Breaking News

ಕಾಕತಿ ಪೊಲೀಸರ ಮಿಂಚಿನ ದಾಳಿ….. ಗಾಂಜಾ ಮಾರಾಟಗಾರರ ಬಂಧನ….

Spread the love

ಕಾಕತಿ ಪೊಲೀಸರಿಂದ ಮಾದಕ ವಸ್ತು ವಿರುದ್ಧ ಮಿಂಚಿನ ದಾಳಿ
ಹೊನಗಾ ಕೈಗಾರಿಕಾ ಪ್ರದೇಶದಿಂದ ಇಬ್ಬರು ಆರೋಪಿಗಳ ಬಂಧನ
ಪಿಎಸ್ಐ ಸುರೇಶ್ ಸಿಂಗಿ ನೇತೃತ್ವದಲ್ಲಿ ದಾಳಿ
ಬಂಧಿತರಿಂದ 25000 ರೂ. ಮೌಲ್ಯದ ಗಾಂಜಾ ಜಪ್ತ
ಬೆಳಗಾವಿಯ ಕಾಕತಿ ಪೋಲೀಸರು ಮಿಂಚಿನ ದಾಳಿ ನಡೆಸಿ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ
ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಪಿಎಸ್ಐ ಸುರೇಶ ಸಿಂಗಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಕಾಕತಿ ಗ್ರಾಮದ ಪ್ರವೀಣ ಕಾಕತಿಕರ ಹಾಗೂ ಈರಣ್ಣ ಬಾವಿಮನಿ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ 25 ಸಾವಿರ ರೂ ಮೌಲ್ಯದ ಒಂದು ಕೆಜಿ ಗಾಂಜಾ ಜಪ್ತ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಕಾರ್ಯವನ್ನು ಬೆಳಗಾವಿ ಎಸ್ ಪಿ ಡಾ. ಭೀಮಾಶಂಕರ ಗುಳೇದ ಪ್ರಶಂಸೆ ಮಾಡಿದ್ದು, ನಗರದಲ್ಲಿ ಮಾದಕ ವಸ್ತು ವಿರುದ್ಧ ಹೆಚ್ಚಿನ ದಾಳಿಗಳನ್ನು ಕೈಗೊಂಡು ಯುವಜನರನ್ನು ದುಶ್ಚಟಗಳಿಂದ ದೂರ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ