Breaking News

ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಂದ್ರು ಲಮಾಣಿ – ಶಾಸಕರ ಉಚ್ಚಾಟನೆಗೆ ಬಿಜೆಪಿ ಚಿಂತನೆ

Spread the love

ಬೆಂಗಳೂರು: ಶಾಸಕ ಡಾ.ಚಂದ್ರು‌ ಲಮಾಣಿ  ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಕಮಿಷನ್ ವಿರುದ್ಧ ಹೋರಾಟ ನಡೆಸಿ ಕಾಂಗ್ರೆಸ್ ವಿರುದ್ಧ ಕೆಂಡ ಉಗುಳುತ್ತಿದ್ದ ಬಿಜೆಪಿಗೆ ತಮ್ಮದೇ ಪಕ್ಷದ ಶಾಸಕ ಸಿಕ್ಕಿಬಿದ್ದಿರೋದು ಸಹಿಸಲಾಗದ ಮರಣ ಸಂಕಟ ಬಂದಂತಾಗಿದೆ. ಈ ಹಿನ್ನೆಲೆ ಚಂದ್ರು ಲಮಾಣಿ ವಿರುದ್ಧ ಶಿಸ್ತು ಕ್ರಮಕ್ಕೆ ಚಿಂತನೆ ನಡೆಸಿದೆ.

ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಟ್ರ್ಯಾಪ್‌ ಆಗಿದ್ದು, ಈ ಪ್ರಕರಣ ಸಂಬಂಧ ವರಿಷ್ಠರಿಗೆ ರಾಜ್ಯ ಬಿಜೆಪಿ ವರದಿ ಕಳುಹಿಸಿದೆ. ಅಲ್ಲದೇ ಶಾಸಕರ ಪ್ರಕರಣ ಬಿಜೆಪಿ ಕಮಿಷನ್‌ ಹೋರಾಟಕ್ಕೂ ಹಿನ್ನಡೆ ಆಗಿರೋದ್ರಿಂದ, ಲೋಕಾಯುಕ್ತ ವರದಿ ಬಂದ ಬಳಿಕ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಲೋಕಾಯುಕ್ತ ವರದಿಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ ಪಕ್ಷದಿಂದ ಅಮಾನತ್ತು ಅಥವಾ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡುವ ಸಾಧ್ಯತೆಗಳಿವೆ. ಈ ಮಧ್ಯೆ ವಿಪಕ್ಷ ನಾಯಕ ಆರ್.ಅಶೋಕ್ ಅವರಿಂದಲೂ ಶಾಸಕ ಚಂದ್ರು ಲಮಾಣಿಗೆ ನೋಟಿಸ್‌ ಕೊಡಲು ಸಿದ್ಧತೆ ನಡೆದಿದೆ.
ಈ ಮಧ್ಯೆ, ಜನಪ್ರತಿನಿಧಿ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಲಮಾಣಿ ವಿರುದ್ಧ ನ್ಯಾ.ಸಂತೋಷ್ ಗಜಾನನ ಭಟ್ ಗರಂ ಆಗಿದ್ದಾರೆ. ತುರ್ತಾಗಿ ಜಾಮೀನು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಕ್ಕೆ, ನಿಮ್ಮನ್ನ ಲೋಕಾಯುಕ್ತ ಟ್ರ್ಯಾಪ್‌ ಮಾಡಿದೆ. ನಿಮಗೆ ಶಾರ್ಟ್ ಡೇಟ್ ಬೇರೆ ಬೇಕೆ? ಜಾಮೀನು ಏಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಪ್ರಕರಣ ಸಂಬಂಧ ಶಾಸಕರನ್ನ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿ ಬಂದಿದೆ. ಆದ್ರೆ, ಈ ಎಲ್ಲಾ ಆರೋಪಗಳನ್ನು ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ್ ಸ್ವಾಮೀಜಿ ತಳ್ಳಿಹಾಕಿದ್ದಾರೆ.

ಶಾಸಕ ಡಾ.ಚಂದ್ರು ಲಮಾಣಿ ಬಗ್ಗೆ ನಾನು ಮಾತನಾಡಿರೋದು ಸತ್ಯ. 6 ತಿಂಗಳ ಹಿಂದೆ ಚಂದ್ರು ಲಮಾಣಿ ಬಗ್ಗೆ ಮಾತಾಡಿರೋ ಆಡಿಯೋ ಅದು. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮಾತಾಡಿದ್ದೆ. ಆದ್ರೆ, ಲೋಕಾಯುಕ್ತ ದಾಳಿಗೂ ನಾನು ಮಾತಾಡಿದ ಆಡಿಯೋಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು, ಶಾಸಕರು ನನ್ನನ್ನು ಗ್ರಾಮದಿಂದ ಓಡಿಸಲು ಸಂಚು ರೂಪಿಸಿದ್ದರು. 18 ಲಕ್ಷ ರೂಪಾಯಿ ಖರ್ಚು ಮಾಡಿ ಮಠದಿಂದ ಓಡಿಸಲು ಪ್ಲ್ಯಾನ್ ಮಾಡಿದ್ರು ಎಂದು ಆರೋಪಿಸಿದ್ದಾರೆ. ಇತ್ತ, ಶಿರಹಟ್ಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚಂದ್ರು ಲಮಾಣಿ ವಿರುದ್ಧ ಪ್ರತಿಭಟನೆ ನಡೆಸಿದ್ರು. ಶಾಸಕ ಸ್ಥಾನದಿಂದ ಲಮಾಣಿಯನ್ನ ಅಮಾನತು ಮಾಡುವಂತೆ ಆಗ್ರಹಿಸಿದ್ರು.


Spread the love

About Laxminews 24x7

Check Also

ಬಿಕ್ಲು ಶಿವ ಕೊಲೆ ಕೇಸಲ್ಲಿ ಶಾಸಕ ಬೈರತಿ ಬಸವರಾಜ್ ಜೈಲಿಗೆ

Spread the loveಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್‌ರನ್ನು  ಫೆ.26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ