Breaking News

ದರ್ಶನ್‌ ಬೆನ್ನುನೋವು ಚಿಕಿತ್ಸೆಗೆ ಕೋರ್ಟ್‌ ಅಸ್ತು – ಇಂದೇ ಆಸ್ಪತ್ರೆಗೆ ಶಿಫ್ಟ್?

Spread the love

ಬೆಂಗಳೂರು: ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ನಟ ದರ್ಶನ್‌ಗೆ  ಈಗ ಬೆನ್ನುನೋವಿನ ಸಮಸ್ಯೆ ಶುರುವಾಗಿದೆ. ನೋವು ಹೆಚ್ಚಾದ ಕಾರಣ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮಾಡಿಸಿಕೊಳ್ಳೋಕೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.

ದರ್ಶನ್‌ಗೆ ಬೆನ್ನುನೋವು ಜಾಸ್ತಿ ಆಗಿರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಅಂತ ಅವರ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಜೊತೆಗೆ ಜೈಲಿನ ವೈದ್ಯರು ನೀಡಿದ್ದ ಹೆಲ್ತ್ ರಿಪೋರ್ಟ್ ಕೋರ್ಟ್ ಮುಂದೆ ಇಡಲಾಗಿತ್ತು.

ಅರ್ಜಿ ಮತ್ತು ವೈದ್ಯರ ರಿಪೋರ್ಟ್ ನೋಡಿದ ಬೆಂಗಳೂರಿನ ಸಿಸಿಎಚ್-59 ಕೋರ್ಟ್, ಖಾಸಗಿ ಆಸ್ಪತ್ರೆ ಬದಲು ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮಾಡಿಸಲು ಆದೇಶ ನೀಡಿದೆ.

ಕೋರ್ಟ್ ಆದೇಶ ಪ್ರತಿ ಜೈಲು ಅಧಿಕಾರಿಗಳ ಕೈ ಸೇರಿದ ತಕ್ಷಣ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ಶಿಫ್ಟ್‌ ಆಗಲಿದ್ದು, ಇವತ್ತೇ ಆಸ್ಪತ್ರೆಗೆ ಕರೆತರುವ ಸಾಧ್ಯತೆ ಇದೆ.

ವಿಕ್ಟೋರಿಯಾ ಆಸ್ಪತ್ರೆಯ ಜೈಲು ವಾರ್ಡ್‌ನಲ್ಲಿ ದರ್ಶನ್‌ಗೆ ಜಿಕಿತ್ಸೆ ಸಿಗಲಿದೆ. ಅಲ್ಲಿನ ನುರಿತ ವೈದ್ಯರು ಫಿಸಿಯೋಥೆರಪಿ ಶುರು ಮಾಡಲಿದ್ದಾರೆ.


Spread the love

About Laxminews 24x7

Check Also

KRS ಡ್ಯಾಂನಲ್ಲಿ ದಿನೇ ದಿನೆ ಕುಸಿಯುತ್ತಿದೆ ನೀರಿನ ಮಟ್ಟ – ಬೇಸಿಗೆಯಲ್ಲಿ ಜಲಕ್ಷಾಮದ ಆತಂಕ!

Spread the loveಮಂಡ್ಯ: ಹಳೇ ಮೈಸೂರು ಭಾಗದ ಕೆಆರ್‌ಎಸ್ ಜಲಾಶಯದ  ನೀರಿನ ಮಟ್ಟದಲ್ಲಿ ಗಣನೀಯ ಕುಸಿತ ಕಂಡುಬರುತ್ತಿದ್ದು, ದಿನದಿಂದ ದಿನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ