Breaking News
Home / 2021 / ಆಗಷ್ಟ್ / 17 (page 2)

Daily Archives: ಆಗಷ್ಟ್ 17, 2021

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮುಗಿಯದೇ ಬಿಜೆಪಿ ಶಾಸಕರು ಬೆಂಗಳೂರಿಗೆ ಬರುವಂತಿಲ್ಲ: ನಳಿನ್ ಕುಮಾರ್

ನಿಮ್ಮೆಲ್ಲರ ಮಾತಿನಂತೆ ಈಬಾರಿ ಪಕ್ಷದ ಚಿಹ್ನೆಯಡಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡುವ ನಿರ್ಧಾರ ನಾಯಕರದ್ದಲ್ಲ, ಕಾರ್ಯಕರ್ತರದ್ದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು ಬೆಳಗಾವಿ: ಮಂಗಳೂರಿನಲ್ಲಿ ಬಿಜೆಪಿ ಅಧಿಕಾರ ಹಿಡಿದಂತೆ ಬೆಳಗಾವಿಯಲ್ಲೂ ಬಿಜೆಪಿ ಅಧಿಕಾರ ಹಿಡಿದೇ ಹಿಡಿಯಲಿದೆ. ಚುನಾವಣೆಯಲ್ಲಿ ಒಂದೊಂದು ವಾರ್ಡ್ ಗೆ ಒಬ್ಬೊಬ್ಬ ಶಾಸಕರನ್ನು ನೇಮಿಸುತ್ತೇವೆ. ಹಾಕುತ್ತೇವೆ. ಸಭೆ ಸಮಾರಂಭಗಳನ್ನ ಮಾಡುವಂತಿಲ್ಲ. ಮಹಾನಗರ ಪಾಲಿಕೆ ಚುನಾವಣೆ ( Belagavi municipal corporation Election …

Read More »

ಸಚಿವರ ಸರ್ಕಾರಿ ಕಾರಿನಲ್ಲಿ ಉಲ್ಟಾ ಹಾರಿದ ರಾಷ್ಟ್ರ ಧ್ವಜ

ಬೆಂಗಳೂರು: ಕೇಂದ್ರ ರಾಜ್ಯ ಖಾತೆ ಸಚಿವ ನಾರಾಯಣ ಸ್ವಾಮಿ ಅವರ ಕಾರಿನಲ್ಲಿ ರಾಷ್ಟ್ರ ಧ್ವಜ ತಲೆ ಕೆಳಗಾಗಿ (ಉಲ್ಟಾ) ಹಾರಿದ ಘಟನೆ ನಡೆದಿದೆ. ಇಲ್ಲಿಯ ಬಿಜೆಪಿ ಕಚೇರಿಗೆ ಆಗಮಿಸಿದ ಗೂಟದ ಕಾರಿನಲ್ಲಿ ಉಲ್ಟಾ ಧ್ವಜ ಹಾರಾಡಿದೆ. ಕೇಸರಿ, ಬಿಳಿ, ಹಸಿರು ಬದಲಾಗಿ. ಹಸಿರು, ಬಿಳಿ, ಕೇಸರಿ ಧ್ವಜ ಹಾರಾಡಿದೆ. ಆದರೆ, ಈ ಯಡವಟ್ಟು ನಡೆದ ವೇಳೆ ಸಚಿವರು ಆ ಕಾರಿನಲ್ಲಿ ಇರಲಿಲ್ಲ. ಖಾಸಗಿ ಕಾರಿನಲ್ಲಿ ಸಚಿವ ನಾರಾಯಣ ಸ್ವಾಮಿ ಆಗಮಿಸಿದರು. …

Read More »

ಪ್ರಿಯಕರ ಜೊತೆಗೂಡಿ ಮತ್ತೊಬ್ಬ ಪ್ರಿಯಕರನನ್ನು ಕೊಂದ ಪ್ರೇಯಸಿ

ಪ್ರಿಯಕರನ ಜೊತೆಗೂಡಿ ಮತ್ತೊಬ್ಬ ಪ್ರಿಯಕರನನ್ನು ಪ್ರೇಯಸಿಯೊಬ್ಬಳು ಕೊಂದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ರಾಮಚಂದ್ರಪುರದಲ್ಲಿ ನಡೆದಿದೆ. ಹಿಂದೂಪುರ ಮೂಲದ ಫುಜೈಲ್ ಖಾನ್ ಪ್ರೇಯಸಿ ಪ್ರಮೀಳಾ ಮತ್ತು ಆಕೆಯ 2ನೇ ಪ್ರಿಯಕರ ಸುರೇಶ್ ನಿಂದ ಕೊಲೆಯಾದ ವ್ಯಕ್ತಿ. ಸುರೇಶ್ ಜೊತೆಗಿನ ಸಂಬಂಧಕ್ಕೆ ಅಡ್ಡಿಪಡಿಸಿದ್ದ ಹಿನ್ನೆಲೆಯಲ್ಲಿ ಫುಜೈಲ್ ಖಾನ್ ನನ್ನು ವಿಧುರಾಶ್ವತ್ಥ ರಾಮಚಂದ್ರಪುರದ ಅರಣ್ಯಕ್ಕೆ ಕ‌ರೆದೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ. ಮದ್ಯದ ಬಾಟಲಿ ಹಗ್ಗದಿಂದ ಕತ್ತಿಗೆ ಬಿಗಿದು ಕೊಲೆ ಮಾಡಿ ಶವವನ್ನು …

Read More »

ಧಾರವಾಡ ಕೃಷಿ ವಿವಿಯಲ್ಲಿ ಅಪ್ಘಾನ್ ವಿದ್ಯಾರ್ಥಿಗಳ ಕಣ್ಣಿರು

ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯಕ್ಕೆ ಪಿಎಚ್ ಡಿ ಅಧ್ಯಯನಕ್ಕೆ ಬಂದಿರುವ ಅಪಘಾನಿಸ್ತಾನದ ವಿದ್ಯಾರ್ಥಿಗಳು ತಮ್ಮ ದೇಶದ ರಾಜಕೀಯ ಅಧಃಪತನ ನೋಡಿ ಇದೀಗ ಕಣ್ಣೀರು ಇಟ್ಟಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಕೃಷಿ ಸಂರಕ್ಷಣಾ ವಿಷಯದಲ್ಲಿ ಪಿಎಚ್‌ಡಿ ಮಾಡಲು ಬಂದಿರುವ ಈ ವಿದ್ಯಾರ್ಥಿಗಳು, ತಮ್ಮ ದೇಶವನ್ನು ತಾಲಿಬಾನಿಗಳು ವಶಕ್ಕೆ ಪಡೆದಿರುವುದನ್ನು ಕೇಳಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಒಟ್ಟು 15 ವಿದ್ಯಾರ್ಥಿಗಳು ಕೃಷಿ ವಿವಿಗೆ ಅಧ್ಯಯನಕ್ಕೆಂದು ಬಂದಿದ್ದರು. ಕೊರೊನಾ ಎರಡನೇ ಅಲೆ ವೇಳೆ ಐವರು ವಿದ್ಯಾರ್ಥಿಗಳು ಮರಳಿ …

Read More »

ಕೆಳವರ್ಗದವರಿಗೆ ಸೌಕರ್ಯ ಕಲ್ಪಿಸುವುದೇ ಪ್ರಥಮ ಗುರಿ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣದಂಥ ಮಹತ್ತರ ಖಾತೆಯ ಹೊಣೆ ಹೊತ್ತಿರುವ ಕೋಟ ಶ್ರೀನಿವಾಸ ಪೂಜಾರಿ ಅವರು “ಉದಯವಾಣಿ’ ಮತ್ತು ಉದಯವಾಣಿ ಡಿಜಿಟಲ್‌ನ ಫೇಸ್‌ ಬುಕ್‌ ಲೈವ್‌ನಲ್ಲಿ ಸೋಮವಾರ ಪಾಲ್ಗೊಂಡು ಇಲಾಖೆ ಬಗೆಗಿನ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಮಹತ್ತರ ಜವಾಬ್ದಾರಿ ಬಗ್ಗೆ ಏನನಿಸುತ್ತಿದೆ? ರಾಜ್ಯದ ಸುಮಾರು 1.27 ಕೋಟಿ ಜನಸಂಖ್ಯೆಯ ಎಸ್‌.ಸಿ. ಸಮಾಜದವರು ಈ ಇಲಾಖೆಯಡಿ ಬರುತ್ತಾರೆ. ಹಿಂದುಳಿದ ವರ್ಗಗಳಲ್ಲಿ ಕೂಡ ಕೋಟ್ಯಂತರ ಜನರಿದ್ದಾರೆ. …

Read More »

ಶಮಿ-ಬುಮ್ರಾ ಅವರ ಅಮೋಘ ಆಲ್‌ರೌಂಡ್‌ ಪ್ರದರ್ಶನ ಲಾರ್ಡ್ಸ್‌ ವಶಪಡಿಸಿಕೊಂಡ ಭಾರತ

ಲಂಡನ್‌: ಶಮಿ-ಬುಮ್ರಾ ಅವರ ಅಮೋಘ ಆಲ್‌ರೌಂಡ್‌ ಪ್ರದರ್ಶನ, ಸಿರಾಜ್‌ ಅವರ ಘಾತಕ ಬೌಲಿಂಗ್‌ ಸಾಹಸದಿಂದ ಇಂಗ್ಲೆಂಡ್‌ ಎದುರಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ 151 ರನ್ನುಗಳ ಜಯಭೇರಿ ಮೊಳಗಿಸಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಬ್ರಿಟಿಷರ ನಾಡಿನಿಂದ ಭರ್ಜರಿ ಉಡುಗೊರೆಯೊಂದನ್ನು ರವಾನಿಸಿದೆ. 272 ರನ್ನುಗಳ ಗುರಿ ಪಡೆದ ಆಂಗ್ಲರ ಪಡೆ 51.5 ಓವರ್‌ಗಳಲ್ಲಿ 120ಕ್ಕೆ ಕುಸಿಯಿತು. ಸಿರಾಜ್‌ 4, ಬುಮ್ರಾ 3, ಇಶಾಂತ್‌ 2 ವಿಕೆಟ್‌ ಉಡಾಯಿಸಿ ರೂಟ್‌ ಬಳಗಕ್ಕೆ …

Read More »

ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ: ಜೊಲ್ಲೆ

ಚಿಕ್ಕೋಡಿ: ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದ ಪ್ರವಾಹ ಪೀಡಿತ ಸಿದ್ನಾಳ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನೆರೆಯಿಂದ ಮನೆ, ಬೆಳೆ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಗಳನ್ನು ನಾನು ಮನಗಂಡಿದ್ದೇನೆ. ಹೀಗಾಗಿ ನಿಮ್ಮೆಲ್ಲರ ಸಮಸ್ಯೆಗೆ ಶೀಘ್ರದಲ್ಲಿ ಬಿಜೆಪಿ ಸರ್ಕಾರದ ವತಿಯಿಂದ ಸಿಗುವ ಪರಿಹಾರವನ್ನು ಸೂಕ್ತ …

Read More »

ನೆರೆ ಪೀಡಿತ ಸಂತ್ರಸ್ತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ: ಉಮೇಶ್ ಕತ್ತಿ

ಚಿಕ್ಕೋಡಿ: ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕಾ ಪಂಚಾಯತಿ ಸಭಾ ಭವನದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂತ್ರಸ್ತರು ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹದಿಂದಾಗಿ ಬಿದ್ದಿರುವ ಮನೆಗಳ ಸರ್ವೆಕಾರ್ಯವನ್ನ ಕ್ಷೀಪ್ರಗತಿಯಲ್ಲಿ ಮುಗಿಸಬೇಕು. ಬಿದ್ದಿರುವ ಯಾವುದೇ ಮನೆಗಳು …

Read More »

ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೋಮವಾರ ಅಧಿಸೂಚನೆ ಪ್ರಕಟಿ

ಬೆಳಗಾವಿ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೋಮವಾರ  ಅಧಿಸೂಚನೆ ಪ್ರಕಟಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಆಗಸ್ಟ್ 23 ಕಡೆಯ ದಿನ. ಆ.24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಆ.26 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ.   ಸೆಪ್ಟೆಂಬರ್ 3 ರಂದು ಮತದಾನ ಹಾಗೂ ಅಗತ್ಯಬಿದ್ದರೆ ಸೆ. 5 ರಂದು ನಡೆಸಲಾಗುತ್ತದೆ. ಸೆಪ್ಟೆಂಬರ್ 6 ರಂದು ಮಯ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Read More »