ಹಾಸನ: ಜನರು ಓಡಾಡುವ ರಸ್ತೆಯಲ್ಲಿ ಹಾಡಹಗಲೇ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿರುವ ಘಟನೆ ಹಾಸನ ತಾಲೂಕಿನ ನಿಡುಡಿ ಗ್ರಾಮದ ಬಳಿ ನಡೆದಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬಯಲುಸೀಮೆ ಭಾಗದಲ್ಲಿ ಚಿರತೆಗಳ ಕಾಟ ಶುರುವಾಗಿದೆ. ಹಾಡಹಗಲೇ 2 ಚಿರತೆಗಳು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿವೆ.
ಈ ಹಿಂದೆ ಕೂಡ ಹಲವು ಬಾರಿ ಕಾಣಿಸಿಕೊಂಡಿದ್ದ ಚಿರತೆಗಳು ಬೀದಿನಾಯಿ, ಜಾನುವಾರುಗಳನ್ನು ತಿಂದು ಆತಂಕ ಸೃಷ್ಟಿಸಿದ್ದವು. ಆದರೆ, ಈಗ ಮತ್ತೆ ಈ ವನ್ಯ ಮೃಗಗಳ ಕಾಟ ಶುರುವಾಗಿದ್ದು, ರಾತ್ರಿ ವೇಳೆ ಗ್ರಾಮದೊಳಗೆ ಪ್ರವೇಶಿಸಿ ಜನರಿಗೆ ಪ್ರಾಣಭಯ ಹುಟ್ಟಿಸಿವೆ.
ಹಗಲಿನಲ್ಲೇ ರೈತರ ಜಮೀನಿನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳು, ಭಯದ ವಾತಾವರಣ ನಿರ್ಮಾಣ ಮಾಡಿವೆ. ಚಿರತೆ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Laxmi News 24×7