Breaking News

11ನೇ ದಿನಕ್ಕೆ ಕಾಲಿಟ್ಟ ʻಆಶಾʼ ಹೋರಾಟ – ತಡರಾತ್ರಿ ಪ್ರತಿಭಟನಾ ನಿರತ ಕಾರ್ಯಕರ್ತೆ ಅಸ್ವಸ್ಥ

Spread the love

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಗುಲಾಬಿ ಸೇನೆಯ ಕಹಳೆ ಜೋರಾಗಿದ್ದು, ಇವತ್ತಿಗೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ  11ನೇ ದಿನಕ್ಕೆ ಕಾಲಿಟ್ಟಿದೆ. ಊರಿಗೆಲ್ಲಾ ಆರೋಗ್ಯ ಭಾಗ್ಯ ನೀಡುವ ಆಶಾ ಕಾರ್ಯಕರ್ತೆಯರಿಗೆ ಇವತ್ತು ಸಿಎಂ ವೇತನ ಹೆಚ್ಚಳದ ಭಾಗ್ಯ ನೀಡೋದು ಬಹುತೇಕ ಅನುಮಾನ.

ಈ ಮಧ್ಯೆ ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯೊಬ್ಬರು ತಡರಾತ್ರಿ ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನೆಯಲ್ಲಿ ತೊಡಗಿದ್ದ ಕಾರ್ಯಕರ್ತೆ ಗಂಗಾ (38) ಅವರಿಗೆ ತಡರಾತ್ರಿ 2.30ರ ಸುಮಾರಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಆರೋಗ್ಯ ಸಮಸ್ಯೆ  ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ.

ಕೂಡಲೇ ಅಂಬುಲೆನ್ಸ್‌ ಮೂಲಕ ಅಸ್ವಸ್ಥ ಕಾರ್ಯಕರ್ತೆಯನ್ನ ನಗರದ ಕೆ.ಸಿ ಜನರಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ 10 ದಿನದಿಂದ 20ಕ್ಕೂ ಹೆಚ್ಚು ಪ್ರತಿಭಟನಾ ನಿರತ ʻಆಶಾʼಗಳು ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥಗೊಂಡಿರುವುದು ಕಂಡುಬಂದಿದೆ. ಆದ್ರೂ ಪಟ್ಟುಬಿಡದ ಕಾರ್ಯಕರ್ತೆಯರು ಪ್ರತಿಭಟನೆ ಮುಂದುವರಿಸಿದ್ದಾರೆ.

ಲಿಖಿತ ಭರವಸೆ ಕೊಡಲು ಅವಕಾಶವಿಲ್ಲ: ಸಿಎಂ
ಬಿಸಿಲು, ಮಳೆ, ಗಾಳಿ, ಚಳಿ… ಯಾವುದಕ್ಕೂ ಜಗ್ಗದೆ ಶುರುವಾದ ಆಶಾ ಕಿಚ್ಚು ಇಂದಿಗೆ ಬರೋಬ್ಬರಿ 11ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೊಂದ್ಕಡೆ ಜಪಾನ್‌ನಿಂದ ಬಂದಿರೋ ಅಣ್ಣ ಡಿಕೆ ಶಿವಕುಮಾರ್ , ಇವತ್ತು ಆಶಾ ಕಾರ್ಯಕರ್ತೆಯರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.

ಮೊನ್ನೆ ಸಿಎಂ ಡಿಕೆಶಿ.. ಜಪಾನ್‌ನಲ್ಲಿರುವಾಗಲೇ ವಿಡಿಯೋ ಕಾಲ್ ಮಾಡಿ ಪರಿಹಾರ ಕೊಡೋದಾಗಿ ಮನವಿ ಮಾಡಿದ್ರು. ಆದರೆ ನಿನ್ನೆ ಬೆಂಗಳೂರಿಗೆ ಬರ್ತಿದ್ದಂತೆ ಆಶಾ ಕಾರ್ಯಕರ್ತೆಯರಿಗೆ ಎಚ್ಚರಿಕೆ ನೀಡಿದ್ದಾರೆ. ನಾವು ನಿಮ್ಮ ಪರವಾಗಿದ್ದೇವೆ, ಪ್ರತಿಷ್ಠೆ ಬಿಡಿ. ಬೇರೆಯವರು ರಾಜಕಾರಣಕ್ಕೆ ಬಂದು ನಿಮ್ಮನ್ನು ಬಳಸಿಕೊಳ್ಳುತ್ತಾರೆ ಅಂತ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರವನ್ನ ಯಾಕೆ ಯಾರು ಕೇಳ್ತಿಲ್ಲ ಅಂತಾ ಡಿಕೆಶಿ ಪ್ರಶ್ನೆ ಮಾಡಿದ್ದಾರೆ.

ಜೊತೆಗೆ ಸಿಎಂ ಮಾತಿನ ಮೇಲೆ ನಂಬಿಕೆ ಇಲ್ಲ ಅಂದ್ಮೇಲೆ ಏನ್ ಮಾಡಲು ಸಾಧ್ಯ? ಒಬ್ಬರಿಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ, ರಾಜ್ಯದ 17 ಇಲಾಖೆಗಳಲ್ಲೂ ಬೇಡಿಕೆಗಳಿದ್ದು, ಎಲ್ಲರಿಗೂ ಲಿಖಿತ ಉತ್ತರ ಕೊಡಬೇಕಾಗುತ್ತೆ. ಸರ್ಕಾರಕ್ಕೂ ಒಂದು ಮಿತಿ ಇದೆ, ನಿಯಮಗಳ ಪ್ರಕಾರ ಲಿಖಿತವಾಗಿ ಕೊಡಲು ಅವಕಾಶವಿಲ್ಲ ಅಂತ ಸಿಎಂ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಆಶಾ ಕಾರ್ಯಕರ್ತೆಯರ 15 ಸಾವಿರ ವೇತನ ಹೆಚ್ಚಳದ ಬೇಡಿಕೆ ಈಡೇರುವುದು ಬಹುತೇಕ ಅನುಮಾನವಾಗಿದೆ.

ಮತ್ತೊಂದೆಡೆ ಸಿಎಂ ಕರೆಗಾಗಿ ಕಾಯುತ್ತಿರೋ ಆಶಾ ಕಾರ್ಯಕತೆಯರಿಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಇವತ್ತು ಬೆಳ್ಳಿಗ್ಗೆ ಸಿಎಂ ಸಲಹೆಗಾರರಿಗೆ ಕರೆ ಮಾಡುವುದಾಗಿ ಆಶಾ ಸಂಘಟನೆ ತಿಳಿಸಿದೆ. ಆದ್ರೆ ಸರ್ಕಾರ ಸ್ವಲ್ಪ ಮಟ್ಟಿಗೆ ವೇತನ ಹೆಚ್ಚಳ ಮಾಡಿ ಕಳಿಸೋ ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ, ಸರ್ಕಾರ ಎಷ್ಟು ವೇತನ ಹೆಚ್ಚಳ ಮಾಡಲಿದೆ ಅಂತಾ ಆದ್ರೂ ನಮ್ಮ ಜೊತೆ ಚರ್ಚೆ ನಡೆಸಿ, ಕೈಯಲ್ಲಿ ಆದೇಶ ಪತ್ರ ಸಿಗೋವರೆಗೂ ಜಾಗ ಬಿಟ್ಟು ಕದಲಲ್ಲ ಅಂತ ಎಚ್ಚರಿಸಿದ್ದಾರೆ.


Spread the love

About Laxminews 24x7

Check Also

KRS ಡ್ಯಾಂನಲ್ಲಿ ದಿನೇ ದಿನೆ ಕುಸಿಯುತ್ತಿದೆ ನೀರಿನ ಮಟ್ಟ – ಬೇಸಿಗೆಯಲ್ಲಿ ಜಲಕ್ಷಾಮದ ಆತಂಕ!

Spread the loveಮಂಡ್ಯ: ಹಳೇ ಮೈಸೂರು ಭಾಗದ ಕೆಆರ್‌ಎಸ್ ಜಲಾಶಯದ  ನೀರಿನ ಮಟ್ಟದಲ್ಲಿ ಗಣನೀಯ ಕುಸಿತ ಕಂಡುಬರುತ್ತಿದ್ದು, ದಿನದಿಂದ ದಿನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ