Home / ಜಿಲ್ಲೆ / ದೂರದಿಂದಲೇ ಒಂದಾದ ಪ್ರೇಮಿಗಳು – ಬೆಂಗ್ಳೂರಿನ ಗಿರಿನಗರ ಠಾಣೆಯಲ್ಲೊಂದು ಅಪರೂಪದ ದೃಶ್ಯ

ದೂರದಿಂದಲೇ ಒಂದಾದ ಪ್ರೇಮಿಗಳು – ಬೆಂಗ್ಳೂರಿನ ಗಿರಿನಗರ ಠಾಣೆಯಲ್ಲೊಂದು ಅಪರೂಪದ ದೃಶ್ಯ

Spread the love

ಬೆಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಅನೇಕ ಮದುವೆ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಆದರೂ ಕೆಲವು ಜೋಡಿಗಳು ಲಾಕ್‍ಡೌನ್ ನಿಯಮವನ್ನು ಪಾಲಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಕೊರೊನಾ ಲಾಕ್‍ಡೌನ್ ನಡುವೆಯೇ ಪ್ರೇಮಿಗಳಿಬ್ಬರು ಮದುವೆಯಾಗಿದ್ದಾರೆ.

ಮುರುಗನ್ ಮತ್ತು ಮೇಘಶ್ರೀ ಮದುವೆಯಾದ ಪ್ರೇಮಿಗಳು. ಇವರಿಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮರುಗನ್ ಮತ್ತು ಮೇಘಶ್ರೀ ಮನೆಯಿಂದ ಓಡಿ ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ವಿವಾಹವಾದ ನಂತರ ನವ ಜೋಡಿ ಪೊಲೀಸ್ ಠಾಣೆಗೆ ಬಂದಿದ್ದಾರೆ.

ಮರುಗನ್ ಮತ್ತು ಮೇಘಶ್ರಿ ಮದುವೆ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಯಾಗಿದ್ದಾರೆ. ಅಷ್ಟೇ ಅಲ್ಲದೇ ಮಾಸ್ಕ್ ಹಾಕಿಕೊಂಡು ದೂರ ನಿಂತುಕೊಂಡೇ ಪ್ರೇಮಿಗಳು ಒಂದಾಗಿದ್ದಾರೆ. ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಗೆ ಈ ನವಜೋಡಿ ಬಂದಿದ್ದು, ಠಾಣೆಯಲ್ಲಿ ದೂರ-ದೂರ ನಿಂತಿರುವುದನ್ನು ಕಾಣಬಹುದಾಗಿದೆ. ಸದ್ಯಕ್ಕೆ ಪೋಷಕರ ವಿರೋಧ ಹಿನ್ನೆಲೆಯಲ್ಲಿ ಪೊಲೀಸರ ಬಳಿ ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಗುರುವಾರ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕೇವಲ ನಾಲ್ವರ ಸಮ್ಮುಖದಲ್ಲಿ ಜೋಡಿಯೊಂದು ಮದುವೆಯಾಗಿದೆ. ಇನ್ನೂ ಮೈಸೂರಿನಲ್ಲಿ ಜೋಡಿಯೊಂದು ಮಾಸ್ಕ್ ಧರಿಸಿಕೊಂಡು ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ