Breaking News
Home / 2021 / ಮೇ / 07 (page 3)

Daily Archives: ಮೇ 7, 2021

ಬೆಳಗಾವಿ: ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

ಬೆಳಗಾವಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ನಡೆಯುತ್ತಿದ್ದ ವ್ಯಾಪಾರ-ವಹಿವಾಟು ವೇಳೆ ಜನದಟ್ಟಣೆ ಆಗುತ್ತಿದೆ ಎಂಬ ನೆಪವೊಡ್ಡಿ ಇಡೀ ಮಾರುಕಟ್ಟೆಯನ್ನೇ ಇಕ್ಕಟ್ಟಾದ ಪ್ರದೇಶಗಳಿಗೆ ಸ್ಥಳಾಂತರ ಮಾಡಿದ್ದರಿಂದ ಇಲ್ಲಿಯೂ ಜನದಟ್ಟಣೆಗೆ ಮತ್ತಷ್ಟು ಆಸ್ಪದ ನೀಡಿದಂತಾಗಿದೆ. ಇತ್ತ ಹಗ್ಗ ಹರಿಯಲಿಲ್ಲ, ಹಾವು ಸಾಯಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅತಿ ದೊಡ್ಡ ಆವರಣ ಎಂಬ ಹೆಗ್ಗಳಿಕೆ ಪಡೆದಿರುವ ಬೆಳಗಾವಿಯ ಎಪಿಎಂಸಿ ಆವರಣದಲ್ಲಿ ನಿತ್ಯವೂ ಸಗಟು ತರಕಾರಿ ಮಾರುಕಟ್ಟೆ ನಡೆಯುತ್ತಿದೆ. ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ …

Read More »

ದೇಶದಲ್ಲಿ ಒಂದೇ ದಿನ 4,14,188 ಹೊಸ ಕೇಸ್, 3,915 ಸಾವು..!

ನವದೆಹಲಿ, ಮೇ 7 – ಒಂದು ದಿನದಲ್ಲಿ ದಾಖಲೆಯ 4,14,188 ಹೊಸ ಕೊರೊನಾವೈರಸ್ ಸೋಂಕಿತರು ಭಾರತದಲ್ಲಿ ಪತ್ತೆಯಾಗಿದೆ , 3,915 ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಭಾರತದ ಒಟ್ಟು ಕೋವಿಡ್ ಪ್ರಕರಣಗಳು 2,14,91,598 ಕ್ಕೆ ಏರಿದರೆ, ಸಕ್ರಿಯ ಪ್ರಕರಣಗಳು 36 ಲಕ್ಷ ದಾಟಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,76,12,351 ಕ್ಕೆ ಏರಿದರೆ ಆದರೆ ಪ್ರಸ್ತುತ ಚೇತರಿಕೆ ಪ್ರಮಾಣವು ಶೇಕಡಾ 81.95 ಕ್ಕೆ ಇಳಿದಿದೆ. ಮಹಾರಾಷ್ಟ್ರದಲ್ಲಿ 853, …

Read More »

ಆಕ್ಸಿಜನ್ ಪೂರೈಕೆ; ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕಕ್ಕೆ ಜಯ

ಬೆಂಗಳೂರು, ಮೇ 07; ರಾಜ್ಯಕ್ಕೆ ಪ್ರತಿ ದಿನಕ್ಕೆ 1,200 ಮೆಟ್ರಿಕ್ ಟನ್‌ ಆಕ್ಸಿಜನ್ ಪೂರೈಕೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಕರ್ನಾಟಕ ರಾಜ್ಯದ ಆಕ್ಸಿಜನ್ ಪಾಲನ್ನು ಪ್ರತಿದಿನದ 965 ಮೆಟ್ರಿಕ್ ಟನ್‌ಗಳಿಂದ 1,200 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಲು ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶಕ್ಕೆ ತಡೆ ನೀಡಿ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.   ಕೋವಿಡ್‌ …

Read More »

ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಸೇರಿ ಹಲವು ಪೊಲೀಸರು ಮುಂಬೈನಿಂದ ವರ್ಗಾವಣೆ!

ಮುಂಬೈ: ಎನ್ ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ಪೊಲೀಸ್ ಅಧಿಕಾರಿ ದಯಾ ನಾಯಕ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಮುಂಬೈನಿಂದ ಇತರ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಉಗ್ರ ನಿಗ್ರಹ ದಳದಲ್ಲಿದ್ದ ದಯಾ ನಾಯಕ್ ಅವರನ್ನು ಗೊಂಡಿಯಾ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಮಹಾರಾಷ್ಟ್ರ ಎಡಿಜಿ ಅವರು ಈ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ದಯಾ ನಾಯಕ್ ಅವರು ಮನ್ಸುಖ್ ಹಿರೇನ್ ಕೊಲೆ ಪ್ರಕರಣದ ತನಿಖೆ ನಡೆಸಿದ್ದರು. ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧ ಈ …

Read More »

ಜನರ ಜೀವ ಉಳಿಸಲು ಲಾಕ್ ಡೌನ್ ಅನಿವಾರ್ಯ : ಸುಧಾಕರ್

ಬೆಂಗಳೂರು : ಸೋಂಕು ಕಡಿಮೆಯಾಗಬೇಕಾದ್ರೆ ಲಾಕ್ ಡೌನ್ ಅನಿವಾರ್ಯ. ಲಾಕ್ ಡೌನ್ ಮಾಡದಿದ್ರೆ ಸಾವು ನೋವು ಜಾಸ್ತಿಯಾಗುತ್ತದೆ ಎಂದು ಬೆಂಗಳೂರಿನಲ್ಲಿ ಶುಕ್ರವಾರ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ. ಕೋವಿಡ್ ಚೈನ್ ಲಿಂಕ್ ಮುರಿಯಲೇ ಬೇಕು. ಲಾಕ್ ಡೌನ್ ಬೇಕೆಂದು ಆರೋಗ್ಯ ಇಲಾಖೆ ಬಲವಾಗಿ ಹೇಳುತ್ತೆ. ತಜ್ಞರು ಕೂಡ ಲಾಕ್ ಡೌನ್ ಮಾಡುವಂತೆ ಹೇಳಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ. ಲಾಕ್ ಡೌನ್ ವಿಚಾರವಾಗಿ ಸಿಎಂ ಯಡಿಯೂರಪ್ಪ ಜೊತೆಯಲ್ಲೂ ಮಾತುಕತೆ ನಡೆಸಲಾಗುತ್ತದೆ. …

Read More »

72 ಸಾವಿರದ ಗಡಿ ತಲುಪಿದ ಬೆಳ್ಳಿ ದರ; ಚಿನ್ನದ ಬೆಲೆಯೂ ಏರಿಕೆ

ಇನ್ನೇನು ಮದುವೆಯ ಸೀಸನ್ ಶುರುವಾಗುವ ಸಮಯ. ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಕೊಂಚ ಏರಿಕೆಯಾಗುತ್ತಿದೆ. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಇಂದು ಯಾವ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,000 ರೂ. ಇದ್ದುದು ಇಂದು 48,550 ರೂ.ಗೆ ಏರಿಕೆಯಾಗಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 44,000 ರೂ. ಇದ್ದುದು …

Read More »

100 ರೂಪಾಯಿ ಗಡಿದಾಟಿದ ಪೆಟ್ರೋಲ್ ಬೆಲೆ!

ನವದೆಹಲಿ:ನಿರೀಕ್ಷೆಯಂತೆ ಐದು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ತೈಲ ಬೆಲೆ ಪರಿಷ್ಕರಣೆಗೆ ಮುಂದಾದ ಹಿನ್ನೆಲೆಯಲ್ಲಿ ಸತತ ನಾಲ್ಕನೇ ದಿನವೂ ತೈಲ ಬೆಲೆ ಏರಿಕೆಯಾಗಿದ್ದು, ರಾಜಸ್ಥಾನ್ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಲೀಟರ್ ಬೆಲೆ ನೂರು ರೂಪಾಯಿ ದಾಟಿರುವುದಾಗಿ ವರದಿ ತಿಳಿಸಿದೆ.   ಶುಕ್ರವಾರ (ಮೇ 07) ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬೆಲೆ ಲೀಟರ್ ಗೆ 28ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 31 ಪೈಸೆ …

Read More »

ಕೊರೋನಾ ಸೋಂಕಿಗೆ ‘ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಆನಂದ್’ ಬಲಿ

ಬೆಂಗಳೂರು : ಕೊರೋನಾ ಸೋಂಕಿಗೆ ತುತ್ತಾಗಿದ್ದಂತ ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷರಾದ ಆನಂದ್ ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಟ್ವಿಟ್ ಮೂಲಕ ಸಂತಾಪ ಸೂಚಿಸಿರುವಂತ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷರಾದ ಆನಂದ ಅವರು ಕೊರೋನಾ ಸೋಂಕಿಗೆ ತುತ್ತಾಗಿ ವಿಧಿವಶರಾಗಿದ್ದು ಅತ್ಯಂತ ನೋವಿನ ಸಂಗತಿ. ಇವರ ನಿಧನದಿಂದ ಕ್ರಿಯಾಶೀಲ ಯುವ ಮುಖಂಡರನ್ನು ಪಕ್ಷ ಕಳೆದುಕೊಂಡಂತಾಗಿದೆ. ಅವರ …

Read More »

ಕೊರೊನಾ ಕಾಲದಲ್ಲಿ ಕಳ್ಳರು ಔಷಧಿಗಳನ್ನೂ ಕದಿಯಲು ಆರಂಭ

ಬೆಳಗಾವಿ/ಚಿಕ್ಕೋಡಿ: ಚಿನ್ನ, ಹಣ ಕದಿಯುವುದನ್ನು ನೋಡಿದ್ದೇವೆ. ಇದೀಗ ಕೊರೊನಾ ಕಾಲದಲ್ಲಿ ಕಳ್ಳರು ಔಷಧಿಗಳನ್ನೂ ಕದಿಯಲು ಆರಂಭಿಸಿದ್ದು, ರೆಮ್‍ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಔಷಧಿ ಕದ್ದಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಕೊರೊನಾ ಅಬ್ಬರದ ನಡುವೆ ಔಷಧಿ ಕಳ್ಳತನವಾಗುತ್ತಿದ್ದು, ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಔಷಧಿ ಕಳ್ಳತನವಾಗಿದೆ. ರೆಮ್‍ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಇಂಜೆಕ್ಷನ್ ಕದ್ದಿದ್ದಾರೆ. ಪೋಲಿಯೋ ಔಷಧಿ ಎಂದು ಗೊತ್ತಾಗಿ ಸಂಗಮೇಶ್ವರ್ ನಗರದ ಬಳಿಯ ರಸ್ತೆಯಲ್ಲೇ ಔಷಧಿ ಎಸೆದು …

Read More »

ಬೆಳಗಾವಿ: ನಗರಕ್ಕೆ ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ

ಬೆಳಗಾವಿ: ನಗರಕ್ಕೆ ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತವಾಗಿರುವ ಘಟನೆ ತಾಲೂಕಿನ ಮುತ್ನಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಭವಿಸಿದೆ. ಓವರ್ ಟೇಕ್ ಮಾಡುವ ವೇಳೆ ಮುಂಬದಿಯ ಲಾರಿಗೆ ಆಕ್ಸಿಜನ್ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಅಪಘಾತ ವೇಳೆ ಆಕ್ಸಿಜನ್ ಲಿಕ್ವಿಡ್‍ಗೆ ಹಾನಿ ಇಲ್ಲ. ಡಿಕ್ಕಿ ರಭಸಕ್ಕೆ ಟ್ಯಾಂಕರ್ ಟೈರ್ ಬ್ಲಾಸ್ಟ್ ಆಗಿ, ಎಕ್ಸಲ್ ಕಟ್ ಆಗಿದೆ. ಎಕ್ಸಲ್ ಕಟ್ ಆಗಿರುವ ಹಿನ್ನೆಲೆ ಬೇರೆ ಆಕ್ಸಿಜನ್ ಟ್ಯಾಂಕರ್ ಕರೆತರಲು ಅಧಿಕಾರಿಗಳು …

Read More »