ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ಹೊಸ ಹೊಸ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಲೇ ಇರುತ್ತೆ. ಕೆಲವೊಂದು ಚಾಲೆಂಜ್‍ಗಳು ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ. ಆದೇ ಪಟ್ಟಿಗೆ ಈಗ ಪಿಲ್ಲೋ ಚಾಲೆಂಜ್ ಕೂಡ ಸೇರಿಕೊಂಡಿದೆ.
ಸದ್ಯ ಲಾಕ್‍ಡೌನ್ ಅಲ್ಲಿ ‘ಬಿ ದ ರಿಯಲ್ ಮ್ಯಾನ್ ಚಾಲೆಂಜ್’, ‘ಡಾಲ್ಗೊನಾ ಕಾಫಿ ಚಾಲೆಂಜ್’, ‘ಹೋಂ ಗಾರ್ಡನ್ ಚ್ಯಾಲೆಂಜ್’ ಹೀಗೆ ಅನೇಕ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಿದೆ. ಈ ಮಧ್ಯೆ ಸಿಕ್ಕಾಪಟ್ಟೆ ವೈರಲ್ ಆಗಿರೋದು ಪಿಲ್ಲೋ ಚಾಲೆಂಜ್. ಈ ಚಾಲೆಂಜ್‍ಗೆ ಕೇವಲ ಯುವಕ, ಯುವತಿಯರು, ಮಹಿಳೆಯರು ಮಾತ್ರವಲ್ಲಿ ಸೆಲೆಬ್ರಿಟಿಗಳು, ಪುರುಷರು ಹಾಗೂ ಮಕ್ಕಳು ಕೂಡ ಫಿದಾ ಆಗಿದ್ದಾರೆ. ಇವರೆಲ್ಲಾ ಪಿಲ್ಲೋ ಚಾಲೆಂಜ್ ಸ್ವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.