Breaking News

ಪತ್ರಕರ್ತ ಅಲ್ತಾಫ್ ಬಸರೀಕಟ್ಟಿ ಅವರಿಗೆ ರಾಷ್ಟ್ರೀಯ ಆದರ್ಶ ಪತ್ರಕರ್ತ ಗೌರವ ಪ್ರಶಸ್ತಿ

Spread the love

ಪತ್ರಕರ್ತ ಅಲ್ತಾಫ್ ಬಸರೀಕಟ್ಟಿ ಅವರಿಗೆ ರಾಷ್ಟ್ರೀಯ ಆದರ್ಶ ಪತ್ರಕರ್ತ ಗೌರವ ಪ್ರಶಸ್ತಿ
ಖಾನಾಪೂರ ಇನ್ ನ್ಯೂಸ್ ಚಾನಲ್ ರಿಪೋರ್ಟರ್ ಅಲ್ತಾಫ್ ಎಂ ಬಸರೀಕಟ್ಟಿ ಅವರಿಗೆ ನಿಪ್ಪಾಣಿ ತಾಲೂಕಿನ ಬೇಡಕಿಹಾಳದಲ್ಲಿ ನಡೆದ ೫ನೇ ಗ್ರಾಮೀಣ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರೇರಣಾ ಗೌರವ ಪ್ರಶಸ್ತಿ 2025 ರ ಸಮ್ಮಾನ ಪತ್ರ, “ರಾಷ್ಟ್ರೀಯ ಆದರ್ಶ ಪತ್ರಕರ್ತ ಗೌರವ ಪ್ರಶಸ್ತಿ” ನೀಡಿ ಗೌರವಿಸಲಾಯಿತು
ಇನ್ ನ್ಯೂಸ್ ಚಾನಲ್ ರಿಪೋರ್ಟರ್ ಆಗಿ ಸೇವೆ ಸಲ್ಲಿಸಿದ ಇವರ ಕಾರ್ಯ ಗುರುತಿಸಿ ಕೈ ಬಸವಂತ ನಾಗು ಶಿಘಾಡೆ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ವಿಕ್ರಮ್ ಬಸವಂತ ಶಿಘಾಡೆ ಅವರು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ದೇಶಭಕ್ತ ರತ್ನಪ್ಪಾ ಕುಂಬಾರ ಸಭಾಗೃಹ ಬೇಡಕಿಹಾಳದಲ್ಲಿ ನಡೆದು ಸಮಾರಂಭದಲ್ಲಿ ಈ ಪ್ರಶಸ್ತಿ ವಿತರಣೆ ಮಾಡಿ ಗೌರವಿಸಲಾಯಿತು.
ಅದರಂತೆಯೇ ಖಾನಾಪೂರ ಪಟ್ಟಣ ಪಂಚಾಯಿತಿ ಸದಸ್ಯೆ ಮೇಘಾ ಕುಂದರಗಿ ಅವರಿಗೆ ರಾಷ್ಟ್ರೀಯ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಬೀಡಿ ಗ್ರಾಮ ಪಂಚಾಯಿತಿ ಸದಸ್ಯೆ ದೀಪಾ ಪಾಟೀಲ ಅವರನ್ನು ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿ, ಖಾನಾಪೂರದ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಂದರಗಿ ಅವರಿಗೆ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ, ಹಲಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬೆಳಗಾವಿ ಜೀಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಹಂಜಿ ಅವರಿಗೆ ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿ,
ಖಾನಾಪೂರ ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯ ಅಭಿಷೇಕ ಹೊಸಮನಿ ಅವರಿಗೆ ಆದರ್ಶ ಸಮಾಜ ರತ್ನ ಗೌರವ ಪ್ರಶಸ್ತಿ, ಖಾನಾಪೂರ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಸಿಟಿ ಯುವ ಕಾಂಗ್ರೆಸ್ ಅಧ್ಯಕ್ಷ ಇಸಾಕ್ ಖಾನ್ ಪಠಾಣ್ ಅವರಿಗೆ ಆದರ್ಶ ಸಮಾಜ ರತ್ನ ಗೌರವ
ಪ್ರಶಸ್ತಿ,ಜಾಂಬೇಗಾಳಿ-ಘೋಟಗಾಳಿ ಪಿಕೆಪಿಎಸ್ ಅಧ್ಯಕ್ಷ ರಫೀಕ್ ಹಲಸಿಕರ ಅವರಿಗೆ ಆದರ್ಶ ಸಮಾಜ ರತ್ನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು ಖಾನಾಪೂರ ತಾಲೂಕಿನಲ್ಲಿ ಎಷ್ಟು ಗೌರವ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡ ಹೆಮ್ಮೆಯ ವಿಷಯ ಕುರಿತು ಎಲ್ಲರಿಂದಲೂಮೆಚ್ಚುಗೆ ವ್ಯಕ್ತವಾಗುತ್ತಿದೆ.

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ