ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿಶ್ವದಲ್ಲಿ 199 ದೇಶಗಳಿಗೆ ಹಬ್ಬಿದ್ದು, 5.31 ಲಕ್ಷ ಜನರಿಗೆ ಸೋಂಕು ತಗುಲಿದೆ. ಹೆಮ್ಮಾರಿ ಕೊರೊನಾ ವೈರಸ್‍ಗೆ ಈವರೆಗೂ 24 ಸಾವಿರ ಜನ ಬಲಿಯಾಗಿದ್ದಾರೆ.
ಕೊರಾನಾ ವೈರಸ್‍ಗೆ ಸ್ಪೇನ್‍ನಲ್ಲಿ ಒಂದೇ ದಿನಕ್ಕೆ 718 ಮಂದಿ ಮೃತಪಟ್ಟಿದ್ದು, ಇಟಲಿಯಲ್ಲಿ 712 ಮಂದಿ ಆಹುತಿಯಾಗಿದ್ದಾರೆ. ಫ್ರಾನ್ಸ್‌ನಲ್ಲಿ 365 ಜನ, ಇಂಗ್ಲೆಂಡ್‍ನಲ್ಲಿ 110 ಮಂದಿ ಕೊರೊನಾ ಸಾವು ಸಂಭವಿಸಿದೆ.
ಅಮೆರಿಕದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮೂಲಕ ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿ ಅಮೆರಿಕ ಪ್ರಥಮ ಸ್ಥಾನಕ್ಕೇರಿದೆ. ಗುರುವಾರ ಒಂದೇ ದಿನ 15 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕದಲ್ಲಿ ಒಟ್ಟಾರೆ 85 ಸಾವಿರ ಜನರಿಗೆ ಸೋಂಕು ತಗುಲಿದ್ದು, 263 ಮಂದಿ ಬಲಿಯಾಗಿದ್ದಾರೆ. ಚೀನಾನದಲ್ಲಿ ಈವರೆಗೂ 81,340 ಜನರಿಗಷ್ಟೇ ವೈರಸ್ ತಗುಲಿದ್ದು, 3,296 ಜನರು ಮೃತಪಟ್ಟಿದ್ದಾರೆ.
ಭಾರತದಲ್ಲಿ ಕೊರೊನಾ:
ದೇಶದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಸೋಂಕಿತರ ಸಂಖ್ಯೆ 727ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ 55 ಮಂದಿ ಕೊರೊನಾ ಸೋಂಕಿತ ಪತ್ತೆಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತಷ್ಟು ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಜನ ಉದಾಸೀನ, ಉದ್ಧಟತನಕ್ಕೆ ಇಂದಿನಿಂದ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ. ಲಾಕ್‍ಡೌನ್ ಪಾಲಿಸದೆ ಬೀದಿಗೆ ಇಳಿದರೆ ಬಂಧಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ.