Breaking News
Home / 2021 / ಜುಲೈ / 29 (page 3)

Daily Archives: ಜುಲೈ 29, 2021

ಗ್ರಾಮದ ಹೊರವಲಯದಲ್ಲಿ ಮಹಿಳೆಯೊಂದಿಗೆ ಏಕಾಂತದಲ್ಲಿದ್ದವನಿಗೆ ಬಿಗ್ ಶಾಕ್

ಮಂಡ್ಯ: ಮಹಿಳೆಯೊಂದಿಗೆ ಏಕಾಂತದಲ್ಲಿದ್ದ ಯುವಕನ ಮೇಲೆ ಹಲ್ಲೆ ನಡೆಸಿ 30 ಸಾವಿರ ರೂ. ದೋಚಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಸ್ನೇಹಿತರಿಂದಲೇ ಹನಿಟ್ರ್ಯಾಪ್ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಗಿರೀಶ್ ಎಂಬಾತ ಮಂಡ್ಯ ಸಮೀಪದ ಕೊತ್ತತ್ತಿ ಹೊರವಲಯದಲ್ಲಿ ಮಹಿಳೆಯೊಂದಿಗೆ ಏಕಾಂತದಲ್ಲಿದ್ದ ವೇಳೆ ರವಿಚಂದ್ರ, ಕಾರ್ತಿಕ್, ಕಿರಣ್, ಮಂಜು ದಾಳಿ ಮಾಡಿ ಹಲ್ಲೆ ನಡೆಸಿದ್ದು, ಹಣ ಕಸಿದುಕೊಂಡು …

Read More »

ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ. 11.25 ರಿಂದ ಶೇ.21.50 ಕ್ಕೆ ಹೆಚ್ಚಳ

ಬೆಂಗಳೂರು: ಸಾರಿಗೆ ಇಲಾಖೆ 4 ನಿಗಮಗಳ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ಶೇಕಡ 11.25 ರಿಂದ ಶೇಕಡ 21.50 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಜುಲೈ 1 ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿದ್ದು, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಜುಲೈ 27 ರಂದು ರಾಜ್ಯ ಸಾರಿಗೆ ಇಲಾಖೆ 4 ನಿಗಮಗಳ ನೌಕರರ ಡಿಎ ಹೆಚ್ಚಳ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

Read More »

ಯಾವ ಖಾತೆ ಕೊಟ್ಟರೂ ಸಹ ಸಮರ್ಥವಾಗಿ ನಿಭಾಯಿಸುತ್ತೇನೆ: ಶಾಸಕ ರೇಣುಕಾಚಾರ್ಯ ಹೇಳಿಕೆ

ಬೆಂಗಳೂರು:ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ರೆ ತಪ್ಪೇನಿಲ್ಲ, ಈಗಲೂ ಯಡಿಯೂರಪ್ಪನವರೇ ನಮ್ಮ ನಾಯಕ ಎಂದು ಎದೆತಟ್ಟಿ ಹೇಳುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು. ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ, ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಆರು ಶಾಸಕರಿದ್ದು, ಜಿಲ್ಲೆಯನ್ನು ಕಡೆಗಣಿಸದಂತೆ ಮನವಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಮ್ಮ ಜಿಲ್ಲೆಗೆ ಒಂದು ಸಚಿವ …

Read More »

ಮಂತ್ರಿ ಸ್ಥಾನಕ್ಕಾಗಿ ಲಾಬಿ; ಹೈಕಮಾಂಡ್ ಭೇಟಿಗೆ ದೆಹಲಿಗೆ ದೌಡಾಯಿಸಿದ ಹಿರಿಯ ಸಚಿವರು; ಕುತೂಹಲ ಮೂಡಿಸಿದ ಉಮೇಶ್ ಕತ್ತಿ ನಡೆ

ನವದೆಹಲಿ: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಹಲವು ಹಿರಿಯ ನಾಯಕರಿಗೆ ಸಚಿವ ಸ್ಥಾನ ಕೈತಪ್ಪುವ ಭೀತಿ ಎದುರಾಗಿದ್ದು, ದೆಹಲಿಗೆ ದೌಡಾಯಿಸಿದ್ದಾರೆ. ವರಿಷ್ಠರ ಮೂಲಕ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಹೈಕಮಾಂಡ್ ಭೇಟಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ನವದೆಹಲಿಯಲ್ಲಿ ಮಾತನಾಡಿದ ಉಮೇಶ್ ಕತ್ತಿ, ಸಿಎಂ ಬೊಮ್ಮಾಯಿ ನನ್ನನ್ನು ಬಿಟ್ಟು ಸಂಪುಟ ರಚನೆ ಮಾಡಲ್ಲ ಎಂಬ ನಂಬಿಕೆಯಿದೆ. ನಾನು ಈಗಗಾಲೆ 4 …

Read More »

ನಾಳೆ ದೆಹಲಿಗೆ ತೆರಳಿ ಪ್ರಧಾನಿ ಜೊತೆ ಚರ್ಚೆ ಮಾಡುತ್ತೇನೆ: ಸಿಎಂ ಬೊಮ್ಮಾಯಿ

ಬೆಂಗಳೂರು: ನಾಳೆ (ಶುಕ್ರವಾರ) ಬೆಳಗ್ಗೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಬಗ್ಗೆ ಚಿಂತನೆಯಿದೆ. ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಕರೆ ಮಾಡಿ ಶುಭ ಕೋರಿದ್ದಾರೆ. ಉತ್ತಮ ಆಡಳಿತ ನಡೆಸುವ ಬಗ್ಗೆ ಸಲಹೆ ನೀಡಿದ್ದಾರೆ. ದೆಹಲಿ ಭೇಟಿಯ ವೇಳೆ ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸತ್ ಸದಸ್ಯರನ್ನು, ಸಚಿವರನ್ನು ಭೇಟಿಯಾಗುತ್ತೇನೆ …

Read More »

ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ಬಿಟ್ಟು ಸಂಪುಟ ರಚಿಸಿಲ್ಲವೆಂಬ ನಂಬಿಕೆ ಇದೆ.: ಉಮೇಶ್ ಕತ್ತಿ,

ಬೆಂಗಳೂರು : ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬೆನ್ನಲ್ಲೇ ಇದೀಗ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆಗಳು ಶುರುವಾಗಿದೆ. ಹೊಸ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಸಚಿವ ಸಂಪುಟ ರಚನೆ ಕುರಿತು ಮಾತನಾಡಿದ ಮಾಜಿ ಸಚಿವ ಉಮೇಶ್ ಕತ್ತಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ಬಿಟ್ಟು ಸಂಪುಟ ರಚಿಸಿಲ್ಲವೆಂಬ ನಂಬಿಕೆ ಇದೆ. ಈ ಹಿಂದೆ 4 ಬಾರಿ ಮಂತ್ರಿಯಾಗಿದ್ದೇನೆ. ಮುಂದೆಯೂ ಸಚಿವ ಆಗುತ್ತೇನೆ ಎಂಬ ನಂಬಿಕೆ …

Read More »

ಉತ್ತರ ಕನ್ನಡ ಪ್ರವಾಸದತ್ತ ಹೊರಟ ಸಿಎಂ ಬೊಮ್ಮಾಯಿ; ಸಚಿವ ಸ್ಥಾನಕ್ಕೆ ಲಾಬಿ ಜೋರು, ಯಾರೆಲ್ಲಾ ಫೀಲ್ಡ್​​ಗೆ ಇಳಿದಿದ್ದಾರೆ?

ಬದಲಾಣೆ ಬಡಿದಾಟದಲ್ಲಿ ಗೆದ್ದು, ಸಿಎಂ ಸಿಂಹಾಸನಕ್ಕೇರಿದ ಬಸವರಾಜ್ ಬೊಮ್ಮಾಯಿ ರಾಜ್ಯ ಸುತ್ತೋಕೆ ರೆಡಿಯಾಗಿದ್ದಾರೆ. ರಾಜ್ಯದ ಚುಕ್ಕಾಣಿ ಹಿಡಿದ ಮರುದಿನವೇ ಭೀಕರ ಮಳೆಯಿಂದ ನೆರೆಗೆ ತುತ್ತಾಗಿರೋ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ ಇಂದು ಉತ್ತರಕನ್ನಡ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಮತ್ತೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸಹೋದ್ಯೋಗಿಗಳಾಗೋರು ಯಾರು ಅನ್ನೋ ಚರ್ಚೆ ಮುನ್ನೆಲೆಗೆ ಬಂದಿದೆ. ಇವತ್ತು ಉತ್ತರ ಕನ್ನಡ ಜಿಲ್ಲೆ ಪ್ರವಾಸ ಕೈಗೊಳ್ಳುತ್ತಿರೋ ಸಿಎಂ ಬಸವರಾಜ …

Read More »

ರಾಜ್ಯ ಸಚಿವ ಸಂಪುಟ ರಚನೆ: ಹೈಕಮಾಂಡ್ ಆದೇಶಕ್ಕೆ ಕಾದು ಕುಳಿತಿರುವ ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಜೆಪಿಯಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಆಗಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಕೂಡ ಪ್ರಮಾಣ ಸ್ವೀಕರಿಸಿದ್ದಾಗಿದೆ. ಈಗ ಅವರ ಸಂಪುಟ ಸಹೋದ್ಯೋಗಿಗಳಾಗೋರು ಯಾರು ಇನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿ 33 ಮಂದಿ ಸಚಿವರಿದ್ದರು. ಇದೀಗ ಹೊಸ ಸಂಪುಟ ರಚನೆ ಮಾಡುವ ಅವಕಾಶ ಬೊಮ್ಮಾಯಿಯವರಿಗೆ ಸಿಕ್ಕಿದೆ. ಸಂಪುಟ ರಚನೆ ಮಾಡಲು ತುದಿಗಾಲಲ್ಲಿ ನಿಂತಿರುವ ಬೊಮ್ಮಾಯಿಯವರು ಬಿಜೆಪಿ ಹೈಕಮಾಂಡ್ ಆದೇಶಕ್ಕಾಗಿ ಕಾದು ಕುಳಿತಿದ್ದಾರೆ. ಸಂಪುಟ ರಚನೆ ಕುರಿತು …

Read More »

ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಡೇಟ್ ಫಿಕ್ಸ್

ಜೆಡಿಎಸ್ ಯುವ ಘಟಕದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಡೇಟ್ ಫಿಕ್ಸ್ ಆಗಿದೆ. ಹೌದು. ಇದೇ ಜುಲೈ 30 ರಂದು ಹುಬ್ಬಳ್ಳಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಸಮ್ಮುಖದಲ್ಲಿ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ …

Read More »

ಕುತೂಹಲ ಮೂಡಿಸಿದ ಈಶ್ವರಪ್ಪ ಸುದ್ದಿಗೋಷ್ಠಿ:ಶೆಟ್ಟರ್ ರೀತಿಯಲ್ಲೇ ನಿರ್ಧಾರ ಮಾಡ್ತಾರಾ BJPನಾಯಕ

ಶಿವಮೊಗ್: ರಾಜ್ಯದಲ್ಲಿ ಬಸವರಾಜ್ ಬೊಮ್ಮಯಿ ನೂತನ ಮುಖ್ಯಮಂತ್ರಿಯಾಗಿ ನೇಮಕವಾದ ಬಳಿಕ ಬಿಜೆಪಿ ಹಿರಿಯ ನಾಯಕರ ನಡೆಗಳು ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದು, ಕುತೂಹಲ ಮೂಡಿಸಿದೆ. ಬಿಎಸ್ವೈ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಟಿ ಕರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತನ್ನ ಭವಿಷ್ಯದ ರಾಜಕೀಯ ನಿರ್ಧಾರವನ್ನು ಈಶ್ವರಪ್ಪ ಘೋಷಣೆ ಮಾಡುತ್ತಾರೆ. ಜಗದೀಶ್ ಶೆಟ್ಟರ್ ರೀತಿಯಲ್ಲೆ ನಿರ್ಧಾರ …

Read More »