ್ರಕರಣ ಹೊರಗೆ ಬರುತ್ತಿದ್ದಂತೆ 2019 ರ ಜುಲೈ 6 ರಲ್ಲಿ ಎಪ್‌ಸ್ಟೀನ್‌ನನ್ನು ಬಂಧಿಸಲಾಗಿತ್ತು. ನ್ಯೂಯಾರ್ಕ್ ಜೈಲಿನಲ್ಲಿರುವಾಗಲೇ ಆಗಸ್ಟ್ 10 ರಂದು ಈತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ಬಂಧನಕ್ಕೆ ಒಳಗಾದ ಒಂದು ತಿಂಗಳ ಒಳಗಡೆ ಈತ ಸಾವನ್ನಪ್ಪಿದ್ದು ವ್ಯಾಪಕ ಚರ್ಚೆ, ಅನುಮಾನ ಎದ್ದಿತ್ತು. ಎಪ್‌ಸ್ಟೀನ್ ಸಾವಿನ ಹಿಂದೆ ಟ್ರಂಪ್ (Donald Trump) ಕೈವಾಡ ಇದೆ ಎಂದಿದ್ದ ಡೆಮಾಕ್ರೆಟಿಕ್ ಸದಸ್ಯರು, ತನಿಖೆ ನಡೆದರೆ ಟ್ರಂಪ್ ಪಾತ್ರ ಹೊರ ಬರುತ್ತದೆ ಎಂದಿದ್ದರು.
Laxmi News 24×7