Breaking News

ಗಡಿಯಲ್ಲಿ ಯುದ್ಧದ ಕಾರ್ಮೋಡ, ಲಡಾಖ್‌ನಲ್ಲಿ ಒಂದು ಲಕ್ಷ ಯೋಧರು!

ನವದೆಹಲಿ : ಇತ್ತೀಚೆಗಷ್ಟೇ ಪೂರ್ವ ಲಡಾಖ್‌ನ ಪ್ಯಾಂಗಾಂಗ್‌ ಸರೋವರದ ದಕ್ಷಿಣ ದಂಡೆಯನ್ನು ವಶಪಡಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದ ಚೀನಾದ ಸೇನೆ ಇದೀಗ ಅಲ್ಲಿ 10 ಸಾವಿರ ಯೋಧರನ್ನು ಜಮಾವಣೆ ಮಾಡಿದೆ. ಅದರೊಂದಿಗೆ ಲಡಾಖ್‌ನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ಗುಂಟ ಚೀನಾ ನಿಯೋಜಿಸಿದ ಸೈನಿಕರ ಸಂಖ್ಯೆ 52 ಸಾವಿರಕ್ಕೆ ಏರಿಕೆಯಾಗಿದೆ. ಭಾರತ ಕೂಡ ಇದಕ್ಕೆ ಸರಿಸಮ ಪ್ರಮಾಣದಲ್ಲೇ ಸೇನೆಯನ್ನು ನಿಯೋಜಿಸಿದ್ದು, ಗಡಿಯಲ್ಲಿ ಯುದ್ಧಸದೃಶ ವಾತಾವರಣ ಇನ್ನಷ್ಟುಕಾವು ಪಡೆದಿದೆ ಎಂದು …

Read More »

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಣ ಕಡಿತ ಘೋರ ಅನ್ಯಾಯ: ಈಶ್ವರ್ ಖಂಡ್ರೆ

ಬೆಂಗಳೂರು : ರಾಜ್ಯ ಬಿಜೆಪಿ ಸರಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಭಾಗದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಆರೋಪಿಸಿದ್ದು, ಬಜೆಟ್ ನಲ್ಲಿ ಹಂಚಿಕೆ ಮಾಡಿದ್ದ ಹಣವನ್ನೂ ಕಡಿತ ಮಾಡಿರುವುದು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.   ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ …

Read More »

ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದ : ಸಿಎಂ

ಕಲಬುರಗಿ:  ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಸೇರಿದಂತೆ ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಇಂದು 73ನೇಯ ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆ ನಗರದ ಎಸ್‍ವಿಪಿ ವೃತ್ತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಪೂಜೆ ಸಲ್ಲಿಸಿ ನಂತರ ಡಿಎಆರ್ ಮೈದಾನದಲ್ಲಿ ಧ್ವಜರೋಹಣ ನೇರವೇರಿಸಿ ಅವರು ಮಾತನಾಡಿದರು.   ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೈದರಾಬಾದ್ ಕರ್ನಾಟಕವನ್ನು ಇಲ್ಲಿನ ಜನತೆಯ ಒತ್ತಾಸೆಯಂತೆ ಕಲ್ಯಾಣ …

Read More »

ಕಲಬುರಗಿಗೆ ಬಂದಿಳಿದ ಸಿಎಂ ಬಿಎಸ್ ವೈ: ಸಂಜೆ ಇಲ್ಲಿಂದಲೇ ದಿಲ್ಲಿ ಪ್ರವಾಸ ಆರಂಭ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ವಿಮಾನ ಮೂಲಕ ಗುರುವಾರ ಕಲಬುರಗಿಗೆ ಬಂದಿಳಿದರು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಭಾಗಿಯಾಗಲು ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೊತೆಗೆ ಉಪ ಮುಖ್ಯಮಂತ್ರಿಗಳು ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಹ ಆಗಮಿಸಿದರು.   ಆರ್ ಸಿ ಡಾ‌.ಎನ್.ವಿ.ಪ್ರಸಾದ, ಐ.ಜಿ.ಪಿ. ಮನೀಷ ಖರ್ಬಿಕರ್, ಡಿಸಿ …

Read More »

ಕೃಷ್ಣರಾಜಸಾಗರ ಜಲಾಶಯಕ್ಕೆ ಭೇಟಿ ನೀಡಿದ ಆಂತರಿಕ ಭದ್ರತಾ ಪಡೆಯ ಎಡಿಜಿಪಿ ಭಾಸ್ಕರ್ ರಾವ್

ಮಂಡ್ಯ: ಆಂತರಿಕ ಭದ್ರತಾ ಪಡೆಯ ಎಡಿಜಿಪಿ ಭಾಸ್ಕರ್ ರಾವ್ ಅವರು ಕೃಷ್ಣರಾಜಸಾಗರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.   ಜಲಾಶಯದ ಭದ್ರತೆ ಬಗ್ಗೆ ಭದ್ರತಾ ಉಸ್ತುವಾರಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಜಲಾಶಯದ ಭದ್ರತೆ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಜಲಾಶಯದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಾಸುದೇವ ಜಲಾಶಯದ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಮಂತ್ರಿ ಹುಟ್ಟುಹಬ್ಬ: …

Read More »

ರಾಜ್ಯ ಸರ್ಕಾರದಿಂದ `ಕಲ್ಯಾಣ ಕರ್ನಾಟಕಕ್ಕೆ’ ಬಂಪರ್ ಗಿಫ್ಟ್

ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಘೋಷಿಸಿದ್ದು, ಇಂದು 73 ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ 1,300 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ರ ಪುತ್ತಳಿಗೆ ಪೂಜೆ ಸಲ್ಲಿಸಿ ಸಿಎಂ ಮಲಾರ್ಪಣೆ ಮಾಡಿದರು. ನಂತರ ಡಿಎಆರ್ ಮೈದಾನದಲ್ಲಿ ದ್ವಜಾರೋಹಣ ನೇರವೇರಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, …

Read More »

ಡಿಜೆ ಹಳ್ಳಿ ಗಲಭೆ ಪೂರ್ವ ನಿಯೋಜಿತವಲ್ಲ: ವರದಿ

ಬೆಂಗಳೂರು: ನಗರದ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಕೋಮು ಪ್ರೇರಿತವಾಗಲಿ, ಪೂರ್ವ ನಿಯೋಜಿತವಾಗಲಿ ಅಲ್ಲ. ಹಿಂದೂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಗಲಭೆ ನಡೆದಿಲ್ಲ. ಇದೊಂದು ಸಹಜವಾಗಿ ನಡೆದ ಘಟನೆ ಎಂದು ಬೆಂಗಳೂರು ನಾಗರೀಕ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಸತ್ಯಶೋಧನಾ ವರದಿ ಅಭಿಪ್ರಾಯಪಟ್ಟಿದೆ.   ನಿನ್ನೆಯಷ್ಟೇ ವಿಡಿಯೋ ಸಂವಾದದ ಮೂಲಕ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಬಿಡುಗಡೆ ಮಾಡಿದ ವರದಿಯಲ್ಲಿ ಘಟನೆಗೆ ಕಾರಣವಾಕ ಅಂಶ, …

Read More »

ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7.39 ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ

ಬೆಳಗಾವಿ: ಬೈಲಹೊಂಗಲ-ಬೆಳಗಾವಿ ರಾಜ್ಯ ಹೆದ್ದಾರಿಯ ಗದ್ದಿಕರವಿನಕೊಪ್ಪ ಕ್ರಾಸ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 7.39 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಬೈಲಹೊಂಗಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿಯ ಪಾತೇಶಾ ನಗರದ ಜಮಾಲಸಾಬ್ ಸತ್ತರಖಾನ ಪಠಾಣ, ದಿಲಾವರಖಾನ ಸತ್ತಾರಖಾನ ಪಠಾಣ ಹಾಗೂ ಪಡಿತರ ಅಕ್ಕಿಯ ಮಾಲೀಕ ಹುಬ್ಬಳ್ಳಿಯ ಬಿಡನಾಳನ ಮಂಜುನಾಥ ವಿರೂಪಾಕ್ಷಪ್ಪ ಹರ್ಲಾಪುರ ಎಂಬವರನ್ನು ಬಂಧಿಸಲಾಗಿದೆ. ಲಾರಿಯಲ್ಲಿ ಅಕ್ರಮವಾಗಿ 5 ಲಕ್ಷ ರೂ. ಮೌಲ್ಯದ 50 ಕೆ.ಜಿ. ತೂಕದ 500 ಪಡಿತರ …

Read More »

‘ಜಮೀರ್ ಒಬ್ರೆ ಕ್ಯಾಸಿನೋಗೆ ಹೋಗ್ತಿರಲಿಲ್ಲ, ಜೊತೆಗೆ ಇವ್ರೆಲ್ಲಾ ಇರ್ತಿದ್ರು’

ನಾಗಮಂಗಲ : ಕರ್ನಾಟಕದ ದುಡ್ಡೆಲ್ಲಾ ಶ್ರೀಲಂಕಾದ ಕ್ಯಾಸಿನೋಗೆ ಹೋಗುತ್ತಿದೆ. ರಾಜ್ಯದಲ್ಲಿ ಹೆಚ್ಚು ದುಡ್ಡು ಮಾಡಿ ಕ್ಯಾಸಿನೋದಲ್ಲಿ ಕಳೆದುಕೊಳ್ಳುತ್ತಿದ್ದಾರೆ, ಅದಕ್ಕಾಗಿ ಇಲ್ಲಿನ ದುಡ್ಡು ಇಲ್ಲೆ ಉಳಿಯಬೇಕಾದರೆ ಕ್ಯಾಸಿನೋ ಕರ್ನಾಟಕದಲ್ಲೇ ಆರಂಭಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡುವುದಾಗಿ ಶಾಸಕ ಸುರೇಶ್‌ಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣವೊಂದಿದ್ದರೆ ಪ್ರಪಂಚದಲ್ಲಿ ಸಿಗುವ ಎಲ್ಲ ವಸ್ತುಗಳು ಶ್ರೀಲಂಕಾದ ಕ್ಯಾಸಿನೋದಲ್ಲಿಯೇ ಸಿಗುತ್ತದೆ. ಇಲ್ಲಿ ಯಾರ್ಯಾರು ಹೆಚ್ಚಿಗೆ ದುಡ್ಡು ಮಾಡಿದ್ದಾರೋ ಅವರೆಲ್ಲರೂ ಅಲ್ಲಿ ಹೋಗಿ ದುಡ್ಡು ಕಳೆಯುತ್ತಿದ್ದಾರೆ. …

Read More »

ಚೌಕಾಬಾರ ಜಾಗ ಇದೀಗ ವಾಚನಾಲಯ; ವಾಹನ ಚಾಲಕರ ಟೈಂಪಾಸ್​ಗೆ ಸಚಿವರಿಂದ ಒಂದೊಳ್ಳೆ ಐಡಿಯಾ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳ ವಾಹನ ಚಾಲಕರಿಗೆ ಕಾಲ ಕಳೆಯುವುದೇ ಕಷ್ಟ! ಬೆಳಗ್ಗೆ ಕಚೇರಿಗೆ ಹೋಗುವ ಅಧಿಕಾರಿಗಳ ಬರುವುದು ಸಂಜೆಯವರೆಗೆ. ಅಲ್ಲಿಯ ವರೆಗೆ ಆ ವಾಹನಗಳ ಚಾಲಕರು ಟೈಮ್ ಪಾಸ್ ಮಾಡುವುದಕ್ಕೆ ವಿವಿಧ ರೀತಿ ಆಟ ಆಡುತ್ತಾರೆ. ಇದನ್ನು ಗಮನಿಸಿದ ಸಚಿವರು ಇವರಿಗೆ ಒಂದೊಳ್ಳೆ ಐಡಿಯಾ ಕೊಟ್ಟಿದ್ದಾರೆ. ಕೇವಲ ಐಡಿಯಾ ಮಾತ್ರವಲ್ಲ ಇದನ್ನು ಜಾರಿಗೊಳಿಸಿಯೂ ಸೈ ಎನಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು, …

Read More »