Breaking News

ವೃದ್ಧೆಯ ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣ ಲೂಟಿ

ಬೆಂಗಳೂರು : ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ಬುಧವಾರ ನಡೆದಿದೆ. ರಾಮಸ್ವಾಮಿಪಾಳ್ಯ ನಿವಾಸಿ ಕಾಂತಮ್ಮ (70) ಕೊಲೆಯಾದವರು. ಕಾಂತಮ್ಮ ಅವರ ಮೈ ಮೇಲಿದ್ದ ಚಿನ್ನಾಭರಣವನ್ನು ದುಷ್ಕರ್ಮಿಗಳು ಕಳವು ಮಾಡಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಂತಮ್ಮ ಅವರಿಗೆ ಐವರು ಮಕ್ಕಳಿದ್ದು, ಮಾನಸಿಕ ಅಸ್ವಸ್ಥ ಪುತ್ರಿ ಜತೆ ರಾಮಸ್ವಾಮಿ ಪಾಳ್ಯದಲ್ಲಿ ವಾಸವಿದ್ದರು. ಉಳಿದ ಮಕ್ಕಳು …

Read More »

ನಟಿ ರಾಗಿಣಿಗೆ ಮತ್ತೆ ಸಿಸಿಬಿ ನೋಟಿಸ್; ಇಂದು ಹಾಜರಾಗದಿದ್ದರೆ ಬಂಧನ..?

ಬೆಂಗಳೂರು : ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಮಾರಾಟ ಜಾಲದ ನಂಟಿನ ಪ್ರಕರಣದಲ್ಲಿ ತಮ್ಮ ಆಪ್ತ ಗೆಳೆಯನ ಬಂಧನ ಬೆನ್ನೆಲ್ಲೇ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೂ ಬಂಧನ ಭೀತಿ ಶುರುವಾಗಿದೆ. ಈ ಪ್ರಕರಣ ಸಂಬಂಧ ನೋಟಿಸ್‌ ನೀಡಿದ್ದರೂ ಗುರುವಾರ ರಾಗಿಣಿ ಸಿಸಿಬಿ ವಿಚಾರಣೆಗೆ ಗೈರಾಗಿದ್ದಾರೆ. ವೈಯಕ್ತಿಕ ಕಾರಣ ನೀಡಿದ ಗೈರಾಗಿರುವ ನಟಿ, ಸೋಮವಾರ ವಿಚಾರಣೆಗೆ ಬರಲು ಬದ್ಧರಾಗಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಿಸಿಬಿ, 2ನೇ …

Read More »

4 ಐಪಿಎಸ್‌, 2 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು  : ನಾಲ್ವರು ಐಪಿಎಸ್‌ ಹಾಗೂ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಆಯಂಬಿಡೆಂಟ್‌ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದ ಎಸ್‌.ಗಿರೀಶ್‌ ಅವರನ್ನು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಉಳಿದಂತೆ ಸಿ.ಕೆ.ಬಾಬಾ ಬೆಂಗಳೂರು ಈಶಾನ್ಯ ಡಿಸಿಪಿ, ಡಾ.ಭೀಮಾಶಂಕರ್‌ ಎಸ್‌.ಗುಳೇದ್‌ ಬೆಂಗಳೂರು ಸಿಐಡಿ ಬೆಂಗಳೂರು ಎಸ್‌ಪಿ ಹಾಗೂ ಡಾ.ಅನೂಪ್‌ ಶೆಟ್ಟಿಅವರನ್ನು ಕೆಎಸ್‌ಆರ್‌ಪಿ ಕಮಾಂಡೆಂಟ್‌ ಆಗಿ ವರ್ಗಾವಣೆ ಮಾಡಲಾಗಿದೆ. …

Read More »

ಸಾಲ ಮರುಹೊಂದಾಣಿಕೆ: ಸೆ. 15ರೊಳಗೆ ಜಾರಿಗೆ ಸೂಚನೆ

ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ಪರಿಣಾಮವಾಗಿ, ಸಾಲ ಮರುಪಾವತಿಯಲ್ಲಿ ತೊಂದರೆ ಎದುರಿಸುತ್ತಿರುವವರಿಗೆ ಸಾಲ ಮರುಹೊಂದಾಣಿಕೆಯ ಸೌಲಭ್ಯವನ್ನು ಸೆಪ್ಟೆಂಬರ್‌ 15ಕ್ಕೆ ಮೊದಲು ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸೂಚಿಸಿದ್ದಾರೆ. ನಿರ್ಮಲಾ ಅವರು ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿ ಪ್ರತಿನಿಧಿಗಳ ಜೊತೆ ಗುರುವಾರ ಸಭೆ ನಡೆಸಿದರು. ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದಿರುವ ಸಾಲ ಮರುಹೊಂದಾಣಿಕೆಯ ಸೌಲಭ್ಯವನ್ನು ತಕ್ಷಣ ಕಲ್ಪಿಸಬೇಕು ಎಂದು ಸೂಚಿಸಿದರು. ಸಾಲದ …

Read More »

ಭಾರತ-ರಷ್ಯಾ ನಡುವೆ ಎಕೆ-47 203 ರೈಫಲ್‌ ಒಪ್ಪಂದ ಅಂತಿಮ

ಮಾಸ್ಕೊ: ಭಾರತದಲ್ಲೇ ಎ.ಕೆ.-47 ರೈಫಲ್‌ನ ಅತ್ಯಾಧುನಿಕ ಮಾದರಿ ಆಗಿರುವ ಎ.ಕೆ.-47 203 ಉತ್ಪಾದನೆಯ ಪ್ರಮುಖ ಒಪ್ಪಂದವನ್ನು ರಕ್ಷಣಾ ಸಚಿವ ರಾಜ‌ನಾಥ್‌ ಸಿಂಗ್‌ ಭೇಟಿ ವೇಳೆ ಭಾರತ ಹಾಗೂ ರಷ್ಯಾ ಗುರುವಾರ ಅಂತಿಮಗೊಳಿಸಿದೆ. 1996 ರಿಂದ ಭಾರತೀಯ ಸೇನೆಯ ಬಳಿ ಇರುವಂಥ ಇನ್ಸಾಸ್ ರೈಫಲ್‌ಗಳ ಬದಲಾಗಿ ಎ.ಕೆ.-47 203 ರೈಫಲ್‌ಗಳನ್ನು ಬಳಸಲು ಭಾರತ ನಿರ್ಧರಿಸಿದೆ. ಭಾರತಕ್ಕೆ 7,70,000 ಎಕೆ-47 203 ರೈಫಲ್‌ಗಳ ಅಗತ್ಯ ಇದ್ದು, ಈ ಪೈಕಿ 1 ಲಕ್ಷ ರೈಫಲ್‌ಗಳನ್ನು ಆಮದು …

Read More »

ಒಂದಲ್ಲ, ಎರಡಲ್ಲ ಬರೋಬ್ಬರಿಗೆ 12 ಸೀರಿಯಲ್ ನಟಿಯರಿಗೆ ಡ್ರಗ್ಸ್ ಲಿಂಕ್

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ದಂಧೆಯಲ್ಲಿ ಕೇವಲ ಸಿನಿಮಾ ತಾರೆಯರು ಮಾತ್ರವಲ್ಲದೇ ಸೀರಿಯಲ್ ನಟಿಯರಿಗೂ ಡ್ರಗ್ಸ್ ಲಿಂಕ್ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ತನಿಖೆ ವೇಳೆ ಸಾಕಷ್ಟು ಮಾಹಿತಿ ಲಭಿಸಿದೆ. ಇದರ ಅನ್ವಯ ಕೆಲ ಸ್ಯಾಂಡಲ್‍ವುಡ್ ನಟಿಯರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. …

Read More »

ಪಬ್‌ಜಿ ನಿಷೇಧ – ಚೀನಾದ ಟೆನ್ಸೆಂಟ್‌ ಕಂಪನಿಗೆ 14 ಶತಕೋಟಿ ಡಾಲರ್‌ ನಷ್ಟ

ಬೀಜಿಂಗ್‌: ಭಾರತದ ಸರ್ಕಾರ ಜನಪ್ರಿಯ ಗೇಮಿಂಗ್‌ ಅಪ್ಲಿಕೇಶನ್‌ ಪಬ್‌ಜಿಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಚೀನಾ ಟೆನ್ಸೆಂಟ್‌ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ. ಚೀನಾದ ದೈತ್ಯ ಇಂಟರ್‌ನೆಟ್‌ ಕಂಪನಿ ಟೆನ್ಸೆಂಟ್‌ ಷೇರು ಶೇ.2ರಷ್ಟು ಇಳಿಕೆಯಾಗಿದೆ. ಪರಿಣಾಮ ಮಾರುಕಟ್ಟೆ ಮೌಲ್ಯದಲ್ಲಿ 14 ಶತಕೋಟಿ ಡಾಲರ್‌ ಕರಗಿ ಹೋಗಿದೆ. ಪಬ್‌ಜಿ ಆಟಕ್ಕೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, 17.5 ಕೋಟಿ ಜನ ಬಳಕೆ ಮಾಡುತ್ತಿದ್ದರು. ಲಡಾಖ್‌ ಗಡಿಯಲ್ಲಿ ಚೀನಾ ಕಿರಿಕ್‌ ಮಾಡಿದ ಬೆನ್ನಲ್ಲೇ ದೇಶದ ಭದ್ರತೆ …

Read More »

ಪ್ರತೀಕ್ ಶೆಟ್ಟಿ ದೊಡ್ಡ ಡ್ರಗ್ ಪೆಡ್ಲರ್: ಅಲೋಕ್ ಕುಮಾರ್

ಬೆಂಗಳೂರು: ಈಗ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಪ್ರತೀಕ್ ಶೆಟ್ಟಿ ಒಬ್ಬ ದೊಡ್ಡ ಪೆಡ್ಲರ್ ಆಗಿದ್ದ ಎಂದು ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಕೇಸಿನಲ್ಲಿ ದಿನಕ್ಕೊಂದು ವ್ಯಕ್ತಿಯ ಹೆಸರು ಕೇಳಿ ಬರುತ್ತಿದೆ. ಸಿಸಿಬಿ ಪೊಲೀಸರು ಈಗಾಗಲೇ, ನಟಿ ರಾಗಿಣಿ ಅಪ್ತ ರವಿಶಂಕರ್ ನನ್ನು ಬಂಧಿಸಿದ್ದಾರೆ. ಜೊತೆಗೆ ಹೈಟೆಕ್ ಡ್ರಗ್ ದಂಧೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಕಾರ್ತಿಕ್ ರಾಜು, ರಾಹುಲ್, ಪ್ರತೀಕ್ …

Read More »

ನಟಿ ಸಂಜನಾ ಆಪ್ತನ ಜೊತೆ ಖ್ಯಾತ ರಾಜಕಾರಣಿಯ ಪುತ್ರನಿಗೂ ಲಿಂಕ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಮಾಜಿ ಸಂಸದರೊಬ್ಬರ ಮಗನ ಹೆಸರು ಕೇಳಿಬಂದಿದೆ. ಹೌದು. ನಟಿ ಸಂಜನಾ ಆಪ್ತ ರಾಹುಲ್‌ನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೊಬೈಲ್‌ನಲ್ಲಿರುವ ವಿಡಿಯೋದಲ್ಲಿರುವ ಪಾರ್ಟಿಯಲ್ಲಿ ಮಾಜಿ ಸಂಸದನ ಪುತ್ರ ಭಾಗಿಯಾಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ವಿಡಿಯೋವನ್ನು ಇಟ್ಟುಕೊಂಡು ಮತ್ತಷ್ಟು ಪ್ರಶ್ನೆಗಳನ್ನು ರಾಹುಲ್‌ಗೆ ಕೇಳಿದಾಗ ವಾರಕ್ಕೊಮ್ಮೆ ನಾನು ಆತನ ಜೊತೆ ಮಾತನಾಡುತ್ತಿದ್ದೆಎಂದಿದ್ದಾನೆ. ಈಗ ಸಿಸಿಬಿ ಪೊಲೀಸರು ರಾಜಕಾರಣಿಯ ಪುತ್ರನ ಪಾತ್ರದ ಬಗ್ಗೆ …

Read More »

ಚಿತ್ರರಂಗ ಅಂತಲ್ಲಾ ಎಲ್ಲಾ ಕಡೆ ಈ ಡ್ರಗ್ಸ್ ಮಾಫಿಯಾ ಇದೆ: ಸಂಸದೆ ಸುಮಲತಾ

ಬೆಂಗಳೂರು: 40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು ಕಂಡಿಲ್ಲ ಎಂದು ನಟಿ ಮತ್ತು ಮಂಡ್ಯ ಸಂಸದೆ ಸುಮಲತಾ ಅವರು ಹೇಳಿದ್ದಾರೆ. ಇಂದು ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತ ಗಾಯಕ ಎಸ್‍ಪಿಬಿಯವರು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನ ಕಾರ್ಯಕ್ರಮವನ್ನು ಆಯೋಚಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿದ ಸುಮಲತಾ ಅವರು, ಯುವಜನರು ದುಶ್ಚಟಗಳ ದಾಸರಾಗುವುದು ತಪ್ಪು ಎಂದು ತಿಳಿಸಿದರು. 40 ವರ್ಷಗಳ ಅನುಭವದಲ್ಲಿ ಡ್ರಗ್ಸ್ ಇರೋದು ನಾನು …

Read More »