Breaking News

ಜೈಲಿನಲ್ಲಿ ಟಿವಿ ಕೊಟ್ಟಿದ್ದಕ್ಕಾಗಿ ಜಡ್ಜ್‌ಗೆ ಥ್ಯಾಂಕ್ಸ್‌ ಹೇಳಿದ ದರ್ಶನ

Spread the love

ಬೆಂಗಳೂರು: ತಲೆ ದಿಂಬು, ಟಿವಿ ಆಯ್ತು ಈಗ ವಿಚಾರಣೆ ವೇಳೆ ನೇರ ಕೋರ್ಟ್ ಹಾಜರಾತಿಗೆ ನಟ ದರ್ಶನ್ ಮನವಿ ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ತ್ವರಿತಗತಿಯಲ್ಲಿ ನಡೆಸುವಂತೆ, ಪ್ರತಿನಿತ್ಯ ವಿಚಾರಣೆ ನಡೆಸುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಈ ವೇಳೆ, ಜೈಲಿನಲ್ಲಿ ಟಿವಿ ಕೊಟ್ಟಿದ್ದಕ್ಕಾಗಿ ನ್ಯಾಯಾಧೀಶರಿಗೆ ದರ್ಶನ್ ಧನ್ಯವಾದ ಹೇಳಿದರು. ಥ್ಯಾಂಕ್ಸ್ ಹೇಳಬಾರದು ನಮ್ಮ ಕೆಲಸ ಮಾತ್ರ ಮಾಡಿದ್ದೇವೆ, ಥ್ಯಾಂಕ್ಸ್ ಹೇಳುವ ಅಗತ್ಯವಿಲ್ಲ ಅಂತಾ ನ್ಯಾಯಾಧೀಶರು ತಿಳಿಸಿದರು.
ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ದರ್ಶನ್ ಹಲವು ಮನವಿ ಮುಂದಿಟ್ಟರು. ಕುಟುಂಬದವರು ಭೇಟಿಗೆ ಬಂದಾಗ ಒಳಗೆ ಬಿಡಲು ಸೂಚಿಸಬೇಕು, ಒಳ ಸಂದರ್ಶನಕ್ಕೆ ಅವಕಾಶ ನೀಡುವಂತೆ ದರ್ಶನ್ ಮನವಿ ಮಾಡಿದರು.

ಈ ವೇಳೆ ಒಂದು ದಿನ ನೇರವಾಗಿ ಕೋರ್ಟ್‌ ಹಾಜರಾತಿಗೆ ಸೂಚಿಸಲು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ವೇಳೆ ದರ್ಶನ್‌, ನ್ಯಾಯಾಲಯಕ್ಕೆ ಹಾಜರು ಪಡಿಸಿದರೆ ಒಂದು ದಿನವಾದರೂ ಮನೆಯೂಟ ಸಿಗುತ್ತದೆ. ಜೈಲಿನಲ್ಲಿ ನೀಡುತ್ತಿರುವ ಊಟ ಸಾಕಾಗುತ್ತಿಲ್ಲ. ಹೀಗಾಗಿ ಖುದ್ದು ಹಾಜರಿಗೆ ಸೂಚನೆ ನೀಡುವಂತೆ ದರ್ಶನ್ ಕೇಳಿಕೊಂಡರು. ಆರೋಪಿ ಭೇಟಿ ಹೆಚ್ಚು ಸಮಯ ಸಿಗುತ್ತಿಲ್ಲ. ಹೀಗಾಗಿ ಖುದ್ದು ಹಾಜರಿಗೆ ಅವಕಾಶ ನೀಡಿ ಎಂದ ವಕೀಲರು ವಾದ ಮಂಡಿಸಿದರು. ಮನವಿ ಆಲಿಸಿದ ನ್ಯಾಯಾಧೀಶರು, ಖುದ್ದು ಹಾಜರಿಗೆ ಮನವಿ ಸಂಬಂಧ ಅರ್ಜಿ ಸಲ್ಲಿಸಿ ಎಂದು ಸೂಚನೆ ನೀಡಿದರು.


Spread the love

About Laxminews 24x7

Check Also

ಪಿಯುಸಿ ಎರಡೂ ಪರೀಕ್ಷೆಗಳಲ್ಲಿ ಪಡೆದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ: ಕೆಇಎ

Spread the love ಬೆಂಗಳೂರು: ದ್ವಿತೀಯ ಪಿಯುಸಿ  ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆ- 1 ಮತ್ತು ಪರೀಕ್ಷೆ-2ರಲ್ಲಿ ಪಡೆದ ಅಂಕಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ