Breaking News
Home / ಜಿಲ್ಲೆ / ಪಾಕಿಸ್ತಾನ್ ಜಿಂದಾಬಾದ್ ಎಂದು ಪಾಕಿಸ್ತಾನದ ಸೇನೆಯ ಹಾಡಿಗೆ ಪಾಕ್ ಪರ ಘೋಷಣೆ ಕೂಗಿದ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಕೊನೆಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಪಾಕಿಸ್ತಾನ್ ಜಿಂದಾಬಾದ್ ಎಂದು ಪಾಕಿಸ್ತಾನದ ಸೇನೆಯ ಹಾಡಿಗೆ ಪಾಕ್ ಪರ ಘೋಷಣೆ ಕೂಗಿದ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಕೊನೆಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Spread the love

ಹುಬ್ಬಳ್ಳಿ:ಪಾಕಿಸ್ತಾನ್ ಜಿಂದಾಬಾದ್ ಎಂದು ಪಾಕಿಸ್ತಾನದ ಸೇನೆಯ ಹಾಡಿಗೆ ಪಾಕ್ ಪರ ಘೋಷಣೆ ಕೂಗಿದ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಕೊನೆಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಮೂರನೇ ಜೆಎಂಎಫ್‍ಸಿ ನ್ಯಾಯಾಧೀಶರ ಮುಂದೆ ಹಾಜರಾದ ಮೂವರು ಆರೋಪಿಗಳಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಭಾನುವಾರ ಪೊಲೀಸರು ಸಿಆರ್ ಪಿ 169 ಬಾಂಡ್ ಮೇಲೆ ಬಿಡುಗಡೆ ಮಾಡಿದರು. ತದನಂತರ ಹಿಂದೂಪರ ಸಂಘಟನೆಗಳು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪೊಲೀಸರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಪೊಲೀಸರು ಮತ್ತೊಮ್ಮೆ ಆರೋಪಿಗಳನ್ನು ವಶಕ್ಕೆ ಪಡೆದು ಇಂದು 2ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು

ನ್ಯಾಯಾಂಗ ಬಂಧನಕ್ಕೆ ಕರೆದೊಯ್ಯುವ ವೇಳೆ ನ್ಯಾಯಾಲಯದ ಆವರಣದಲ್ಲಿ ಭಾರೀ ಹೈಡ್ರಾಮಾವೇ ನಡೆದಿದ್ದು, ಕಾಶ್ಮೀರ ವಿದ್ಯಾರ್ಥಿಗಳಿಗೆ ಹಿಂದೂಪರ ಸಂಘಟನೆಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಲ್ಲದೆ ಪ್ರತಿಭಟನಾಕಾರರು ಪೊಲೀಸ್ ಜೀಪ್ ಗೆ ಬೂಟು ಎಸೆದ ಪ್ರಸಂಗವೂ ನಡೆಯಿತು.

ಒಟ್ಟನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಮೂವರು ಕಾಶ್ಮೀರ ವಿದ್ಯಾರ್ಥಿಗಳನ್ನು ಪೊಲೀಸರು ನ್ಯಾಯಾಲಯವರೆಗೂ ಕರೆ ತಂದು ವಿಶೇಷ ಕೊಠಡಿಯಲ್ಲಿ ಕೂರಿಸಿದರು. ಪೊಲೀಸರ ವರ್ತನೆಗೆ ಆಕ್ರೋಶಗೊಂಡ ನ್ಯಾಯವಾದಿಗಳು, ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು. ಆರೋಪಿಗಳನ್ನು ಲಾಕಪ್ ರೂಂನಲ್ಲಿ ಕೂರಿಸಿ ವಿಶೇಷ ಕೊಠಡಿಯಲ್ಲಿ ಯಾಕೆ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದರು.

ವಕೀಲರ ವಿರೋಧದ ನಂತರ ಲಾಕಪ್ ರೂಂನಲ್ಲಿ ಆರೋಪಿಗಳನ್ನು ಕೂರಿಸಿದ ಪೊಲೀಸರು ನಂತರ ನ್ಯಾಯಾಧೀಶೆ ಪುಷ್ಪಾರ ಮುಂದೆ ಹಾಜರುಪಡಿಸಿದರು. ಈ ವೇಳೆ ಹುಬ್ಬಳ್ಳಿಯ ಯಾವ ನ್ಯಾಯಾದೀಶರು ಆರೋಪಿಗಳ ಪರ ವಕಾಲತ್ತು ಹಾಕಲಿಲ್ಲ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ನ್ಯಾಯಾಧೀಶರು ಆರೋಪಿಗಳನ್ನು ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿದ್ದಾರೆ. ಸಾಕಷ್ಟು ಡ್ರಾ ನಂತರ ಕೊನೆಗೂ ದೇಶದ್ರೋಹಿಗಳು ಇದೀಗ ಕಂಬಿ ಪಾಲಾಗಿದ್ದಾರೆ.


Spread the love

About Laxminews 24x7

Check Also

ಹಳೆಯ ದ್ವೇಷಕ್ಕೆ 200 ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು!

Spread the love ದಾವಣಗೆರೆ: ಇಬ್ಬರು ವ್ಯಕ್ತಿಗಳ ನಡುವೆ ಇದ್ದ ಹಳೆಯ ದ್ವೇಷಕ್ಕೆ ತೋಟದಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು ನಾಶವಾಗಿವೆ. ದಾವಣಗೆರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ