Breaking News
Home / ಜಿಲ್ಲೆ / ನಿಪ್ಪಾಣಿ “ಜನರು ಆತಂಕಪಡಬಾರದು, ಸರ್ಕಾರ ನಿಮ್ಮೊಂದಿಗಿದೆ”

ನಿಪ್ಪಾಣಿ “ಜನರು ಆತಂಕಪಡಬಾರದು, ಸರ್ಕಾರ ನಿಮ್ಮೊಂದಿಗಿದೆ”

Spread the love

ನಿಪ್ಪಾಣಿ
“ಜನರು ಆತಂಕಪಡಬಾರದು, ಸರ್ಕಾರ ನಿಮ್ಮೊಂದಿಗಿದೆ”

ನಿಪ್ಪಾಣಿ ನಗರ ಸಭೆಯಲ್ಲಿ ಕೊರೋನಾ ವೈರಸ್ ಕುರಿತು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಸಭೆ ನಡೆಸಿ, ಸಭೆ ಉದ್ದೇಶಿಸಿ ಮಾತನಾಡಿದರು.

ನಾವೆಲ್ಲರೂ ನಿಮ್ಮೊಂದಿಗಿದ್ದೇವೆ, ಜನರು ಯಾವುದೇ ಕಾರಣಕ್ಕೂ ಹೆದರಬಾರದು ,ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯ ವಸ್ತು ಖರೀದಿ ಸಮಯಗಳಲ್ಲಿ ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ತರಕಾರಿ ಗಾಡಿಗಳು , ಅಂಗಡಿ ಸಾಮಾನುಗಳು ಎಲ್ಲ ವಾರ್ಡ್ ಗಳ ಮನೆಗಳಿಗೆ ಬರುವಂತೆ ವ್ಯವಸ್ಥೆ ಮಾಡಲಾಗುವುದು. ಆತಂಕಗೊಂಡು ವಸ್ತುಗಳನ್ನು ಖರೀದಿಸುವುದು ಬೇಡ. ಅಗತ್ಯ ವಸ್ತುಗಳು ಎಲ್ಲರಿಗೂ ಸಿಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ಸಿಪಿಐ ಶ್ರೀ ಸಂತೋಷ ಸತ್ಯನಾಯಕ, ವೈದ್ಯಕೀಯ ಅಧಿಕಾರಿ ಶ್ರೀಮತಿ ಡಾ. ಸೀಮಾ ಗುಂದ್ಯಾಳೆ, ತಹಸೀಲ್ದಾರರಾದ ಶ್ರೀ ಪ್ರಕಾಶ ಗಾಯಕವಾಡ, ಮಹಾವೀರ ಬೋರಣ್ಣವರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ