Daily Archives: ಮಾರ್ಚ್ 11, 2021

ಕೆ,ಪಿ,ಸಿ,ಸಿ ಕಾರ್ಯಧ್ಯಕ್ಷರಾದ ಸತೀಶ ಜಾರಕಿಹೊಳಿಯವರು ಅವರ ಮಕ್ಕಳೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಗೋಕಾಕ : ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರು ಗೋಕಾಕಿನ ಕ್ರಿಂ ಕಾರ್ನರ್ ರಿಂದ ಆನಂದ ಟಾಕೀಸ್ ವರೆಗೆ ಸಾಯಂಕಾಲ ಸಮಯದಲ್ಲಿ ಸತೀಶ ಜಾರಕಿಹೊಳಿ ಅವರು ತಮ್ಮ ಸ್ನೇಹಿತರಿಗೆ ಭೇಟಿ ನೀಡಿ ತಮ್ಮ ಮಕ್ಕಳಾದ ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ತಮ್ಮ ಗೋಕಾಕಿನ ಸ್ನೇಹಿತರಿಗೆ ಪರಿಚಯ ಮಾಡಿಸುವ ಮೂಲಕ ದಿಡೀರ್ ಭೇಟಿ ನೀಡಿದರು.  

Read More »

ತಿಪಟೂರು ಥಿಯೇಟರ್: ನಟ ದರ್ಶನ್‌ ಭಾವಚಿತ್ರಕ್ಕೆ ಮದ್ಯದ ಅಭಿಷೇಕ

ತಿಪಟೂರು: ತರುಣ್‌ ಸುಧೀರ್‌ ನಿರ್ದೇಶನದ ನಟ ದರ್ಶನ್‌ ಅಭಿನಯದ ‘ರಾಬರ್ಟ್‌’ ಸಿನಿಮಾ ರಾಜ್ಯದಾದ್ಯಂತ ಗುರುವಾರ ತೆರೆಕಂಡಿದ್ದು, ನಗರದ ತ್ರಿಮೂರ್ತಿ ಚಿತ್ರಮಂದಿರದ ಬಳಿ ಸಿನಿಮಾ ಪ್ರದರ್ಶನಕ್ಕೂ ಮೊದಲು ದರ್ಶನ್‌ ಭಾವಚಿತ್ರಕ್ಕೆ ಅಭಿಮಾನಿಗಳು ಮದ್ಯದ (ಬಿಯರ್) ಅಭಿಷೇಕ ಮಾಡುವ ಮೂಲಕ ಮುಜುಗರಕ್ಕೆ ಸಿಲುಕಿದ ಘಟನೆ ನಡೆದಿದೆ. ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆ ದಿನದಂದು ಭಾವಚಿತ್ರ, ಕಟೌಟ್‌ಗಳಿಗೆ ಅಭಿಮಾನಿಗಳು ಹಾಲು ಹಾಗೂ ಹೂವಿನ ಅಭಿಷೇಕ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಕೆಲವು ಅಭಿಮಾನಿಗಳು …

Read More »

ಕೊರೊನಾ ಪ್ರಕರಣ ಏರಿಕೆ; ರಾಜ್ಯದಲ್ಲಿ ರಾತ್ರಿ ಪಾರ್ಟಿ ಮೇಲೆ ನಿಷೇಧ

ಬೆಂಗಳೂರು, ಮಾರ್ಚ್ 11: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ರಾತ್ರಿ ಪಾರ್ಟಿಗಳಿಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಗುರುವಾರ(ಮಾರ್ಚ್ 11) ದಿಂದ ರಾಜ್ಯಾದ್ಯಂತ, ಪ್ರಮುಖವಾಗಿ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ರಾತ್ರಿ ಹೊತ್ತು ಪಾರ್ಟಿಗಳನ್ನು ನಡೆಸುವುದರ ಮೇಲೆ ನಿಷೇಧ ಹೇರಿದ್ದು, ಸ್ಟಾರ್ ಹೋಟೆಲ್‌, ರೆಸ್ಟೊರೆಂಟ್‌ಗಳಿಗೆ ಸೂಚಿಸಿರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಈ ಪಾರ್ಟಿಗಳು ಕೊರೊನಾ ಸೋಂಕಿನ ಸೂಪರ್‌ ಸ್ಪ್ರೆಡರ್‌ಗಳಾಗುವ ಎಲ್ಲಾ …

Read More »

ಮಾ. 15ರಿಂದ ಬಸ್ ಸಂಚಾರ ಸ್ಥಗಿತ..?

ಉಡುಪಿ, ಮಾರ್ಚ್ 11; ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಬಳಿಕ ಸರ್ವೀಸ್ ಬಸ್‌ಗಳಿಗೆ ಇದ್ದ ವಿನಾಯಿತಿ ರದ್ದುಗೊಳಿಸಲಾಗಿದೆ. ಇದನ್ನು ವಿರೋಧಿಸಿ ಮಾರ್ಚ್ 15ರಿಂದ ಬಸ್ ಸಂಚಾರ ಸ್ಥಗಿತಗೊಳಿಸಲು ಖಾಸಗಿ ಬಸ್ ಮಾಲೀಕರು ತೀರ್ಮಾನಿಸಿದ್ದಾರೆ. ಹೆಜಮಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ಸಂಚಾರ ನಡೆಸುವ ಬಸ್‌ಗಳ ಮಾಲೀಕರು ಅನಿರ್ಧಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಉಡುಪಿ ಕೆನರಾ ಷಟಲ್ ಬಸ್ ಸರ್ವೀಸ್ ಹಾಗೂ ಅದರ …

Read More »

ಹಳ್ಳಿಹಕ್ಕಿ ಅವರದ್ದು ಸಿಡಿ ಇದ್ಯಾಂತ? ಕುಟುಕಿದ ಕುಮಾರಸ್ವಾಮಿ

ಮೈಸೂರು (ಮಾ. 11): ರಮೇಶ್ ಜಾರಕಿಹೊಳಿ ಸಿಡಿ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಸಿಡಿ ವಿಚಾರವಾಗಿ ರಾಜಕೀಯ ನಾಯಕರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೇ ವೇಳೆ ಸಿಡಿ ವಿಚಾರವಾಗಿ ಎಂಎಲ್​ಸಿ ವಿಶ್ವನಾಥ್​ ವಿರುದ್ಧ ವ್ಯಂಗ್ಯವಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಏನು ಅವರದ್ದು ಸಿಡಿ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಯಾರ್ಯಾರ ಸಿಡಿ ಇದೇಯೋ ಇಲ್ವೋ ನನಗೇನು ಗೊತ್ತು, ಆ ಯತ್ನಾಳ್ ಹೇಳುತ್ತಾರೆ ಇನ್ನು 26 ಜನರ …

Read More »

ಒಕ್ಕಲಿಗರಿಗೆ 500 ಕೋಟಿಯಲ್ಲ, 5 ರೂಪಾಯಿ ಕೂಡ ಸಿಗಲ್ಲ: ಎಚ್‌ಡಿಕೆ ವ್ಯಂಗ್ಯ

ಮೈಸೂರು, ಮಾರ್ಚ್ 11: ಒಕ್ಕಲಿಗರ ನಿಗಮಕ್ಕೆ 500 ಕೋಟಿ ರೂಪಾಯಿಯಲ್ಲ, 5 ರೂಪಾಯಿಯೂ ಸಿಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್‌ನಲ್ಲಿ ಹೈಕಮಾಂಡ್‌ ಅನ್ನುವ ಸಂಸ್ಕೃತಿಯೇ ಇಲ್ಲ ಎಂದು ಹೇಳಿದ ಅವರು, ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಕೇವಲ ಘೋಷಣೆ ಮಾತ್ರ. ಅದು ಬಿಡುಗಡೆಗೆ ಅದೆಷ್ಟು ವರ್ಷ ಬೇಕೋ ಗೊತ್ತಿಲ್ಲ ಎಂದು ಎಂದು ತಿಳಿಸಿದರು. ಇಂತಹ ಅವಧಿಯಲ್ಲಿ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿಲ್ಲ, …

Read More »

ಮಾರ್ಚ್ 11ರಂದು ಬಿಟ್ ಕಾಯಿನ್ ಮೌಲ್ಯ ಭಾರಿ ಏರಿಕೆ

ಬೆಂಗಳೂರು, ಮಾರ್ಚ್11: ಕಳೆದ ಕೆಲ ದಿನಗಳು ಕುಸಿತ ಕಾಣುತ್ತಿದ್ದ ಬಿಟ್ ಕಾಯಿನ್ ಮೌಲ್ಯ ಸತತವಾಗಿ ಏರಿಕೆ ಕಾಣುತ್ತಿದೆ. ಗುರುವಾರ(ಮಾರ್ಚ್ 11)ರಂದು ಈ ಸಮಯಕ್ಕೆ ಏರಿಕೆ ಕಂಡು 55, 000 ಡಾಲರ್ ಗಡಿ ದಾಟಿದೆ. ಡಿಜಿಟಲ್ ದುಡ್ಡು ಬಿಟ್ ಕಾಯಿನ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿದ ಬಳಿಕ ಭಾರಿ ಕುಸಿತ ಕಂಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 27,734 ಡಾಲರ್ ಮೌಲ್ಯ ಹೊಂದಿದ್ದ ಬಿಟ್ ಕಾಯಿನ್ …

Read More »

ಗೋಕಾಕ ಫಾಲ್ಸ್‌ನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ..

ಗೋಕಾಕ ಫಾಲ್ಸ್‌ನಲ್ಲಿ ಗೋಕಾಕ ಖ್ಯಾತ ಶಿಲ್ಪಿ ಜಕಣಾಚಾರಿ ಅವರಿಂದ ನಿರ್ಮಿತವಾಗಿರುವ ಐತಿಹಾಸಿಕ ತಡಸಲ ಮಹಾಲಿಂಗೇಶ್ವರ “ತಟಾಕೇಶ್ವರ” ದೇವಸ್ಥಾನದಲ್ಲಿ ಮಹಾಶಿವರಾತ್ರಿವನ್ನು ಪ್ರತಿ ವರ್ಷದಂತೆ ಇ ವರ್ಷವು ಅತಿ ವಿಜೃಂಭಣೆಯಿಂದ ಆಚರಣೆ ಮಾಡಿದಲಾಗಿತ್ತು. 1153 ನೇ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನ ಪ್ರತಿ ಶಿಲ್ಪಗಳೂ ಐತಿಹಾಸಿಕ ಮಹತ್ವ ಸಾರುತ್ತವೆ. ಪಕ್ಕದಲ್ಲಿ ಫಾಲ್ಸ್ ಹಸಿರಿನ ನಿಸರ್ಗ ತಾಣ ಇದ್ದು ಇದರ ಮುಂದೆ ಹರಿದು ಬರುವ ಘಟಪ್ರಭೆ 134 ಕಲ್ಲಿನ ಪದರಗಳ ಮಧ್ಯೆ ಸಾಗಿ ಜಲಪಾತವಾಗಿ …

Read More »

ಮಹಾರಾಷ್ಟ್ರದಲ್ಲಿ ಮತ್ತೆ ಏರುತ್ತಿರುವ ಕೊರೋನಾ ಪ್ರಕರಣ; ನಾಗ್ಪುರದಲ್ಲಿ ಒಂದು ವಾರ ಲಾಕ್​ಡೌನ್

ಮುಂಬೈ (ಮಾರ್ಚ್​ 11); ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಏರುತ್ತಲೇ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು ಶೇ.85.91 ರಷ್ಟು ಹೊಸ ಕೊರೋನಾ ಪ್ರಕರಣಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಂತೆ ದೇಶದಲ್ಲಿ ಒಂದೇ ದಿನದಲ್ಲಿ 22,854 ಹೊಸ ಪ್ರಕರಣಗಳು ಕಂಡುಬಂದಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಅತೀ …

Read More »

ಸಿ. ಡಿ. ನಕಲಿ ಎಂದಾದರೆ ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು: ಅಶೋಕ್ ಪೂಜಾರಿ

ಚಿಕ್ಕೋಡಿ(ಮಾ.11): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಈಗಾಗಲೇ ಬಿಜೆಪಿ ಶಾಸಕರು ಸಚಿವರುಗಳು ಹಾಗೂ ಜೆಡಿಎಸ್ ಬ್ಯಾಟಿಂಗ್ ಶುರು ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯೇ ರಮೇಶ್ ಜಾರಕಿಹೋಳಿ ಪರ ಮಾತನಾಡಿದ ಬೆನ್ನಲ್ಲೇ, ಈಗ ಗೋಕಾಕ ಕ್ಷೇತ್ರದಲ್ಲಿ ರಮೇಶ್ ಅವರ ರಾಜಕೀಯ ವಿರೋಧಿ ಅಂತಲೇ ಗುರುತಿಸಿಕೊಂಡಿರುವ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಕೂಡ ರಮೇಶ್ ಜಾರಕಿಹೋಳಿ ಬೆಂಬಲಕ್ಕೆ ನಿಂತಿದ್ದು ಸಿ. ಡಿ. ನಕಲಿ ಎಂದಾದರೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು …

Read More »