ನವದೆಹಲಿ/ಮುಂಬೈ, ಏ.2-ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇಂದು ಬೆಳಗಿನಿಂದ ಮಧಾಹ್ಯದವರೆಗೆ ಒಟ್ಟು ಏಳು ರಾಜ್ಯಗಳಲ್ಲಿ ಏಳು ಸಾವು ಸಂಭವಿಸಿದ್ದು, ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಅರುಣಾಚಲ ಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಈ ಸಾವುಗಳು ವರದಿಯಾಗಿವೆ. ಹರಿಯಾಣದಲ್ಲಿ ಪ್ರಥಮ ಕೋವಿಡ್-19 ಸಾವು ಸಂಭವಿಸಿದೆ. ಸಂಬಾಲ ಪ್ರದೇಶದ 67 ವರ್ಷದ ವೃದ್ದರೊಬ್ಬರನ್ನು ಹೆಮ್ಮಾರಿ ಬಲಿ ಪಡೆದಿದೆ.
ಹರಿಯಾಣಗೆ ಹೊಂದಿಕೊಂಡಿರುವ ಪಂಬಾಜ್‍ನಲ್ಲಿ ಇಂದು ಮುಂಜಾನೆ ಖ್ಯಾತ ಭಕ್ತಿ ಗೀತೆ ಗಾಯಕ ಮತ್ತು ಪದ್ಮಶ್ಮೀ ಪ್ರಶಸ್ತಿ ಪುರಸ್ಕøತ ನಿರ್ಮಲ್ ಸಿಂಗ್ (62) ವಿಧಿವಶರಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಾವು ಮತ್ತು ಸೋಂಕು ಪ್ರಕರಣಗಳು ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಮರಣ ಮೃದಂಗ ಮುಂದುವರಿದಿದೆ.
ಏಷ್ಯಾದ ಅತಿ ದೊಡ್ಡ ಕೊಳಗೇರಿಯಾದ ಧಾರವಿ ಪ್ರದೇಶದಲ್ಲಿ 56 ವರ್ಷದ ವ್ಯಕ್ತಿ ಬಲಿಯಾಘಿದ್ದಾನೆ. ಕಿಷ್ಕಿಂದೆಯಂತಿರುವ ಸ್ಲಮ್‍ನಲ್ಲಿ ಸೋಂಕು ವ್ಯಾಪಕವಾಗಿ ಹಬ್ಬುವ ಆತಂಕದಿಂದ ಇಡೀ ಧಾರವಿಯನ್ನು ಬಂದ್ ಮಾಡಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ.
ಗುಜರಾತ್‍ನ ವಡೋದರಾದಲ್ಲಿ 52 ವರ್ಷ ವ್ಯಕ್ತಿಯನ್ನು ಮಹಾಮಾರಿ ಆಫೋಶನ ತೆಗೆದುಕೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಏಳು ಮಂದಿ ಅಸುನೀಗಿದ್ದಾರೆ.ಅತ್ತ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಮೊದಲ ವ್ಯಕ್ತಿಯನ್ನು ಕೊರೊನಾ ಬಲಿ ಪಡೆದಿದೆ.
ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಈ ವ್ಯಕ್ತಿ ಭಾಗವಹಿಸಿದ್ದ. ಮಧ್ಯಪ್ರದೇಶದ ಇಂದೋರ್‍ನಲ್ಲಿ ಕೊರೊನಾ ಸೋಂಕಿನಿಂದ ಬಳಸುತ್ತಿದ್ದ 65 ವರ್ಷದ ಮಹಿಳೆ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ರಾಜಸ್ತಾನದ ಆಲ್ವಾರ್ ಪ್ರದೇಶದಲ್ಲಿ ಇಂದು ಮಧ್ಯಾಹ್ನ ವ್ಯಕ್ತಿಯೊಬ್ಬನನ್ನು ವೈರಸ್ ಸೋಂಕು ಆಪೋಶನ ತೆಗೆದುಕೊಂಡಿದೆ.