Breaking News

ರಾಜ್ಯದಲ್ಲಿ ಮದ್ಯದಂಗಡಿ ಕಳ್ಳತನದ ಹಿಂದೆ ಮಾಲೀಕರ ಕೈವಾಡವಿದೆ: ಸಚಿವ ರಮೇಶ್ ಜಾರಕಿಹೊಳಿ ಆರೋಪ

Spread the love

ಬೆಳಗಾವಿ: ರಾಜ್ಯದಲ್ಲಿ ಮದ್ಯದಂಗಡಿ ಕಳ್ಳತನದ ಹಿಂದೆ ಮಾಲೀಕರ ಕೈವಾಡವಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ.

ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಅಂಗಡಿಗಳು ಕಳ್ಳತನವಾಗುತ್ತಿವೆ. ಇಲ್ಲಿ ಹೆಚ್ಚಿನ ಲಾಭಕ್ಕಾಗಿ ಮದ್ಯ ಅಂಗಡಿ ಮಾಲೀಕರೇ ಮದ್ಯವನ್ನ ಕಳ್ಳತನ ಮಾಡಿಸಿ, ಹೆಚ್ಚಿನ ದರಕ್ಕೆ ಅದನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕೊರೊನಾ ವೈರಸ್ ಹತೋಟಿಗೆ ಬರುವವರೆಗೂ ಮದ್ಯದ ಅಂಗಡಿ ಪ್ರಾರಂಭಿಸಬೇಡಿ ಎಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದೇನೆ. ಅದಕ್ಕೆ ಸಿಎಂ ಯಡಿಯೂರಪ್ಪ ಕೂಡ ಸ್ಪಂದಿಸಿದ್ದಾರೆ . ಕೊರೊನಾ ನಿಯಂತ್ರಣಕ್ಕೆ ತರಲು ರಾಜ್ಯದಲ್ಲಿ ಎಲ್ಲಾ ಸಚಿವರು, ಶಾಸಕರು ಕೆಲಸ ಮಾಡುತ್ತಿದ್ದಾರೆ. ತಬ್ಲಿಘಿ ಜಮಾತ್‍ನಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹಬ್ಬಿದೆ. ರಾಜ್ಯದಲ್ಲಿ ಇನ್ನು 15 ದಿನಗಳಲ್ಲಿ ಕೊರೊನಾ ಹತೋಟಿಗೆ ಬರಲಿದೆ ಎಂದು ತಿಳಿಸಿದರು


Spread the love

About Laxminews 24x7

Check Also

ಬೆಳಗಾವಿ ನಗರದಲ್ಲಿ 2 ದಿನಗಳಕಾಲ ಆದ ನೀರಿನ ವ್ಯತ್ಯೆಯ ಸರಿಪಡಿಸಿದ ಮಹಾನಗರ ಪಾಲಿಕೆ

Spread the loveಬೆಳಗಾವಿ:  ಹೆಸ್ಕಾಂ  ಮೇಲಿಂದ ಮೇಲೆ ಶಟ್ ಡೌನ್ ಆಗುವ ಕಾರಣದಿಂದ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯೆಯ ಉಂಟಾಗುವುದರಿಂದ ಹಿಡ್ಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ