Breaking News
Home / ರಾಜಕೀಯ / ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Spread the love

ಧಾರವಾಡ : ಇದೇ ಮೊದಲ ಬಾರಿಗೆ ಕಾವಿ ಧರಿಸಿ ಧಾರವಾಡ ಲೋಕಸಭಾ ಚುನಾವಣಾ ಕಣಕ್ಕಿಳಿದು ರಂಗೇರುವಂತೆ ಮಾಡಿರುವ ಶಿರಹಟ್ಟಿಯ ಫಕ್ಕೀರ ದಿಂಗಾಲೇಶ್ವರರು ಕೋಟ್ಯಧೀಶ್ವರರು..! ಅಷ್ಟೇಯಲ್ಲ, ಕೆಲ ಪ್ರಕರಣಗಳಲ್ಲಿ ಆರೋಪಿ ಕೂಡ.

ಹೌದು…ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ತೊಡೆ ತಟ್ಟಿ ಪಕ್ಷೇತರರಾಗಿ ಸ್ಪರ್ಧೆಗೆ ಇಳಿದಿರುವ ದಿಂಗಾಲೇಶ್ವರರು ಕೋಟಿ ಕೋಟಿ ಮೌಲ್ಯದ ಮಠದ ಟ್ರಸ್ಟ್ ಆಸ್ತಿಯನ್ನು ತಮ್ಮ ಹೆಸರಿನಲ್ಲಿ ಹೊಂದಿ ಕೋಟ್ಯಧಿಪತಿಯಾಗಿದ್ದಾರೆ.

 

ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಿರುವ ಆಸ್ತಿ ವಿವರದ ಅಫಿಡೆವಿಟ್‌ನಲ್ಲಿ ಕೃಷಿ, ಬಾಡಿಗೆ ಹಾಗೂ ಭಕ್ತರ ಕಾಣಿಕೆಯೇ ಆದಾಯದ ಮೂಲ ಎಂಬುದಾಗಿ ಹೇಳಿರುವ ಶ್ರೀಗಳು, 1,22,67,850 ರೂ. ಮೌಲ್ಯದ ಚರಾಸ್ತಿ ಹಾಗೂ 8,52,29,410 ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 9,74,97,260 ರೂ. ಮೌಲ್ಯದ ಒಟ್ಟು ಆಸ್ತಿ ಹೊಂದಿದ್ದಾರೆ. ಇದರ ಜತೆಗೆ 39,68,823 ರೂ.ಗಳ ಸಾಲದ ಋಣ ಇರುವುದಾಗಿ ಅಫಿಡೆವಿಟ್‌ನಲ್ಲಿ ದಾಖಲಿಸಿದ್ದಾರೆ.

ಚರಾಸ್ತಿಯ ಪೈಕಿ ಕೈಯಲ್ಲಿ 1.25 ಲಕ್ಷ ನಗದು ಹಣವಿದ್ದು, ವಿವಿಧ 11 ಬ್ಯಾಂಕ್ ಖಾತೆಗಳಲ್ಲಿ 31,05,262 ರೂ. ಹಣವಿದೆ. ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌ನಲ್ಲಿ 2.50 ಲಕ್ಷ ರೂ.ಗಳ ಷೇರು ಇದರ ಜತೆಗೆ ಬಾಳೇಹೆಸೂರಿನ ಕುಮಾರೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ 2.23,037 ಲಕ್ಷದ ಕ್ಯಾಶ್ ಸರ್ಟಿಫಿಕೇಟ್ ಇದೆ. 2023 ರಲ್ಲಿ ಶಿರಹಟ್ಟಿ ದಿಂಗಾಲೇಶ್ವರಮಠದಿAದ ಖರೀದಿಸಿರುವ 39.50 ಲಕ್ಷ ಮೌಲ್ಯದ ಟೋಯೋಟಾ ಇನೋವಾ ಕೈ ಕ್ರಾಸ್, ಹೈಬ್ರಿಡ್ ಝಡ್‌ಎಕ್ಸ (7ಎಸ್) ವಾಹನವಿದ್ದು, ಶಾಲೆಗಾಗಿ ಖರೀದಿಸಿರುವ 16.50 ಲಕ್ಷ ಮೌಲ್ಯದ ವಾಹನವಿದೆ. ಇದಲ್ಲದೇ ಶ್ರೀಗಳು ಸ್ವಂತ ಖರೀದಿಸಿರುವ 18.30 ಲಕ್ಷ ಮೌಲ್ಯದ ಟೋಯೋಟಾ ಇನೋವಾ ವಾಹನವಿದ್ದು, ಇದರೊಂದಿಗೆ 5.80 ಲಕ್ಷ ಮೌಲ್ಯದ ಟ್ರ‍್ಯಾಕ್ಟರ್ ಇರುವುದಾಗಿ ತಿಳಿಸಿದ್ದಾರೆ.

4.35 ಲಕ್ಷ ಮೌಲ್ಯದ 7 ಕೆಜಿ ಬೆಳ್ಳಿಯಿದ್ದು, 1.17,550 ರೂ ಮೌಲ್ಯದ 18.9 ಗ್ರಾಂ ತೂಕದ ಚಿನ್ನಾಭರಣಗಳಿವೆ. ಸಿರಾಸ್ತಿಯ ಪೈಕಿ ಬಾಳೇಹೆಸೂರಿನಲ್ಲಿ ವಿವಿಧ ಸರ್ವೇ ನಂಬರ್‌ಗಳಲ್ಲಿ 22.57 ಕೃಷಿ ಭೂಮಿಯಿದ್ದು, ಇದಲ್ಲದೇ ವಿವಿಧ ಭಾಗಗಳಲ್ಲಿ 745566.5 ಚದರ ಅಡಿ ಕೃಷಿಯೇತರ ಜಾಗಗಳಿವೆ. ಇವೆಲ್ಲವೂ ಮಠದ ಟ್ರಸ್ಟ ಹೆಸರಿನಲ್ಲಿ ಇರುವ ಆಸ್ತಿಯಾಗಿದೆ ಹೊರತು ವೈಯಕ್ತಿಕ ಆಸ್ತಿಗಳಲ್ಲ. ಪೂರ್ವಿಕ ಮಠವಾದ ವಿರಕ್ತಮಠದಿಂದ ಬಂದಿರುವ ಆಸ್ತಿಯಾಗಿದೆ ಎಂದು ಅಫಿಡೇವಿಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ತೋಟದ ಅಭಿವೃದ್ದಿಗಾಗಿ 6 ಲಕ್ಷ ಹೂಡಿಕೆ ಮಾಡಿದ್ದು, ಇದಲ್ಲದೇ ಶಾಲೆಯ ಕಟ್ಟಡಕ್ಕಾಗಿ 2 ಕೋಟಿ ಹಣ ವಿನಿಯೋಗಿಸಿರುವುದಾಗಿ ಶ್ರೀಗಳು ಅಫಿಡೆವಿಟ್‌ನಲ್ಲಿ ತಿಳಿಸಿದ್ದಾರೆ.

ಗಂಭೀರ ಅಪರಾಧ ಪ್ರಕರಣಗಳು
ಲಕ್ಷೇಶ್ವರ ಪೊಲೀಸ್ ಠಾಣೆಯಲ್ಲಿ ಶ್ರೀಗಳ ವಿರುದ್ದ ಪ್ರತ್ಯೇಕವಾಗಿ ಗಂಭೀರ ಸ್ವರೂಪದ ಮೂರು ದೂರು ದಾಖಲಾಗಿವೆ. ಈ ಪೈಕಿ ಅಪರಾಧ ಸಂಖ್ಯೆ 0166/2014 ಈ ಪ್ರಕರಣ ಗದಗ ಪ್ರಧಾನ ಹಾಗೂ ಸತ್ರ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವ ಹಂತದಲ್ಲಿದ್ದು, ಅಪರಾಧ ಸಂಖ್ಯೆ 0081/2015 ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇನ್ನು 79/2015 ಪ್ರಕರಣವು ವಿಶೇಷ ಎಸ್‌ಸಿ/ಎಸ್‌ಟಿ ಪ್ರಕರಣವೂ ನ್ಯಾಯಾಲಯದಲ್ಲಿದೆ. ಎಸ್‌ಸಿ-ಎಸ್‌ಟಿ ಪಿಎ ಕಾಯ್ದೆ-1989 ಅಡಿ ಶ್ರೀಗಳ ವಿರುದ್ದ ದಾಖಲಾಗಿದ್ದು, ಇದಲ್ಲದೇ ಗಂಭೀರ ಸ್ವರೂಪದ 307, 354, 427, 506, 504, 143, 147, 148, 323, 324, 354, 427 ಸೇರಿದಂತೆ ವಿವಿಧ ಕಲಂಗಳಡಿ ದೂರುಗಳು ದಾಖಲಾಗಿವೆ. ಕೊಲೆಗೆ ಯತ್ನ, ಜೀವ ಬೆದರಿಕೆ, ಜಾತಿ ನಿಂದನೆ, ಮಹಿಳೆಗೆ ಕೈಯಿಂದ ಹೊಡೆದು ತಳ್ಳಾಡಿರುವ ಪ್ರಕರಣಗಳು ಇವಾಗಿವೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ