Breaking News

ನೋಟು ಅಮಾನೀಕರಣದ ನಂತರ ದೇಶದಲ್ಲಿ ಭ್ರಷ್ಟಾಚಾರ ತಗ್ಗಿದ್ದು, ಕಪ್ಪ ಹಣದ ಬಳಕೆ ನಿಯಂತ್ರಣದಲ್ಲಿದೆ:ಸಚಿವ ಡಿ.ವಿ.ಸದಾನಂದಗೌಡ

Spread the love

ಬೆಂಗಳೂರು, ಫೆ.22- ನೋಟು ಅಮಾನೀಕರಣದ ನಂತರ ದೇಶದಲ್ಲಿ ಭ್ರಷ್ಟಾಚಾರ ತಗ್ಗಿದ್ದು, ಕಪ್ಪ ಹಣದ ಬಳಕೆ ನಿಯಂತ್ರಣದಲ್ಲಿದೆ ಎಂದು ಕೇಂದ್ರ ರಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ನಗರದ ಎಫ್‍ಕೆಸಿಸಿಐನಲ್ಲಿ ಭಾರತ ವೆಚ್ಚ ಲೆಕ್ಕಿಗರ ಸಂಸ್ಥೆಯ ವಾರ್ಷಿಕೋತ್ಸವ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐದು ಟ್ರಿಲಿಯನ್ ಆರ್ಥಿಕತೆಯ ಗುರಿಯೊಂದಿಗೆ ಮುನ್ನುಗ್ಗುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆರ್ಥಿಕತೆಯ ಶಿಸ್ತು ತಹಬದಿಗೆ ಬರುತ್ತಿದೆ ಎಂದರು. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ನೋಟು ಅಮಾನೀಕರಣ ಮಾಡುವುದು ಸುಲಭದ ಮಾತಲ್ಲ. ಅಂತಹ ದಿಟ್ಟ ನಿರ್ಧಾರ ತೆಗೆದುಕೊಂಡ ಮೋದಿಯವರು ದೇಶದ ಆರ್ಥಿಕತೆಗೆ ಹೊಸ ಆಯಾಮ ನೀಡಿದರು. ಈ ಮೊದಲು ನಡೆಯುತ್ತಿದ್ದ ಕಪ್ಪು ಹಣದ ವಹಿವಾಟುಗಳು ಇದರಿಂದ ತಗ್ಗಿದವು. ಭ್ರಷ್ಟಾಚರ ಕೂಡ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.

ಕಳೆದ ಐದೂವರೆ ವರ್ಷದಲ್ಲಿ ನಮ್ಮ ಸರ್ಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ನಡೆದಿಲ್ಲ. ಇದಕ್ಕೆ ಕಾರಣ ಮೋದಿಯವರ ದಿಟ್ಟ ನಡವಳಿಕೆಗಳು. ಹಲವಾರು ಸವಾಲುಗಳು ಎದುರಿಸಿ ದೇಶದ ಆರ್ಥಿಕತೆಯನ್ನು ಶಿಸ್ತಿನ ಪತದಲ್ಲಿ ತರುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ ಎಂದು ತಿಳಿಸಿದರು. ಜಿಎಸ್‍ಟಿ ನಂತರವಂತೂ ವ್ಯಾಪಾರಿಗಳಿಗೂ ಅನುಕೂಲವಾಗಿದೆ. ತೆರಿಗೆ ಸಂಗ್ರಹವೂ ಸುಧಾರಣೆಗೊಂಡಿದೆ.

ವ್ಯಾಪಾರಿಗಳಿಗೆ ಈ ಮೊದಲು ಇದ್ದ ಹಲವಾರು ಅಡೆತಡೆಗಳು ನಿವಾರಣೆಗೊಂಡಿವೆ. ನಿಯಮಾವಳಿಗಳು ಸಡಿಲವಾಗಿವೆ. ಇದರಿಂದ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ವ್ಯಾಪಾರೋದ್ಯಮಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು. ಡಿಜಿಟಲ್ ಇಂಡಿಯಾ ಭಾರತದ ಅಭಿವೃದ್ಧಿಯ ದಿಕ್ಕನ್ನೇ ಬದಲಾವಣೆ ಮಾಡಿದೆ. ದಿನೇ ದಿನೇ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ.

ವಿಶ್ವದಲ್ಲಿಂದು ಭಾರತಕ್ಕೆ ತನ್ನದೇ ಆದ ಸ್ಥಾನಮಾನಗಳಿವೆ. ಕಳೆದ ಐದೂವರೆ ವರ್ಷದಲ್ಲಿ ಮೋದಿ ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.ವಿಶ್ವದಲ್ಲಿ ಅಗ್ರಮಾನ್ಯ ರಾಷ್ಟ್ರವಾಗಲು ದಾಪುಗಾಲು ಇಡುತ್ತಿದೆ ಎಂದು ಹೇಳಿದರು. ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಬೆಂಗಳೂರು ಅಧ್ಯಕ್ಷ ಎಚ್.ಆರ್.ಶಿವಪಾಲ್, ಮೈಸೂರು ಘಟಕದ ಅಧ್ಯಕ್ಷ ಎಂ.ಅಶೋಕ್ ಕುಮಾರ್, ವಿಶ್ವನಾಥ್ ಆರ್.ಭಟ್, ಎಫ್‍ಕೆಸಿಸಿಐ ಅಧ್ಯಕ್ಷ ಜನಾರ್ಧನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಮುನಿರತ್ನಗೆ ಜಾಮೀನು ನೀಡದಿರಲು ಮನವಿ

Spread the love ಮಂಡ್ಯ: ‘ಶಾಸಕ ಮುನಿರತ್ನ ಅವರು ದಲಿತ ನಿಂದನೆ ಮಾಡಿರುವುದು ಸಾಕ್ಷಿ ಸಮೇತ ಸಿಕ್ಕಿರುವುದರಿಂದ ಪರಿಶಿಷ್ಟ ಜಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ