Breaking News

Daily Archives: ಆಗಷ್ಟ್ 22, 2021

ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ’ ಎಂದು ಬಿಜೆಪಿ ಮುಖಂಡನಿಗೆ ಬ್ಲ್ಯಾಕ್​ಮೇಲ್​ ಮಾಡಿದ ಅಪರಿಚಿತ

ಬೆಂಗಳೂರು: ‘ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ’ ಎಂದು ಬಿಜೆಪಿ ಮುಖಂಡನಿಗೆ ಅಪರಿಚಿತನೊಬ್ಬ ಬ್ಲ್ಯಾಕ್​ಮೇಲ್​ ಮಾಡಿದ್ದು, ಸುಮಾರು 30 ಸಾವಿರ ರೂಪಾಯಿ ವಸೂಲಿ ಕೂಡ ಮಾಡಿಕೊಂಡಿದ್ದಾನೆ. ಅಪರಿಚಿತ ವ್ಯಕ್ತಿಯ ಬೆದರಿಕೆ ಕರೆ ಕುರಿತು ಬಿಜೆಪಿ ಮುಖಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಬಿಜೆಪಿ ಮುಖಂಡ ಚಿ.ನಾ. ರಾಮು ಇಂಥದ್ದೊಂದು ಬೆದರಿಕೆ ಕರೆಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರದ ಸಾಮಾಜಿಕ ಸಬಲೀಕರಣ ಇಲಾಖೆ ಅಧೀನದ ಅಂಬೇಡ್ಕರ್ ಫೌಂಡೇಷನ್​ ನಿರ್ದೇಶಕ ಆಗಿರುವ …

Read More »

ಹೆಣ್ಣು ನೋಡುವ ಶಾಸ್ತ್ರಕ್ಕೆಂದು ಹೋದವರು ಹೆಣವಾಗಿ ಹೋದರು; ಸ್ಥಳದಲ್ಲೇ ಸಾವಿಗೀಡಾದ ದಂಪತಿ

ಆನೇಕಲ್: ಕ್ಯಾಂಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತ ಎರಡು ಜೀವಗಳನ್ನು ಬಲಿ ಪಡೆದಿದ್ದು, ಹೆಣ್ಣು ನೋಡುವ ಶಾಸ್ತ್ರಕ್ಕೆಂದು ಹೋದವರು ಹೆಣವಾಗಿ ಹೋದಂತಾಗಿದೆ. ಆನೇಕಲ್ ತಾಲೂಕಿನ ಚೂಡಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ. ಚಂದಾಪುರ ಸಮೀಪದ ಕಿತ್ತಗಾನಹಳ್ಳಿಯ ನಿವಾಸಿಗಳಾದ ಮುನಿರಾಜಾಚಾರಿ (55), ಅಕ್ಕಯಮ್ಮ (50) ಮೃತಪಟ್ಟ ದಂಪತಿ. ಹೆಣ್ಣು ನೋಡುವ ಶಾಸ್ತ್ರಕ್ಕೆಂದು ಇವರು ದ್ವಿಚಕ್ರವಾಹನದಲ್ಲಿ ಆನೇಕಲ್ ತಾಲೂಕಿನ ಚೂಡಹಳ್ಳಿಗೆ ಹೋಗಿದ್ದರು. ಚೂಡಗಾನಹಳ್ಳಿ ಬಳಿ ಎದುರುಗಡೆಯಿಂದ ಬರುತ್ತಿದ್ದ ತಮಿಳುನಾಡು …

Read More »

ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ನೀರಿನಲ್ಲಿ ಕೊಚ್ಚಿ ಹೋಗಿ ಸಾವು

ಬಾಗಲಕೋಟೆ : ಜಿಲ್ಲೆಯ ಬಾದಾಮಿಯ ಶಿವಯೋಗಮಂದಿರ ಕ್ಷೇತ್ರದ ಬಳಿಕ, ಒಂದೇ ಕುಟುಂಬದ ಮೂವರು ಪಿಕ್ ನಿಕ್ ತೆರಳಿದ್ದರು. ಊಟ ಮುಗಿಸಿ, ನದಿಯಲ್ಲಿ ಕೈ ತೊಳೆಯುತ್ತಿದ್ದಂತ ಸಂದರ್ಭದಲ್ಲಿ ಬಿದ್ದಂತ ಕುಟುಂಬದ ಒಬ್ಬರನ್ನು ರಕ್ಷಿಸಲು ಹೋಗಿ, ಮೂವರು ನೀರು ಪಾಲಾಗಿರೋ ಘಟನೆ ನಡೆದಿದೆ.   ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಮಂದಿರದ ಕ್ಷೇತ್ರದ ಬಳಿಯ ನದಿ ಹತ್ತಿರ ಒಂದೇ ಕುಟುಂಬದ ವಿಶ್ವನಾಥ ಮಾವಿನಪರದ, ಶ್ರೀದೇವಿ ಹಾಗೂ ನಂದಿನಿ ಮಾವಿನಮರದ ತೆರಳಿದ್ದರು.   ಹೀಗೆ …

Read More »

‘2ಎ’ಗೆ ಪಂಚಮಸಾಲಿ ಸೇರ್ಪಡೆಗೆ ವಿರೋಧ

ತುಮಕೂರು: ಹಿಂದುಳಿದ ಪ್ರವರ್ಗ 2ಎಗೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಮಾಡಿ, ಮೀಸಲಾತಿ ಕಲ್ಪಿಸಬಾರದು. ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಜನರ ಮುಂದಿಡಬೇಕು ಎಂದು ಅತಿ ಹಿಂದುಳಿದ ವರ್ಗಗಳ ಸಮುದಾಯದ ಮುಖಂಡರು ಒಮ್ಮತದಿಂದ ಒತ್ತಾಯಿಸಿದರು. ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ನೇತೃತ್ವದಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ಜಾಗೃತಿ ಸಭೆಯಲ್ಲಿ ಮಾತನಾಡಿದ ಮುಖಂಡರು, ‘ಸದಾಶಿವ ಆಯೋಗದ ವರದಿಯಲ್ಲಿ ಒಳಮೀಸಲಾತಿ ಪ್ರಸ್ತಾಪಿಸಿ ರುವ ಮಾದರಿಯಲ್ಲಿ ಹಿಂದುಳಿದ …

Read More »

ಜಾತಿ ಆಧಾರಿತ ಜನಗಣತಿ ಮಾಡಲೇಬೇಕು: ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಳೆ ದೆಹಲಿಗೆ ಭೇಟಿ ನೀಡಲಿದ್ದು ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಅವರು 10 ಸದಸ್ಯರ ನಿಯೋಗವನ್ನು ಮುನ್ನಡೆಸಲಿದ್ದಾರೆ. ಇದರಲ್ಲಿ ಬಿಜೆಪಿ ಸೇರಿದೆ, ಈ ಹಿಂದೆ ಬಿಜೆಪಿ ಜನಗಣತಿಯಲ್ಲಿ ಆಸಕ್ತಿ ಹೊಂದಿರಲಿಲ್ಲ. ಕೆಲವರು ಈಗಾಗಲೇ ದೆಹಲಿಯನ್ನು ತಲುಪಿದ್ದಾರೆ ಮತ್ತು ಕೆಲವರು ನನ್ನೊಂದಿಗೆ ಹೋಗುತ್ತಾರೆ. ನಾಳೆ ನಾವು 11 ಗಂಟೆಗೆ ಭೇಟಿಯಾಗುತ್ತೇವೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಪ್ರತಿಯೊಬ್ಬರ …

Read More »

ಜಾತಿ ಗಣತಿ’ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ಹುಬ್ಬಳ್ಳಿ : ಜಾತಿ ಗಣತಿ ವಿಚಾರದ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದು, ಜಾತಿ ಗಣತಿ ವರದಿಯನ್ನು ಹಿಂದುಳಿದ ಆಯೋಗ ಕೂಡ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಜಾತಿ ಗಣತಿ ವಿಚಾರ ನ್ಯಾಯಾಲಯದ ಅಂಗಳದಲ್ಲಿದ್ದು, ಇತ್ಯರ್ಥಕ್ಕೆ ಕಾಲಾವಕಾಶವಿದೆ. ಈ ಕುರಿತು ವಿರೋಧ ಪಕ್ಷದವರಷ್ಟೇ ಅಲ್ಲ. ಯಾರೂ ಬೇಕಾದರೂ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಬಹುದು ಎಂದು ಹೇಳಿದ್ದಾರೆ. ಗುಂಡು ಹಾಕಿದರೂ ಸಾರ್ವಜನಿಕ ಗಣೇಶ …

Read More »

ಫೇಸ್​ಬುಕ್​ನಲ್ಲಿ ಪರಿಚಯವಾದ ಮಹಿಳೆಯಿಂದ ವಿಡಿಯೋ ಕಾಲ್‌ನಲ್ಲಿ ಅಸಭ್ಯ ವರ್ತನೆ, ಹಣಕ್ಕಾಗಿ ಬೆದರಿಕೆ: ಬಿಜೆಪಿ ಮುಖಂಡನಿಂದ ದೂರು

ಬೆಂಗಳೂರು: ಬಿಜೆಪಿ ಮುಖಂಡ, ಡಾ.ಅಂಬೇಡ್ಕರ್ ಫೌಂಡೇಷನ್‌ ನಿರ್ದೇಶಕ ಚಿ.ನಾ.ರಾಮು ತಮಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಒಡ್ಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿ ಫೋನ್‌ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಪರಿಚಯವಾಗಿದ್ದ ಮಹಿಳೆ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡಿದ್ದಳು. ವಿಡಿಯೋ ಕಾಲ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದಳು. ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿದ್ದಾನೆ. ‘ಯುವತಿಯೊಂದಿಗೆ ನಗ್ನವಾಗಿರುವ ವಿಡಿಯೋ …

Read More »

ಮಾಜಿ ಸಚಿವ ವಿನಯ್ ಕುಲಕರ್ಣಿ ಮುಂದಿನ ನಡೆ ಏನು?

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ (Vinay Kulkarni) ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಇದೀಗ ಜಾಮೀನು ಮೇಲೆ ಬಿಡುಗಡೆ ಆಗಿದ್ದಾರೆ. ಆದರೆ ಅವರು ಧಾರವಾಡ ಜಿಲ್ಲೆಗೆ ಹೋಗುವಂತಿಲ್ಲ ಅಂತಾ ಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಅವರು ಬೆಂಗಳೂರಿನಲ್ಲಿಯೇ ಇರಬೇಕು ಅನ್ನುವುದು ಕೂಡ ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟವಾಗಿದೆ. ಹಾಗಾದರೆ ಜೈಲಿನಿಂದ ಬಿಡುಗಡೆಯಾದ ವಿನಯ್ ಕುಲಕರ್ಣಿ ಎಲ್ಲಿಗೆ ಹೋದರು ಎನ್ನುವುದು ಇದೀಗ ಕುತೂಹಲ ಮೂಡಿಸಿದೆ. …

Read More »

ನಿನ್ನೆ ಡಿಕೆ ಶಿವಕುಮಾರ್ ಭೇಟಿ ನಂತರ ದೆಹಲಿಗೆ ಹಾರಿದ್ದ ಜಮೀರ್ ಇಂದು ಮಧ್ಯಾಹ್ನ 4 ಗಂಟೆ ವಿಮಾನದಲ್ಲಿ ವಾಪಸ್ ಆಗಲಿದ್ದಾರೆ.

ನಿನ್ನೆ ಡಿಕೆ ಶಿವಕುಮಾರ್ ಭೇಟಿ ನಂತರ ದೆಹಲಿಗೆ ಹಾರಿದ್ದ ಜಮೀರ್ ಇಂದು ಮಧ್ಯಾಹ್ನ 4 ಗಂಟೆ ವಿಮಾನದಲ್ಲಿ ವಾಪಸ್ ಆಗಲಿದ್ದಾರೆ. ಬೆಂಗಳೂರು: ಇಂದು ಸಂಜೆ ನಾನು ಬೆಂಗಳೂರಿಗೆ ವಾಪಸಾಗುತ್ತೇನೆ ಎಂದು ಟಿವಿ9ಗೆ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ನಾನು ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದೆ. ದೆಹಲಿಯಲ್ಲಿ ಯಾವ ವಕೀಲರನ್ನೂ ಭೇಟಿಯಾಗಿಲ್ಲ. ಇಂದು ಸಂಜೆ‌ ಬೆಂಗಳೂರಿಗೆ ವಾಪಸ್ ಆಗುತ್ತಿದ್ದೇನೆ. ಶನಿವಾರ, ಭಾನುವಾರ ಯಾವ ED ಕಚೇರಿ ತೆರೆದಿರುತ್ತೆ ಹೇಳಿ. …

Read More »

ಕಬ್ಬಿನ ಗದ್ದೆಯಲ್ಲಿ ಮಹಿಳೆಯೋರ್ವರ ಶವ ಪತ್ತೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಕೂಕಿನ ಕೋಳಿಗುಡ್ಡ ಗ್ರಾಮದ ಬಳಿ ಕಬ್ಬಿನ ಗದ್ದೆಯಲ್ಲಿ ಮಹಿಳೆಯೋರ್ವರ ಶವ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಗೋಕಾಕ್—ಅಥಣಿ ರಾಜ್ಯ ಹೆದ್ದಾರಿ 31 ರ ಹತ್ತಿರ ಇರುವ ಕಬ್ಬಿನ ಗದ್ದೆಯಲ್ಲಿ ಸುಮಾರು 35 ವರ್ಷದ ಮಹಿಳೆ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ತಂದ್ದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಹಾರೂಗೇರಿ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಮಹಿಳೆ ಯಾರು ಎಂದು ಗುರುತು ಪತ್ತೆಯಾಗಿಲ್ಲ. …

Read More »